ಬಾಂಗ್ಲಾ ವಿರುದ್ಧ ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ; ತಂಡದಿಂದ ಸ್ಟಾರ್​ ಆಟಗಾರರೇ ಔಟ್​

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ ಟಿ20 ಸರಣಿ; ಟೀಮ್​ ಇಂಡಿಯಾದಿಂದ ಧೋನಿ ಶಿಷ್ಯನಿಗೆ ಕೊಕ್​!
Advertisment
  • ಇಂದು ಟೀಮ್​ ಇಂಡಿಯಾ, ಬಾಂಗ್ಲಾ ನಡುವೆ ಮೊದಲ ಟಿ20
  • ಮಹತ್ವದ ಟಿ20 ಪಂದ್ಯದಲ್ಲಿ ಬಾಂಗ್ಲಾಗೆ ಭಾರತ ತಂಡ ಸವಾಲ್​
  • ಬಾಂಗ್ಲಾದೇಶದ ವಿರುದ್ಧ ಬಲಿಷ್ಠ ಟೀಮ್​ ಇಂಡಯಾ ಕಣದಲ್ಲಿದೆ!

ಇಂದು ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವೆ ಮೊದಲ ಟಿ20 ಪಂದ್ಯ ನಡೆಯುತ್ತಿದೆ. ಗ್ವಾಲಿಯರ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಈ ಮಹತ್ವದ ಪಂದ್ಯದಲ್ಲಿ ಟಾಸ್​ ಗೆದ್ದ ಟೀಮ್​ ಇಂಡಿಯಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಬಾಂಗ್ಲಾದೇಶ ಫಸ್ಟ್​ ಬ್ಯಾಟಿಂಗ್​ಗೆ ಇಳಿದಿದೆ.

ಟೀಮ್​ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​ನಲ್ಲಿ ಓಪನರ್ಸ್​ ಆಗಿ ಅಭಿಶೇಕ್​ ಶರ್ಮಾ ಮತ್ತು ಸಂಜು ಸ್ಯಾಮ್ಸನ್​ ಕಣಕ್ಕಿಳಿಯುತ್ತಿದ್ದಾರೆ. ಆಲ್​ರೌಂಡರ್ಸ್​ ಕೋಟಾದಲ್ಲಿ ಹಾರ್ದಿಕ್​ ಪಾಂಡ್ಯ, ನಿತೀಶ್​ ಕುಮಾರ್​ ರೆಡ್ಡಿ, ರಿಯಾನ್​ ಪರಾಗ್​ಗೆ ಅವಕಾಶ ನೀಡಲಾಗಿದೆ.

ಇಷ್ಟೇ ಅಲ್ಲ ವಾಷಿಂಗ್ಟನ್​ ಸುಂದರ್​​, ರಿಂಕು ಸಿಂಗ್​​​, ವರುಣ್​ ಚಕ್ರವರ್ತಿ, ಅರ್ಷ್​​ದೀಪ್​ ಸಿಂಗ್​, ಮಯಾಂಕ್​ ಯಾದವ್​​ಗೆ ಚಾನ್ಸ್​ ಕೊಡಲಾಗಿದೆ. ಸ್ಟಾರ್​ ಆಟಗಾರರಾದ ತಿಲಕ್​ ವರ್ಮಾ, ಜಿತೇಶ್​ ಶರ್ಮಾ ಸೇರಿ ಹಲವರಿಗೆ ಕೊಕ್​ ಕೊಡಲಾಗಿದೆ. ತೀವ್ರ ಗಾಯದಿಂದ ಬಳಲುತ್ತಿರೋ ಶಿವಂ ದುಬೆ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾ ಹೀಗಿದೆ..!

ಅಭಿಶೇಕ್​ ಶರ್ಮಾ, ಸಂಜು ಸ್ಯಾಮ್ಸನ್​ (ವಿಕೆಟ್​ ಕೀಪರ್​​), ಸೂರ್ಯಕುಮಾರ್​ ಯಾದವ್​​, ನಿತೀಶ್​​ ಕುಮಾರ್​ ರೆಡ್ಡಿ, ಹಾರ್ದಿಕ್​ ಪಾಂಡ್ಯ, ರಿಯಾನ್​ ಪರಾಗ್​, ರಿಂಕು ಸಿಂಗ್​, ವಾಷಿಂಗ್ಟನ್​ ಸುಂದರ್​​, ವರುಣ್​ ಚಕ್ರವರ್ತಿ, ಅರ್ಷ್​​ದೀಪ್​ ಸಿಂಗ್​​, ಮಯಾಂಕ್​ ಯಾದವ್​​.

ಇದನ್ನೂ ಓದಿ:ಟೀಮ್​ ಇಂಡಿಯಾದ ಈ ಸ್ಟಾರ್​ ಆಟಗಾರರ ಮಧ್ಯೆ ಭಾರೀ ಪೈಪೋಟಿ; ಯಾರಿಗೆ ಸ್ಥಾನ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment