newsfirstkannada.com

4ನೇ ಟೆಸ್ಟ್ ಪಂದ್ಯವನ್ನೂ ಗೆದ್ದು ಬೀಗಿದ ರೋಹಿತ್ ಪಡೆ; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ..!

Share :

Published February 26, 2024 at 1:42pm

  2ನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ಗೆ ಮರ್ಮಾಘಾತ ನೀಡಿದ ಅಶ್ವಿನ್

  ಎರಡೂ ಇನ್ನಿಂಗ್ಸ್​ನಲ್ಲಿ ಒಟ್ಟು ಐದು ವಿಕೆಟ್ ಕಿತ್ತ ಸ್ಪಿನ್ ಮಾಂತ್ರಿಕ

  ಸಿಕ್ಕ ಅವಕಾಶ ಬಳಸಿಕೊಂಡ ಧ್ರುವ ಜುರೇಲ್, ಸೊಗಸಾದ ಇನ್ನಿಂಗ್ಸ್

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್​ಗಳ ಸರಣಿಯಲ್ಲಿ ಒಂದು ಪಂದ್ಯ ಬಾಕಿಯಿರುವಾಗಲೇ ಭಾರತ ಸರಣಿ ಗೆದ್ದಿದೆ. ರಾಜ್​ಕೋಟ್​ನಲ್ಲಿ ನಡೆದ ನಾಲ್ಕನೇ ಟೆಸ್ಟ್​ ಪಂದ್ಯವನ್ನು ನಾಲ್ಕನೇ ದಿನವಾದ ಇಂದು ಗೆಲ್ಲುವ ಮೂಲಕ ಐತಿಹಾಸಿಕ ಸರಣಿಯನ್ನು ರೋಹಿತ್ ಪಡೆ ತನ್ನದಾಗಿಸಿಕೊಂಡಿದೆ.

ಭಾರತ ತಂಡವು, ಎರಡನೇ, ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದೆ. ಇಂಗ್ಲೆಂಡ್ ತಂಡವು ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಇನ್ನು ನಾಲ್ಕನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಪಡೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಇಂಗ್ಲೆಂಡ್, ಜೋ ರೂಟ್ ಅವರ 122 ರನ್​​ಗಳ ಸಹಾಯದಿಂದ 353 ರನ್​ಗಳಿಸಿ ಸೇಫ್ ಆಗಿತ್ತು.

ಧ್ರುವ ಜುರೇಲ್, ಜೈಸ್ವಾಲ್ ಅದ್ಭುತ ಆಟ..!
353 ರನ್​ಗಳ ಸವಾಲಿಗೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳು ನಿರಸ ಪ್ರದರ್ಶನ ನೀಡಿದ್ದರು. ಯಶಸ್ವಿ ಜೈಸ್ವಾಲ್ ಅವರ 73 ಹಾಗೂ 7ನೇ ಬ್ಯಾಟಿಂಗ್ ಆರ್ಡರ್​ನಲ್ಲಿ ಬಂದ ಧ್ರುವ ಜುರೆಲ್ 90 ರನ್​ಗಳ ಕಾಣಿಕೆ ತಂಡಕ್ಕೆ ಆಸರೆ ಆಯ್ತು. ಒಟ್ಟು 307 ರನ್​​ಗಳಿಸಿ ಆಲೌಟ್ ಆದ ಹಿನ್ನೆಲೆಯಲ್ಲಿ ರೋಹಿತ್ ಪಡೆ 46 ರನ್​ಗಳ ಹಿನ್ನಡೆ ಅನುಭವಿಸಿತ್ತು.
ಆದರೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಕುಲ್ದೀಪ್ ಯಾದವ್ ಹಾಗೂ ಸ್ಪಿನ್ ಮಾಂತ್ರಿಕ ಅಶ್ವಿನ್ ಮರ್ಮಾಘಾತ ನೀಡಿದರು. ಅಶ್ವಿನ್ ಬಲಿಷ್ಠ ಐದು ವಿಕೆಟ್​ಗಳನ್ನು ಕಬಳಿಸಿದ್ರೆ, ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು, ಎದುರಾಳಿ ತಂಡವನ್ನು ಕೇವಲ 145 ರನ್​ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ಭಾರತ ತಂಡವು 192 ರನ್​ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. ರೋಹಿತ್ ಶರ್ಮಾ ಹಾಗೂ ಜೈಸ್ವಾಲ್ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನ ಸನಿಹಕ್ಕೆ ತೆಗೆದುಕೊಂಡು ಹೋದರು. ನಂತರ ಧ್ರುವ ಜುರೇಲ್, ಶುಬ್ಮನ್ ಗಿಲ್ ಉತ್ತಮ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತವು ಐದು ವಿಕೆಟ್​ಗಳ ಗೆಲುವನ್ನು ಪಡೆಯಿತು.

ಮಿಂಚಿದ ಅಶ್ವಿನ್..!
ಎರಡೂ ಇನ್ನಿಂಗ್ಸ್​ನಲ್ಲೂ ಸ್ಪಿನ್ ಮಾಂತ್ರಿಕ ಅಶ್ವಿನ್ ಮ್ಯಾಜಿಕ್ ಮಾಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಐದು ಹಾಗೂ ಮೊದಲ ಇನ್ನಿಂಗ್ಸ್​ನಲ್ಲಿ ಒಂದು ವಿಕೆಟ್ ಪಡೆದು ಮಿಂಚಿದರು. ಇನ್ನು ಕುಲ್ದೀಪ್ ಯಾದವ್ 4, ಜಡೇಜಾ 5, ಆಕಾಶ್ ದೀಪ್ 4 ವಿಕೆಟ್ ಪಡೆದುಕೊಂಡರು. ಇನ್ನು ಐದನೇ ಟೆಸ್ಟ್ ಪಂದ್ಯವು ಮಾರ್ಚ್​ 7 ರಿಂದ 11ರವರೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

4ನೇ ಟೆಸ್ಟ್ ಪಂದ್ಯವನ್ನೂ ಗೆದ್ದು ಬೀಗಿದ ರೋಹಿತ್ ಪಡೆ; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ..!

https://newsfirstlive.com/wp-content/uploads/2024/02/DHRUV-1.jpg

Load More