ಟೀಮ್ ಇಂಡಿಯಾ, ಬಾಂಗ್ಲಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯ!
ಸದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರೋ ಟೀಮ್ ಇಂಡಿಯಾ
ತಂಡ ಪ್ರಕಟಕ್ಕೂ ಮುನ್ನವೇ ಟೀಮ್ ಇಂಡಿಯಾದ ಕದ ತಟ್ಟಿದ ಯುವ ಬ್ಯಾಟರ್
ಇತ್ತೀಚೆಗೆ ನಡೆದ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. 2-0 ಅಂತರದಿಂದ ಸೀರೀಸ್ ಗೆದ್ದಿದ್ದು, ಸದ್ಯದಲ್ಲೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸೀರೀಸ್ಗೆ ಇನ್ನೂ ಟೀಮ್ ಇಂಡಿಯಾ ಪ್ರಕಟ ಆಗಿಲ್ಲ. ಇದಕ್ಕೂ ಮುನ್ನವೇ ಟೀಮ್ ಇಂಡಿಯಾದ ಯುವ ಬ್ಯಾಟರ್ ಸರ್ಫರಾಜ್ ಖಾನ್ ಬಿಸಿಸಿಐ ಆಯ್ಕೆ ಸಮಿತಿ ಕದ ತಟ್ಟಿದ್ದಾರೆ.
ಬಾಂಗ್ಲಾ ವಿರುದ್ಧದ ಟೆಸ್ಟ್ ಸೀರೀಸ್ಗೆ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡಲಾಗಿತ್ತಾದ್ರೂ ಕೆ.ಎಲ್ ರಾಹುಲ್, ರಿಷಬ್ ಪಂತ್ ಇದ್ದ ಕಾರಣ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಟೆಸ್ಟ್ ಸರಣಿ ಮಧ್ಯೆಯೇ ಸರ್ಫರಾಜ್ ಖಾನ್ ಅವರನ್ನು ಇರಾನಿ ಕಪ್ ಆಡಲು ಕಳಿಸಿತ್ತು. ಈಗ ಇವರು ಇರಾನಿ ಕಪ್‌ನಲ್ಲಿ ಮಿಂಚಿದ್ದಾರೆ. ದ್ವಿಶತಕ ಸಿಡಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಆಯ್ಕೆ ಮಾಡಿ ಅನ್ನೋ ಸಂದೇಶ ಸಾರಿದ್ದಾರೆ.
ಲಕ್ನೋದ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ಮುಂಬೈ ಮತ್ತು ರೆಸ್ಟ್ ಆಫ್ ಇಂಡಿಯಾ ಮಧ್ಯೆ ಇರಾನಿ ಕಪ್ 2024ರ ಮಹತ್ವದ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟರ್ ಸರ್ಫರಾಜ್ ಖಾನ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಇರಾನಿ ಕಪ್‌ನಲ್ಲಿ ಮುಂಬೈ ಪರ ಬ್ಯಾಟ್ ಬೀಸಿದ ಸರ್ಫರಾಜ್ ಡಬಲ್ ಸೆಂಚುರಿ ಬಾರಿಸಿದ್ರು. ಮಹತ್ವದ ಪಂದ್ಯದ 2ನೇ ದಿನದಂದು ಮುಂಬೈ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸರ್ಫರಾಜ್ ರೆಸ್ಟ್ ಇಂಡಿಯಾ ಬೌಲರ್ಗಳ ಬೆವರಿಳಿಸಿದ್ರು.
25 ಫೋರ್, 4 ಭರ್ಜರಿ ಸಿಕ್ಸರ್!
ರೆಸ್ಟ್ ಆಫ್ ಇಂಡಿಯಾದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಸರ್ಫರಾಜ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಬಲ ಪ್ರದರ್ಶಿಸಿದ್ರು. ತಾನು ಎದುರಿಸಿದ 272 ಎಸೆತಗಳಲ್ಲಿ ಬರೋಬ್ಬರಿ 25 ಫೋರ್ ಮತ್ತು 4 ಸಿಕ್ಸರ್ನಿಂದ ಅಜೇಯ 219 ರನ್‌ಗಳಿಸಿ ಆಟ ಮುಂದುರೆಸಿದ್ದಾರೆ. ದ್ವಿಶತಕ ಸಿಡಿಸುವ ಮೂಲಕ ಯುವ ಬ್ಯಾಟರ್ ಸರ್ಫರಾಜ್ ಖಾನ್ ಭಾರತದ ದಿಗ್ಗಜ ಕ್ರಿಕೆಟರ್ಸ್ ಆದ ಸಚಿನ್ ಮತ್ತು ರಾಹುಲ್ ದ್ರಾವಿಡ್ ದಾಖಲೆ ಮುರಿದರು.
ಇದನ್ನೂ ಓದಿ: Test Ranking: ಬುಮ್ರಾ ನಂಬರ್ 1 ಬೌಲರ್; ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ, ರೋಹಿತ್ಗೆ ಎಷ್ಟನೇ ಸ್ಥಾನ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ