ನ್ಯೂಜಿಲೆಂಡ್​ ವಿರುದ್ಧ ಗೆದ್ದು ಬೀಗಿದ ಭಾರತ ತಂಡ; ಸೆಮಿಫೈನಲ್​ ಗೆಲ್ಲೋಕೆ ಪ್ಲಾನ್​​

author-image
Ganesh Nachikethu
Updated On
ನ್ಯೂಜಿಲೆಂಡ್​ ವಿರುದ್ಧ ಗೆದ್ದು ಬೀಗಿದ ಭಾರತ ತಂಡ; ಸೆಮಿಫೈನಲ್​ ಗೆಲ್ಲೋಕೆ ಪ್ಲಾನ್​​
Advertisment
  • ಇಂದು ನಡೆದ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ನಾಕೌಟ್​ ಪಂದ್ಯ!
  • ನ್ಯೂಜಿಲೆಂಡ್​ ತಂಡದ ವಿರುದ್ಧ ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು
  • ಬರೋಬ್ಬರಿ 45 ರನ್​ಗಳಿಂದ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಇಂದು ನಡೆದ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ನಾಕೌಟ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಟೀಮ್​ ಇಂಡಿಯಾ 45 ರನ್​ಗಳಿಂದ ಭರ್ಜರಿ ಜಯ ಸಾಧಿಸಿದೆ.

ಭಾರತದ 250 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ನ್ಯೂಜಿಲೆಂಡ್​​ಗೆ ಆರಂಭದಲ್ಲೇ ಶಾಕ್​ ಎದುರಾಯ್ತು. ಸಾಲಿಡ್​ ಫಾರ್ಮ್​ನಲ್ಲಿದ್ದ ರಚಿನ್​ ರವೀಂದ್ರ ಬ್ಯಾಟ್​ ಸೌಂಡ್​​ ಮಾಡಲು ಟೀಮ್​ ಇಂಡಿಯಾ ಬಿಡಲಿಲ್ಲ. ರಚಿನ್​ ರವಿಂದ್ರಗೆ ಹಾರ್ದಿಕ್​ ಪಾಂಡ್ಯ ಪೆವಿಲಿಯನ್​ ದಾರಿ ತೋರಿಸಿದ್ರು.

ಸ್ಪಿನ್​ಗೆ ಒದ್ದಾಡಿದ ನ್ಯೂಜಿಲೆಂಡ್​!

ಇನ್ನೊರ್ವ ಓಪನರ್​​ ವಿಲ್​ ಯಂಗ್​​ ಕ್ರಿಸ್​ ಕಚ್ಚಿ ನಿಲ್ಲೋ ಲೆಕ್ಕಾಚಾರದಲ್ಲಿದ್ರು. ಆದ್ರೆ, 3 ಬೌಂಡರಿ ಸಿಡಿಸಿ ಬಿಗ್​ ಇನ್ನಿಂಗ್ಸ್​ ಕಟ್ಟೋ ಸೂಚನೆ ನೀಡಿದ ಇವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ವರುಣ್​ ಚಕ್ರವರ್ತಿ ಸ್ಪಿನ್​ಗೆ ಸ್ಟನ್​ ಆದ ಯಂಗ್​ ಕ್ಲೀನ್​ಬೋಲ್ಡ್​ ಆದ್ರು.

ಡೇಂಜರಸ್​ ಡೇರಿಲ್​ ಮಿಚೆಲ್​ ಅತಿಯಾದ ಎಚ್ಚರಿಕೆಯ ಆಟವಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರು. ಕುಲ್​​ದೀಪ್​ ಯಾದವ್​ ಕೈಚಳಕಕ್ಕೆ ದಂಗಾದ ಮಿಚೆಲ್​ ಡಗೌಟ್​ ಸೇರಿದ್ರು. ವಿಕೆಟ್​ ಕೀಪರ್​ ಟಾಮ್​ ಲಾಥಮ್​​ ಆಟಕ್ಕೆ ರವೀಂದ್ರ ಜಡೇಜಾ ಫುಲ್​​ ಸ್ಟಾಫ್​ ಇಟ್ರು.

ಅರ್ಧಶತಕ ಸಿಡಿಸಿ ಮಿಂಚಿದ ಕೇನ್​ ವಿಲಿಯಮ್ಸನ್​

ಒಂದೆಡೆ ವಿಕೆಟ್​ ಬೀಳುತ್ತಲೇ ಇದ್ರೆ ಇನ್ನೊಂದೆಡೆ ಅನುಭವಿ ಕೇನ್​ ವಿಲಿಯಮ್ಸನ್​ ಹೋರಾಟ ನಡೆಸಿದರು. ಟೀಮ್​ ಇಂಡಿಯಾ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಿದ ವಿಲಿಯಮ್ಸನ್​​ ಸಾಲಿಡ್​​ ಇನ್ನಿಂಗ್ಸ್​ ಕಟ್ಟಿದ್ರು. ಎಚ್ಚರಿಕೆ ಆಟದ ಮೊರೆ ಹೋದ ವಿಲಿಯಮ್​ಸನ್​ ಅರ್ಧಶತಕ ಸಿಡಿಸಿ ಮಿಂಚಿದ್ರು.

ಬ್ಯಾಕ್​ ಟು ಬ್ಯಾಕ್​ ಶಾಕ್​ ಕೊಟ್ಟ ವರುಣ್​ ಚಕ್ರವರ್ತಿ!

ಒಂದೆಡೆ ವಿಲಿಯಮ್ಸನ್​ ಸಾಲಿಡ್​ ಆಟವಾಡ್ತಿದ್ರೆ, ಇನ್ನೊಂದೆಡೆ ವರುಣ್​ ಚಕ್ರವರ್ತಿ ಕಿವೀಸ್​ಗೆ ಬ್ಯಾಕ್​ ಟು ಬ್ಯಾಕ್​​ ಶಾಕ್​ ನೀಡಿದ್ರು. ಗ್ಲೇನ್​ ಫಿಲಿಪ್ಸ್​, ಮಿಚೆಲ್​ ಬ್ರೇಸ್​ವೆಲ್​​ನ ಎಲ್​ಬಿ ಬಲೆಗೆ ಕೆಡವಿದ್ರು. ಚಕ್ರವರ್ತಿಯ ಸ್ಪಿನ್​ ಮ್ಯಾಜಿಕ್​ಗೆ ಸ್ಟನ್​ ಆಗಿ ಪೆವಿಲಿಯನ್​ ಸೇರಿದ್ರು.

ನ್ಯೂಜಿಲೆಂಡ್​ ತಂಡದ ಪ್ರಮುಖ 6 ವಿಕೆಟ್​ಗಳು ಉರುಳಿದ್ರೂ, ಕೇನ್​ ವಿಲಿಯಮ್ಸನ್​ ಭಾರತದ ಪಾಲಿಗೆ ಡೇಂಜರಸ್​ ಎನಿಸಿದ್ರು. 120 ಎಸೆತ ಎದುರಿಸಿ 7 ಬೌಂಡರಿ ಸಹಿತ 81 ರನ್​ಗಳಿಸಿದ್ರು. ಶತಕದತ್ತ ಮುನ್ನುಗುತ್ತಿದ್ದ ವಿಲಿಯಮ್​ಸನ್ ಅಕ್ಷರ್​ ಪಟೇಲ್​ ಬೌಲಿಂಗ್​ ಮುನ್ನುಗ್ಗಿ ಹೊಡೆಯಲು ಹೋಗಿ ಸ್ಟಂಪ್​ ಔಟ್​ ಆದ್ರು.

ಅರಬ್ಬರ ನಾಡಲ್ಲಿ ವರುಣ್​ ಚಕ್ರವರ್ತಿಯ ದರ್ಬಾರ್​​!

2 ಸಿಕ್ಸರ್​, 1 ಬೌಂಡರಿ ಸಿಡಿಸಿದ್ದ ಕಿವೀಸ್​ ಕ್ಯಾಪ್ಟನ್​ ಮಿಚೆಲ್​​ ಸ್ಯಾಂಟ್ನೆರ್​​, ವೇಗಿ ಮ್ಯಾಟ್​ ಹೆನ್ರಿ ವರುಣ್​ ಚಕ್ರವರ್ತಿ ಸ್ಪಿನ್​ ಮುಂದೆ ಮಂಡಿಯೂರಿದ್ರು. ಮ್ಯಾಟ್​ ಹೆನ್ರಿಗೆ ಪೆವಿಲಿಯನ್​ ದಾರಿ ತೋರಿಸಿದ ವರುಣ್​ ಚಕ್ರವರ್ತಿ 5ನೇ ವಿಕೆಟ್​ ಬೇಟೆಯಾಡಿದ್ರು.

45.3ನೇ ಓವರ್​ನಲ್ಲಿ ವಿಲಿಯಮ್​​ ರೋರ್ಕ್​​ನ ಕುಲ್​​ದೀಪ್​ ಕ್ಲೀನ್​ಬೋಲ್ಡ್​ ಮಾಡೋದ್ರೊಂದಿಗೆ, ಟೀಮ್​ ಇಂಡಿಯಾ ಗೆಲುವು ಸಾಧಿಸಿತು. 205 ರನ್​ಗಳಿಗೆ ಕಿವೀಸ್​ ಪಡೆ ಆಲೌಟ್​ ಆದ್ರೆ, ಟೀಮ್​ ಇಂಡಿಯಾ 44 ರನ್​ಗಳ ಜಯ ಕಂಡಿತು.

ಇದನ್ನೂ ಓದಿ:ಕನ್ನಡ ಸಿನಿಮಾ ಸ್ಟಾರ್ಸ್​ಗೆ ಡಿಸಿಎಂ ವಾರ್ನಿಂಗ್; ನಟಿ ರಮ್ಯಾ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment