ಅಶಿಸ್ತು ತೋರಿದ ಜೈಸ್ವಾಲ್​ಗೆ ತಕ್ಕ ಪಾಠ; ಹೋಟೆಲ್​​ನಲ್ಲೇ ಬಿಟ್ಟು ಹೊರಟ ಕ್ಯಾಪ್ಟನ್​ ರೋಹಿತ್​​

author-image
Ganesh Nachikethu
Updated On
ಅಶಿಸ್ತು ತೋರಿದ ಜೈಸ್ವಾಲ್​ಗೆ ತಕ್ಕ ಪಾಠ; ಹೋಟೆಲ್​​ನಲ್ಲೇ ಬಿಟ್ಟು ಹೊರಟ ಕ್ಯಾಪ್ಟನ್​ ರೋಹಿತ್​​
Advertisment
  • ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು
  • 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ ತಂಡ
  • ಬ್ರಿಸ್ಬೇನ್‌ನಲ್ಲಿ ನಡೆಯಲಿರೋ 3ನೇ ಟೆಸ್ಟ್​ ಭಾರತ ತಂಡ ಗೆಲ್ಲಲೇಬೇಕು

ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಟೀಮ್​ ಇಂಡಿಯಾ ಆಸ್ಟ್ರೇಲಿಯಾ ತಂಡದ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡುತ್ತಿದೆ. 2ನೇ ಟೆಸ್ಟ್​​​ ಪಂದ್ಯದಲ್ಲಿ ಸೋತಿರೋ ಟೀಮ್​ ಇಂಡಿಯಾ 3ನೇ ಪಂದ್ಯ ಗೆಲ್ಲಲೇಬೇಕಿದೆ. ಮೂರನೇ ಟೆಸ್ಟ್‌ ಆಡಲು ಬ್ರಿಸ್ಬೇನ್‌ನತ್ತ ಮುಖ ಮಾಡಿದೆ. ಇದೇ ಹೊತ್ತಲ್ಲೇ ಟೀಮ್‌ ಇಂಡಿಯಾಗೆ ಯುವ ಆಟಗಾರ ಕೈ ಕೊಟ್ಟಿದ್ದಾರೆ.

ಅಸಲಿಗೆ ಆಗಿದ್ದೇನು?

ಆಡಿಲೇಡ್‌ನಿಂದ ಟೀಮ್ ಇಂಡಿಯಾ ಬ್ರಿಸ್ಬೇನ್‌ಗೆ ಹೋಗಲು ತಯಾರಿ ನಡೆಸಿಕೊಂಡಿತ್ತು. ಆದರೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ತಡವಾಗಿ ಬಂದಿದ್ದು, ಬಸ್​ ಮಿಸ್​ ಆಗಿದೆ. ಕ್ಯಾಪ್ಟನ್​​ ರೋಹಿತ್​ ಶರ್ಮಾ ಮತ್ತು ಗೌತಮ್ ಗಂಭೀರ್ ಸುಮಾರು ಹೊತ್ತು ಕಾದ್ರೂ ಬರದ ಕಾರಣ ಬಸ್​​ ಏರ್ಪೋರ್ಟ್​ ಕಡೆ ಹೋಗಿದೆ.

ಭಾರತ ತಂಡ ಬ್ರಿಸ್ಬೇನ್‌ಗೆ ಬೆಳಗ್ಗೆ 10 ಗಂಟೆಗೆ ಪ್ರಯಾಣ ಬೆಳೆಸಿತ್ತು. ಹೀಗಾಗಿ ಹೋಟೆಲ್​ನಿಂದ ಬೆಳಗ್ಗೆ 8.30ಕ್ಕೆ ಹೊರಡಬೇಕಿತ್ತು. ಎಲ್ಲಾ ಆಟಗಾರರು ಸರಿಯಾದ ಸಮಯಕ್ಕೆ ಬಸ್​ ಹತ್ತಿದರು. ಆದರೆ ಯಶಸ್ವಿ ಜೈಸ್ವಾಲ್‌ ಮಾತ್ರ 20 ನಿಮಿಷ ತಡವಾಗಿ ಬಂದಿದ್ದು, ಕ್ಯಾಪ್ಟನ್​ ರೋಹಿತ್​ ಶರ್ಮಾ ಕೋಪಗಂಡರು.

ಮೂರನೇ ಪಂದ್ಯ ಗೆಲ್ಲಲೇಬೇಕು

ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 290ಕ್ಕೂ ಹೆಚ್ಚು ರನ್​​ಗಳಿಂದ ಗೆದ್ದು ವಿಶ್ವದಾಖಲೆ ಬರೆದಿದ್ದ ಟೀಮ್​​ ಇಂಡಿಯಾ 2ನೇ ಮ್ಯಾಚ್​​ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮುಗ್ಗರಿಸಿದೆ. ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.

ಇನ್ನು, ಈ ಸೋಲಿನೊಂದಿಗೆ ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಮುಂದಿನ ಎಲ್ಲಾ ಪಂದ್ಯಗಳು ಗೆಲ್ಲಲೇಬೇಕು. ಹಾಗಾಗಿ 3ನೇ ಟೆಸ್ಟ್​​ ಪಂದ್ಯ ಟೀಮ್​​ ಇಂಡಿಯಾಗೆ ಮಹತ್ವದ್ದಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಗೆದ್ದರಷ್ಟೇ ಫೈನಲ್​ಗೆ ಸುಗಮವಾಗಿ ಅರ್ಹತೆ ಪಡೆಯಲ್ಲಿದೆ. ಇಲ್ಲದಿದ್ದರೆ, ಮೂರನೇ ಬಾರಿಗೆ ಫೈನಲ್ ಆಡುವ ಟೀಮ್​ ಇಂಡಿಯಾ ಕನಸು ಭಗ್ನಗೊಳ್ಳಲಿದೆ.

ಇದನ್ನೂ ಓದಿ:ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​; ಬುಮ್ರಾ 3ನೇ ಟೆಸ್ಟ್​ ಆಡೋದು ಡೌಟ್​​; ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment