newsfirstkannada.com

ಟಿ20 ವಿಶ್ವಕಪ್​ನಲ್ಲೇ ಹೊಸ ಇತಿಹಾಸ; ಪಾಕ್​​ ವಿರುದ್ಧ ಭಾರತ ತಂಡಕ್ಕೆ ರೋಚಕ ಜಯ

Share :

Published June 10, 2024 at 1:13am

    2024ರ ಟಿ20 ವಿಶ್ವಕಪ್​ನಲ್ಲೇ ಟೀಮ್​ ಇಂಡಿಯಾ ಹೊಸ ಇತಿಹಾಸ

    ಪಾಕ್​ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ತಂಡ

    ರೋಹಿತ್​ ಶರ್ಮಾ ನೇತೃತ್ವದ ಭಾರತ ತಂಡಕ್ಕೆ 6 ರನ್​ಗಳ ಜಯ!

ಇಂದು ನ್ಯೂಯಾರ್ಕ್‌ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕ್​ ವಿರುದ್ಧ ಟೀಮ್​ ಇಂಡಿಯಾ ರೋಚಕ ಗೆಲುವು ಸಾಧಿಸಿದೆ.

ಟೀಮ್​ ಇಂಡಿಯಾ ನೀಡಿದ 119 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕ್​ ತಂಡ 20 ಓವರ್​ಗಳಲ್ಲಿ 7 ವಿಕೆಟ್​​ ನಷ್ಟಕ್ಕೆ 113 ರನ್​ ಗಳಿಸಿದೆ. ಈ ಮೂಲಕ 6 ರನ್​ನಿಂದ ಹೀನಾಯ ಸೋಲು ಕಂಡಿದೆ. ಪಾಕ್​ ಪರ ಮೊಹಮ್ಮದ್​ ರಿಜ್ವಾನ್​ 31, ಬಾಬರ್​ 13, ಉಸ್ಮನ್​ ಖಾನ್​ 13, ಫಕರ್​ ಜಮಾನ್​​ 13, ಇಮದ್​ ವಾಸೀಮ್​​ 15 ರನ್​ ಗಳಿಸಿದ್ರು.

ಇನ್ನು, ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 12 ಬಾಲ್​​ನಲ್ಲಿ 13 ರನ್​ ಗಳಿಸಿ ಶಾಹೀನ್​ ಅಫ್ರಿದಿ ಬೌಲಿಂಗ್​ನಲ್ಲಿ ಕ್ಯಾಚ್​ ಕೊಟ್ಟರು. ವಿರಾಟ್​ ಕೊಹ್ಲಿ ಕೂಡ 3 ಬಾಲ್​ನಲ್ಲಿ 4 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಹಾಗಾಗಿ ಟೀಮ್​ ಇಂಡಿಯಾಗೆ ಆರಂಭಿಕ ಆಘಾತ ಆಗಿತ್ತು.

ಕೊಹ್ಲಿ, ರೋಹಿತ್​ ಔಟಾದ್ರೂ ಪಂತ್​​ ಮಾತ್ರ ತನ್ನ ಲಕ್​ನಿಂದಲೇ ಬಚಾವ್​ ಆಗಿದ್ದಾರೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಾರಿ ಪಂತ್​​ ಕ್ಯಾಚ್​​ ಅನ್ನು ಪಾಕ್​ ಆಟಗಾರರು ಕೈ ಚೆಲ್ಲಿದ್ರು. ಹಾಗಾಗಿ ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಬ್ಯಾಟ್​​ ಬೀಸಿದ ಪಂತ್​ 31 ಬಾಲ್​ಗೆ 42 ರನ್​ ಚಚ್ಚಿದ್ರು. ಬರೋಬ್ಬರಿ 6 ರನ್​​ ಬಾರಿಸಿದ್ರು. ಇವರಿಗೆ ಸಾಥ್​ ನೀಡಿದ್ದ ಅಕ್ಷರ್​ ಪಟೇಲ್​ 1 ಸಿಕ್ಸರ್​​, 2 ಫೋರ್​ ಸಮೇತ 20 ರನ್​ ಸಿಡಿಸಿದ್ರು. ಟೀಮ್​ ಇಂಡಿಯಾ 19 ಓವರ್​ಗೆ 119 ರನ್​ಗೆ ಆಲೌಟ್​ ಆಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಿ20 ವಿಶ್ವಕಪ್​ನಲ್ಲೇ ಹೊಸ ಇತಿಹಾಸ; ಪಾಕ್​​ ವಿರುದ್ಧ ಭಾರತ ತಂಡಕ್ಕೆ ರೋಚಕ ಜಯ

https://newsfirstlive.com/wp-content/uploads/2024/06/IND-vs-PAK-1.jpg

Load More