/newsfirstlive-kannada/media/post_attachments/wp-content/uploads/2024/12/Yashaswi-Jaiswal_Out.jpg)
ಸದ್ಯ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ 2ನೇ ಮ್ಯಾಚ್ ಅಡಿಲೇಡ್‌ನಲ್ಲಿ ನಡೆಯುತ್ತಿದೆ. ಇದು ಡೇ ನೈಟ್ ಟೆಸ್ಟ್ ಆಗಿದ್ದು, ಪಿಂಕ್ ಬಾಲ್ನೊಂದಿಗೆ ಆಡಲಾಗುತ್ತಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 44.1 ಓವರ್ನಲ್ಲಿ ಟೀಮ್ ಇಂಡಿಯಾ ಕೇವಲ 180 ರನ್ಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಪಂದ್ಯದ ಮೊದಲ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ಅವರನ್ನು ಎಲ್ಬಿಡಬ್ಲ್ಯು ಔಟ್ ಮಾಡಿದರು. ಈ ಮೂಲಕ ಪರ್ತ್‌ನಲ್ಲಿ ತಮನ್ನು ಸ್ಲೆಡ್ಜಿಂಗ್ ಮಾಡಿದ ಜೈಸ್ವಾಲ್ ವಿರುದ್ಧ ಸ್ಟಾರ್ಕ್ ಸೇಡು ತೀರಿಸಿಕೊಂಡರು.
ಜೈಸ್ವಾಲ್ ಔಟ್ ಆಗಿದ್ದು ಹೇಗೆ?
ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾದ ಪರ ಓಪನಿಂಗ್ ಮಾಡಲು ಬಂದರು. ಸ್ಟಾರ್ಕ್ ತನ್ನ ಮೊದಲ ಎಸೆತವನ್ನು ಲೆಗ್ ಸ್ಟಂಪ್ ಮೇಲೆ ಎಸೆದರು. ಆಗ ಚೆಂಡು ಲೆಗ್ ಸ್ವಿಂಗ್ ಆಗಿ ಜೈಸ್ವಾಲ್ ಪ್ಯಾಡ್‌ಗೆ ಬಡಿಯಿತು. ಹೀಗೆ ಜೈಸ್ವಾಲ್ ಎಲ್ಬಿಡಬ್ಲ್ಯೂ ಔಟ್ ಆದ್ರು.
Mitchell Starc talking about Yashasvi Jaiswal's sledge. pic.twitter.com/CAlsQOIWOA
— Mufaddal Vohra (@mufaddal_vohra)
Mitchell Starc talking about Yashasvi Jaiswal's sledge. pic.twitter.com/CAlsQOIWOA
— Mufaddal Vohra (@mufaddal_vohra) December 5, 2024
">December 5, 2024
ಈ ಹಿಂದೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಡಿಂಗ್ ಮಾಡಿದ್ದರು. ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಸ್ಟಾರ್ಕ್ 19ನೇ ಓವರ್ ಎಸೆದರು. ಆ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿರಿಸಿದ ಜೈಸ್ವಾಲ್ ಅವರು, ಸ್ಟಾರ್ಕ್ಗೆ ನೀವು ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದೀರಿ. ನಾನು ನಿಮಗೆ ಹೆದರಲ್ಲ ಎಂದು ಸ್ಲೆಡ್ಜಿಂಗ್ ಮಾಡಿದ್ದರು.
ಇದನ್ನೂ ಓದಿ:KL ರಾಹುಲ್ನಿಂದ ಕೈ ತಪ್ಪಿದ ಸ್ಥಾನ; ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ಕ್ಯಾಪ್ಟನ್ ರೋಹಿತ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ