/newsfirstlive-kannada/media/post_attachments/wp-content/uploads/2024/10/Team-India_Win.jpg)
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 86 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ 2-0 ಅಂತರದಿಂದ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ.
ಟೀಮ್ ಇಂಡಿಯಾ ನೀಡಿದ 222 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ ಕೇವಲ 135 ರನ್ಗಳಿಸಿದೆ. ಬಾಂಗ್ಲಾ ಪರ ವಿಕೆಟ್ ಕೀಪರ್ ಲಿಟ್ಟನ್ ದಾಸ್ 14, ಈಮಾನ್ 16, ಮೆಹಿದಿ ಹಸನ್ 16, ಮಹ್ಮದುಲ್ಲಾ 41 ರನ್ ಗಳಿಸಿದ್ರು. 20 ಓವರ್ಗಳಲ್ಲಿ 9 ವಿಕೆಟ್ಗೆ 135 ರನ್ ಕಲೆ ಹಾಕಿತ್ತು.
ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಓಪನರ್ ಆಗಿ ಬಂದ ಸಂಜು ಸ್ಯಾಮ್ಸನ್ 10, ಅಭಿಷೇಕ್ ಶರ್ಮಾ 15, ಸೂರ್ಯಕುಮಾರ್ ಯಾದವ್ 8 ರನ್ಗೆ ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರ ನಡೆದರು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಸ್ಟಾರ್ ಆಲ್ರೌಂಡರ್ ನಿತೀಶ್ ಕುಮಾರ್ ನೆರವಾದರು. ಬಾಂಗ್ಲಾದೇಶ ಬೌಲರ್ಗಳ ಬೆಂಡೆತ್ತಿದ ನಿತೀಶ್ ಅಬ್ಬರಿಸಿದ್ರು.
ತಾನು ಎದುರಿಸಿದ 34 ಬಾಲ್ನಲ್ಲಿ ಬರೋಬ್ಬರಿ 74 ರನ್ ಗಳಿಸೋ ಮೂಲಕ ಮೇಡಿನ್ ಫಿಫ್ಟಿ ಮಾಡಿದ್ರು. ಬರೋಬ್ಬರಿ 7 ಸಿಕ್ಸರ್, 4 ಫೋರ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 215ಕ್ಕೂ ಹೆಚ್ಚು ಇತ್ತು. ಇವರ ಸಹಾಯದಿಂದ ಟೀಮ್ ಇಂಡಿಯಾದ ಸ್ಕೋರ್ 200ರ ಗಡಿ ದಾಟಿದೆ.
ನಿತೀಶ್ಗೆ ಸಾಥ್ ಕೊಟ್ಟ ರಿಂಕು ಸಿಂಗ್ 29 ಬಾಲ್ನಲ್ಲಿ 5 ಭರ್ಜರಿ ಫೋರ್, 3 ಸಿಕ್ಸರ್ ಸಮೇತ 53 ರನ್ ಚಚ್ಚಿದ್ರು. ಹಾರ್ದಿಕ್ ಪಾಂಡ್ಯ 19 ಬಾಲ್ನಲ್ಲಿ 2 ಸಿಕ್ಸರ್, 2 ಫೋರ್ ಸಮೇತ 32, ರಿಯಾನ್ ಪರಾಗ್ 15 ರನ್ ಗಳಿಸಿದ್ರು. ಟೀಮ್ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ಗೆ 221 ರನ್ ಕಲೆ ಹಾಕಿತ್ತು.
ಇದನ್ನೂ ಓದಿ: ನಿತೀಶ್, ರಿಂಕು ಸಿಂಗ್ ವಿಧ್ವಂಸಕಾರಿ ಬ್ಯಾಟಿಂಗ್.. ಬಾಂಗ್ಲಾಗೆ ಭಾರತ 222 ರನ್ಗಳ ಬಿಗ್ ಟಾರ್ಗೆಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ