newsfirstkannada.com

ಏನ್ ಮಾಡಬಾರದಿತ್ತೋ ಅದನ್ನೇ ಮಾಡ್ತಾರೆ ಇವರು.. ಸ್ವಯಂಕೃತ ಅಪರಾಧದಿಂದಲೇ ಕರಿಯರ್​ ಖತಂ..!

Share :

Published January 20, 2024 at 2:51pm

    18 ವರ್ಷಕ್ಕೇ ಟೀಮ್​ ಇಂಡಿಯಾಗೆ ಪದಾರ್ಪಣೆ

    ಕೇವಲ ಮೂರೇ ವರ್ಷಕ್ಕೆ ತಂಡದಿಂದ ಹೊರಗೆ

    ಫಾರ್ಮ್​ ಕಥೆ ಬಿಡಿ, ಫಿಟ್​ನೆಸ್​ ಕೂಡ ಇಲ್ಲ

ಟೀಮ್​ ಇಂಡಿಯಾಗೆ ಕ್ರಿಕೆಟ್​ ಆಡಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ ಎಲ್ಲವನ್ನೂ ತ್ಯಾಗ ಮಾಡಿದವರ ಸ್ಪೂರ್ತಿಯ ಕಥೆಗಳನ್ನ ಕೇಳಿರ್ತಿರಿ. ಈತನ ಕಥೆ ಸಿಕ್ಕಾಪಟ್ಟೆ ಡಿಫರೆಂಟ್​​. ಟೀಮ್​ ಇಂಡಿಯಾಗೆ ಆಡೋಕೆ ಏನು ಮಾಡಬಾರದೋ ಅದನ್ನೆಲ್ಲಾ ಈತ ಮಾಡ್ತಿದ್ದಾರೆ.

ಇಂಟರ್​ ನ್ಯಾಷನಲ್​ ಲೆವೆಲ್​ನಲ್ಲಿ ದೇಶವನ್ನ ಪ್ರತಿನಿಧಿಸಬೇಕು ಅನ್ನೋದು ಪ್ರತಿಯೊಬ್ಬ ಯುವ ಕ್ರಿಕೆಟಿಗನ ಕನಸು. ಇದಕ್ಕಾಗಿ ಪಡೋ ಕಷ್ಟ ಅಷ್ಟಿಷ್ಟಲ್ಲ. ಅಕ್ಷರಶಃ ತಪಸ್ಸು ಮಾಡಿರ್ತಾರೆ. ಸಾಲು ಸಾಲು ಸೆಟ್​​ಬ್ಯಾಕ್​ಗಳಾದ್ರೂ, ಟೀಕೆಗಳನ್ನ ಎದುರಿಸಿದ್ರೂ, ಬಿಡದೇ ಛಲದಿಂದ ಹೋರಾಡಿದ ಆಟಗಾರರಿದ್ದಾರೆ. 30 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ಮೈಕಲ್​ ಹಸ್ಸಿ, ಡೇವಿಡ್​ ಹಸ್ಸಿ. 30 ವರ್ಷ 6 ತಿಂಗಳಿಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್​ ಯಾದವ್​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​.

ಈ ಕ್ರಿಕೆಟಿಗನ ಕಥೆ ವಿಭಿನ್ನ. ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕೆ ಯಾವ ಮಟ್ಟಿಗೆ ಪೈಪೋಟಿಯಿದೆ ಅನ್ನೋದು ನಿಮಗೆ ಗೊತ್ತೆಯಿದೆ. ಆ ಪೈಪೋಟಿಯ ನಡುವೆಯೂ ಈ ಯಂಗ್​​ಸ್ಟರ್​​ಗೆ 18 ವರ್ಷಕ್ಕೇ ಅವಕಾಶ ಬಾಗಿಲು ತೆರೆಯಿತು. ಆರಂಭದಲ್ಲಿ ಎಲ್ಲರೂ ಈತನನ್ನ ದಿಗ್ಗಜ ಸಚಿನ್​ ತೆಂಡುಲ್ಕರ್​​ಗೆ ಹೋಲಿಸಿದ್ರು. ಆದ್ರೀಗ ಈತ ತನ್ನ ಕರಿಯರ್​​ನ ತನ್ನ ಕೈಯಾರೆ ಹಾಳು ಮಾಡಿಕೊಳ್ತಿದ್ದಾನೆ. ಆ ಆಟಗಾರನೇ ಪೃಥ್ವಿ ಷಾ.

18 ವರ್ಷಕ್ಕೇ ಟೀಮ್​ ಇಂಡಿಯಾಗೆ ಪದಾರ್ಪಣೆ
ಪೃಥ್ವಿ ಷಾ ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದ್ದು 18ನೇ ವಯಸ್ಸಿಗೆ. ಡೆಬ್ಯೂ ಮ್ಯಾಚ್​ನಲ್ಲೇ ಸೆಂಚುರಿ ಚಚ್ಚಿದ್ದ ಪೃಥ್ವಿಯನ್ನ ಎಲ್ಲರೂ ಸಚಿನ್​ ತೆಂಡುಲ್ಕರ್​​ಗೆ ಹೋಲಿಸಿದ್ರು. ಅತ್ಯದ್ಭುತವಾಗಿ ಕರಿಯರ್​ನ ಕಿಕ್​ ಸ್ಟಾರ್ಟ್​ ಮಾಡಿದ ಈತನಿಗೆ ಇದೀಗ ಟೀಮ್​ ಇಂಡಿಯಾದಿಂದಲೇ ಹೊರ ಬಿದ್ದಿದ್ದಾನೆ. ಲೆಜೆಂಡ್​ ಆಗ್ತಾನೆ ಅಂದು ಕೊಂಡಿದ್ದ ಎಲ್ಲರ ಭವಿಷ್ಯ ಸುಳ್ಳಾಗಿದೆ. ಸದ್ಯದ ಪರಿಸ್ಥಿತಿ ನೋಡಿದ್ರೆ, ಈತನ ಕರಿಯರ್​ ಮುಗಿದೆ ಹೊದಂತೆ ಭಾಸವಾಗ್ತಿದೆ.

ಫಾರ್ಮ್​ ಕಥೆ ಬಿಡಿ, ಫಿಟ್​ನೆಸ್​ ಕೂಡ ಇಲ್ಲ..!
ಫಾರ್ಮ್​ ಸಮಸ್ಯೆ ಎದುರಿಸಿ ಟೀಮ್​ ಇಂಡಿಯಾದಿಂದ ಕಮ್​ಬ್ಯಾಕ್​ಗೆ ಪಡಲಾರದ ಕಷ್ಟ ಪಡ್ತಾರೆ. ಪೃಥ್ವಿ ಷಾ ವಿರುದ್ಧ ದಿಕ್ಕಿನಲ್ಲಿ ಸಾಗ್ತಿದ್ದಾರೆ. ನಿಜ ಹೇಳಬೇಕಂದ್ರೆ, ಏನನ್ನ ಮಾಡಬಾರದೋ ಅದನ್ನೆ ಮಾಡ್ತಿದ್ದಾರೆ. ಫಾರ್ಮ್​​ ಕಥೆಯನ್ನ ಬಿಡಿ.. ಪೃಥ್ವಿಯ ಫಿಟ್​ನೆಸ್​ ನೋಡಿದ್ರೆ, ನೀವು ಶಾಕ್​ ಆಗ್ತಿರಾ. ಸದ್ಯಕ್ಕಿರೋ ಮಾಹಿತಿ ಪ್ರಕಾರ ಫಿಟ್​ ಐ ಫೈನ್​ ಆಗಿದ್ದ ಪೃಥ್ವಿ ಷಾ, ಇದೀಗ ಕಂಪ್ಲೀಟ್​​ ಅನ್​ಫಿಟ್​ ಆಗಿದ್ದಾರೆ. ಹತ್ತಿರ ಹತ್ತಿರ ನೂರು ಕೆಜಿಯಷ್ಟು ದಪ್ಪ ಆಗಿರುವ ಪೃಥ್ವಿಗೆ ರನ್ನಿಂಗ್​​ ಕೂಡ ಕಷ್ಟದ ವಿಚಾರವಾಗಿದ್ಯಂತೆ.

ಸ್ವಯಂಕೃತ ಅಪರಾಧದಿಂದ ಕರಿಯರ್​ ಅಂತ್ಯ?

2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಗ್ರ್ಯಾಂಡ್​ ಎಂಟ್ರಿ ನೀಡಿದ್ದ ಪೃಥ್ವಿ ಷಾಗೆ ಇಂಜುರಿ ಭಾರೀ ಪೆಟ್ಟನ್ನೇ ನೀಡ್ತು. ಆ ಬಳಿಕ ಡೋಪಿಂಗ್ ಟೆಸ್ಟ್​​ನಲ್ಲಿ ಸಿಕ್ಕಿ ಬಿದ್ದು 1 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ರು. ಆ ಬಳಿಕ ಗೆಸ್ಟ್ ಅಪಿರಿಯನ್ಸ್​ ನೀಡಿದ್ದ ಪೃಥ್ವಿ, 5 ಟೆಸ್ಟ್​, 6 ಏಕದಿನ, 1 ಟಿ20 ಪಂದ್ಯವನ್ನ ಮಾತ್ರ ಆಡಿದ್ದಾರೆ. 2021ರಲ್ಲಿ ಕೊನೆಯ ದಾಗಿ ಭಾರತವನ್ನ ಪ್ರತಿನಿಧಿಸಿದ ಪೃಥ್ವಿ, ಮುಂದೆ ವಾಪಾಸ್ಸಾಗೋ ಯಾವ ಲಕ್ಷಣವೂ ಕಾಣಿಸ್ತಿಲ್ಲ.

ಆಫ್​ ಫೀಲ್ಡ್​ನಲ್ಲಿ ಕಾಂಟ್ರವರ್ಸಿಗಳ ಕಿಂಗ್​.!
ಆನ್​ಫೀಲ್ಡ್​ ಆಟದ ಹೊರತಾಗಿ ಸದ್ಯ ಕಾಂಟ್ರವರ್ಸಿಗಳಿಂದಲೇ ಪೃಥ್ವಿ ಷಾ ಹೆಚ್ಚು ಸದ್ದು ಮಾಡ್ತಿದ್ದಾರೆ. ಕಮ್​ಬ್ಯಾಕ್​​ ಮಾಡಲು ಕಠಿಣ ಪರಿಶ್ರಮ ಪಡಬೇಕಾಗಿದ್ದ ಪೃಥ್ವಿ, ಎಂಜಾಯ್​ಮೆಂಟ್​​ಗೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಗರ್ಲ್​ಫ್ರೆಂಡ್ಸ್, ಪಾರ್ಟಿ, ಪಬ್​​ ಅಂತಾ ಸುತ್ತಾಡ್ತಿರೋ ಪೃಥ್ವಿ, ಸ್ವಪ್ನಾ ಗಿಲ್​​ ಜೊತೆಗಿನ ಹೊಡೆದಾಟದಿಂದಲೂ ಸುದ್ದಿಯಾಗಿದ್ರು. ಪೃಥ್ವಿ ಷಾ ಟ್ಯಾಲೆಂಟೆಡ್​ ಕ್ರಿಕೆಟಿಗ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಸದ್ಯದ ಫಿಟ್​​ನೆಸ್​, ಫಾರ್ಮ್​, ಲೈಫ್​ ಸ್ಟೈಲ್​ ನೋಡಿದ್ರೆ, ತನ್ನ ಕರಿಯರ್​ ಅನ್ನ ತಾನೇ ಕೈಯಾರೆ ಹಾಳು ಮಾಡಿಕೊಳ್ತಿದ್ದಾರೆ ಅನ್ನಿಸ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ರೆ, ಕರಿಯರ್​ ಶೀಘ್ರದಲ್ಲೇ ಅಂತ್ಯವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಏನ್ ಮಾಡಬಾರದಿತ್ತೋ ಅದನ್ನೇ ಮಾಡ್ತಾರೆ ಇವರು.. ಸ್ವಯಂಕೃತ ಅಪರಾಧದಿಂದಲೇ ಕರಿಯರ್​ ಖತಂ..!

https://newsfirstlive.com/wp-content/uploads/2024/01/prithvi-shaw.jpg

Load More