/newsfirstlive-kannada/media/post_attachments/wp-content/uploads/2025/07/GILL-11.jpg)
ಲೀಡ್ಸ್​ನಲ್ಲಿ ಸೋತಿದ್ದ ಟೀಮ್ ಇಂಡಿಯಾ, ಬರ್ಮಿಂಗ್​ಹ್ಯಾಮ್​ನಲ್ಲಿ ನೀಡಿದ್ದು ಬ್ಲಾಕ್ ಬಾಸ್ಟರ್​ ಪರ್ಫಾಮೆನ್ಸ್. ಬ್ಯಾಟ್ಸ್​ಮನ್​​ಗಳ ಬೊಂಬಾಟ್ ಬ್ಯಾಟಿಂಗ್. ಬೌಲರ್​ಗಳ ಬೆಂಕಿ ಸ್ಪೆಲ್ಸ್​.. ಶುಭ್​ಮನ್ ಗಿಲ್ ನಾಯಕತ್ವದ ಆಟ.. ಕೇವಲ ಗೆದ್ದು ಬೀಗಲಿಲ್ಲ. ಇತಿಹಾಸವನ್ನೇ ಬರೆಯಿತು.
80 ಓವರ್.. 3 ಸೆಷನ್.. 536 ರನ್​.. 7 ವಿಕೆಟ್.. ಇದು ನಿನ್ನೆ ಟೀಮ್ ಇಂಡಿಯಾ ಮುಂದಿದ್ದ ಟಾರ್ಗೆಟ್.. ಆದ್ರೆ ಮಳೆಯಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ ನಡೆದಿದ್ದು ಆಕ್ಷರಶಃ ಟೀಮ್ ಇಂಡಿಯಾ ದರ್ಬಾರ್​.. 2ನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ಗೆ 608 ರನ್ ಟಾರ್ಗೆಟ್ ನೀಡಿದ್ದ ಟೀಮ್ ಇಂಡಿಯಾ, 4ನೇ ದಿನದಾಟದ ಅಂತ್ಯಕ್ಕೆ 72 ರನ್​ಗೆ 3 ವಿಕೆಟ್ ಬೇಟೆಯಾಡಿತ್ತು. ಹೀಗಾಗಿ ಅಂತಿಮ ದಿನದಾಟ 7 ವಿಕೆಟ್ ಬೇಟೆಯಾಡುವ ಟಾರ್ಗೆಟ್ ಯಂಗ್ ಇಂಡಿಯಾ ಮುಂದಿತ್ತು. ಈ ಟಾರ್ಗೆಟ್ ಟೀಮ್ ಇಂಡಿಯಾಗೆ ಕಷ್ಟವಾಗಲಿಲ್ಲ.
ಇದನ್ನೂ ಓದಿ: ಕ್ರಿಕೆಟ್ ಆಯ್ತು ಈಗ ಸಿನಿ ರಂಗಕ್ಕೆ ಪದಾರ್ಪಣೆ ಮಾಡ್ತಿರೋ ಮಾಜಿ ಸ್ಟಾರ್ ಕ್ರಿಕೆಟರ್​.. ಪ್ರೊಡಕ್ಷನ್ ನಂ.1
ಆರಂಭದಲ್ಲೇ ಇಂಗ್ಲೆಂಡ್​ಗೆ ಶಾಕ್ ಕೊಟ್ಟ ಆಕಾಶ್ ದೀಪ್!
4ನೇ ದಿನದಾಟ ಇಂಗ್ಲೆಂಡ್​​ಗೆ ಶಾಕ್ ಕೊಟ್ಟಿದ್ದ ಆಕಾಶ್ ದೀಪ್, 5ನೇ ದಿನದಾಟವೂ ಟೀಮ್ ಇಂಡಿಯಾಗೆ ಆಪದ್ಬಾಂಧವರಾದ್ರು. ದಿನದಾಟದ ಆರಂಭದಲ್ಲೇ ಒಲಿ ಪೊಪ್, ಹ್ಯಾರಿ ಬ್ರೂಕ್​ಗೆ ಪೆವಿಲಿಯನ್ ಹಾದಿ ತೋರಿದ ಆಕಾಶ್ ದೀಪ್, ಗೆಲುವಿನ ಭರವಸೆ ಹುಟ್ಟಿಹಾಕಿದ್ರು.
ಬೆನ್ ಸ್ಟೋಕ್ಸ್​ಗೆ ಸುಂದರ್ ಮಾಸ್ಟರ್ ಸ್ಟ್ರೋಕ್​
ಒಲಿ ಪೊಪ್, ಹ್ಯಾರಿ ಬ್ರೂಕ್ ವಿಕೆಟ್ ಪತನದ ಬಳಿಕ ಬೆನ್ ಸ್ಟೋಕ್ಸ್​, ಜೆಮ್ಮಿ ಸ್ಮಿತ್ ಒಂದಾದ್ರು. 6ನೇ ವಿಕೆಟ್​ಗೆ 70 ರನ್​ಗಳ ಜೊತೆಯಾಟವಾಡಿದ ಈ ಜೋಡಿ, ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ರು. ಈ ವೇಳೆ ವಾಷ್ಟಿಂಗ್ಟನ್​ ಸುಂದರ್, ಮಾಸ್ಟರ್​ ಸ್ಟ್ರೋಕ್​ಗೆ ಬೆನ್ ಸ್ಟೋಕ್ಸ್ ಪೆವಿಲಿಯನ್ ಸೇರಿದರು. ಇದರೊಂದಿಗೆ ಟೀಮ್ ಇಂಡಿಯಾ ಗೆಲುವಿಗೆ ಭದ್ರಬುನಾದಿ ಹಾಕಿದ್ರು.
ಸ್ಮಿತ್​ ಏಕಾಂಗಿ ಹೋರಾಟ.. ಆಕಾಶ್ ಟ್ರ್ಯಾಪ್..!
ಒಂದ್ಕಡೆ ವಿಕೆಟ್ ಬೀಳ್ತಿದ್ದರೂ ಜೆಮ್ಮಿ ಸ್ಮಿತ್, ಸ್ಫೋಟಕ ಬ್ಯಾಟಿಂಗ್​​ ನಡೆಸಿದ್ರು. ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಜೆಮ್ಮಿ ಸ್ಮಿತ್, ಮತ್ತಷ್ಟು ಅಗ್ರೆಸ್ಸಿವ್ ಬ್ಯಾಟಿಂಗ್​ಗೆ ಕೈ ಹಾಕಿದ್ರು. ಆಕಾಶ್ ದೀಪ್ ಸ್ಲೋವರ್ ಕಟರ್​ಗೆ ಸ್ಮಿತ್​ ಸ್ಟನ್ ಆಗಿ ಹೊರನಡೆದ್ರು. ಇದರೊಂದಿಗೆ ಆಕಾಶ್ ದೀಪ್ 5 ವಿಕೆಟ್ ಪಡೆದ ಸಾಧನೆ ಮಾಡಿದ್ರು. ಕ್ರಿಸ್ ವೋಕ್ಸ್​ 7 ರನ್​ಗೆ ಔಟಾದ್ರೆ. ಸಿರಾಜ್ ಹಿಡಿದ ಪ್ಲೈಯಿಂಗ್ ಕ್ಯಾಚ್​ಗೆ ಜೋಸ್ ಟಂಗ್ ಪೆವಿಲಿಯನ್​ಗೆ ಹೆಜ್ಜೆ ಹಾಕಿದ್ರು.
ಇದನ್ನೂ ಓದಿ: ‘ರಾಮಾಯಣ’ದಲ್ಲಿ ನಟನೆಗಾಗಿ ರಣಬೀರ್ ಕಪೂರ್​, ಸಾಯಿ ಪಲ್ಲವಿಗೆ ಕೋಟಿ ಕೋಟಿ ದುಡ್ಡು..!
ಟೀಮ್ ಇಂಡಿಯಾಗೆ 336 ರನ್​ಗಳ ಗೆಲುವು.. ಸರಣಿ ಸಮಬಲ..!
ಕೊನೆಯಲ್ಲಿ ಟೀಮ್ ಇಂಡಿಯಾವನ್ನ ಕಾಡಿದ ಬ್ರೈಡನ್ ಕಾರ್ಸೆ, 38 ರನ್​ ಗಳಿಸಿದರು. ಗೆಲುವಿನ ಅಂತರವನ್ನಷ್ಟೇ ಕಡಿಮೆ ಮಾಡಿದ್ರು. ಇದರೊಂದಿಗೆ ಟೀಮ್ ಇಂಡಿಯಾ, 336 ರನ್​​ಗಳ ಗೆಲುವು ದಾಖಲಿಸಿತು. 5 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಸಮಬಲ ಮಾಡಿಕೊಳ್ತು.
ಎಡ್ಜ್​​ಬಾಸ್ಟನ್​ನಲ್ಲಿ ಯಂಗ್ ಇಂಡಿಯಾ ಚರಿತ್ರೆ
1967ರಿಂದಲೂ ಎಡ್ಜ್​ ಬಾಸ್ಟನ್​ನಲ್ಲಿ ಟೆಸ್ಟ್ ಗೆಲ್ಲದ ಟೀಮ್ ಇಂಡಿಯಾ, ಒಂದು ಡ್ರಾ ಬಿಟ್ರೆ, ಬರೋಬ್ಬರಿ 7 ಪಂದ್ಯಗಳನ್ನು ಸೋತಿತ್ತು. ಇದೀಗ ಇದೇ ಎಡ್ಜ್​ಬಾಸ್ಟನ್​ನಲ್ಲಿ ಗೆದ್ದು ಬೀಗಿದ ಶುಭ್​ಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ, 58 ವರ್ಷಗಳ ಬಳಿಕ ಎಡ್ಜಬಾಸ್ಟನ್​ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿತು. ಒಟ್ನಲ್ಲಿ.. ಲೀಡ್ಸ್​ ಟೆಸ್ಟ್ ಸೋತ ಬೆನ್ನಲ್ಲೇ ಟೀಕಿಸಿದವರಿಗೆ ಪರ್ಫಮೆನ್ಸ್​ನಿಂದಲೇ ಉತ್ತರಿಸಿರುವ ಟೀಮ್ ಇಂಡಿಯಾ, ಇದೇ ಗೆಲುವಿನ ನಾಗಲೋಟ ಮುಂದುವರಿಸಲಿ, ಸರಣಿ ಗೆಲುವಿನತ್ತ ಹೆಜ್ಜೆ ಹಾಕಲಿ ಅನ್ನೋದೆ ಭಾರತೀಯರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ