ಲಂಕಾ ವಿರುದ್ಧ ಗೆದ್ದು ಬೀಗಿದ ಭಾರತ; ಕೋಚ್​​ ಗಂಭೀರ್​​ಗೆ ಭರ್ಜರಿ ಗಿಫ್ಟ್​ ಕೊಟ್ಟ ಕ್ಯಾಪ್ಟನ್​​ ಸೂರ್ಯ

author-image
Ganesh Nachikethu
Updated On
31ರನ್​ ಅಂತರದಲ್ಲಿ 7 ವಿಕೆಟ್ ಬೇಟೆ.. ಅದ್ಭುತ ಆರಂಭ ಕಂಡರೂ ಲಂಕನ್ನರ ಕಟ್ಟಿಹಾಕಿದ್ದು ಈ ಆಟಗಾರರು..!
Advertisment
  • 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ..!
  • 2-0 ಅಂತರದಿಂದ ಶ್ರೀಲಂಕಾ ಟೀಮ್​​ ವಿರುದ್ಧ ಟಿ20 ಸರಣಿ ಗೆದ್ದ ಭಾರತ ತಂಡ
  • ಮುಖ್ಯ ಕೋಚ್​​ ಗೌತಮ್​ ಗಂಭೀರ್​ಗೆ ಇದು ಮೊದಲ ಟಿ20 ಸರಣಿ ಗೆಲುವು

ಇಂದು ಪಲ್ಲೆಕೆಲೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. 3 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್​ ಇಂಡಿಯಾ 2-0 ಅಂತರದಿಂದ ಸೀರೀಸ್​ ಗೆದ್ದಿದೆ.

ಭಾರತ ತಂಡದ ಹೊಸ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​​ಗೆ ಇದು 2ನೇ ಟಿ20 ಸರಣಿ ಗೆಲುವಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್​ ಅವರಿಗೂ ಇದು ಮೊದಲ ಟಿ20 ಸರಣಿ ಗೆಲುವು ಅನ್ನೋದು ವಿಶೇಷ.

ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ನಿಗದಿತ 20 ಓವರ್​ನಲ್ಲಿ 9 ವಿಕೆಟ್​ ನಷ್ಟಕ್ಕೆ 161 ರನ್​​ ಕಲೆ ಹಾಕಿತ್ತು. ಈ ಮೂಲಕ ಟೀಮ್​ ಇಂಡಿಯಾಗೆ 162 ರನ್​​​ಗಳ ಗುರಿ ನೀಡಿತ್ತು. ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡಿಎಲ್​ಎಸ್​​ ಮೆಥೆಡ್​​ ಪ್ರಕಾರ ಟೀಮ್​ ಇಂಡಿಯಾಗೆ 8 ಓವರ್​ಗಳಲ್ಲಿ 78 ರನ್​​ಗಳ ಗುರಿ ಕೊಟ್ಟಿತ್ತು.

ಡಿಎಲ್​​ಎಸ್​ ಮೆಥೆಡ್​ ಪ್ರಕಾರ ಟೀಮ್​ ಇಂಡಿಯಾಗೆ 78 ರನ್​​ಗಳ ಟಾರ್ಗೆಟ್​​

ಇನ್ನು, 78 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಸಂಜು ಸ್ಯಾಮ್ಸನ್​ ಡಕೌಟ್​ ಆದರು. ಕ್ರೀಸ್​ನಲ್ಲೇ ಕೊನೆವರೆಗೂ ನಿಂತು ಆಡಿದ ಯಶಸ್ವಿ ಜೈಸ್ವಾಲ್​ ಕೇವಲ 15 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ ಸಮೇತ 30 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ಕ್ಯಾಪ್ಟನ್​ ಸೂರ್ಯ 12 ಬಾಲ್​ನಲ್ಲಿ 1 ಸಿಕ್ಸರ್​​, 4 ಫೋರ್​ ಸಮೇತ 26 ರನ್​​ ಸಿಡಿಸಿದ್ರು.

ನಂತರ ಸ್ಟಾರ್​ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರು ಕೇವಲ 9 ಬಾಲ್​ನಲ್ಲಿ 3 ಫೋರ್​, 1 ಸಿಕ್ಸರ್​ನೊಂದಿಗೆ 22 ರನ್​ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಟೀಮ್​ ಇಂಡಿಯಾ ಕೇವಲ 6.3 ಓವರ್​ನಲ್ಲಿ 81 ರನ್​ ಗಳಿಸಿ 7 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment