IPL 2025: ಮೆಗಾ ಹರಾಜಿಗೆ ಮುನ್ನವೇ ಆರ್​​ಸಿಬಿಗೆ ಸಿಕ್ಕೇಬಿಟ್ರು ಜೂನಿಯರ್​​ ಎಬಿಡಿ; ಯಾರದು?

author-image
Ganesh Nachikethu
Updated On
ಎಬಿಡಿ ಮಾಡಿದ ಒಂದೇ ಒಂದು ಯಡವಟ್ಟಿಗೆ ಕೊಹ್ಲಿ ಕೋಪ.. ಆಪ್ತ ಮಿತ್ರರ ಮಧ್ಯೆ ‘ಸ್ನೇಹ’ ಬಿರುಕು..!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಕ್ರಿಕೆಟ್​​​​ ಟೂರ್ನಿ!
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸ್ಫೋಟಕ ಬ್ಯಾಟರ್​ ಎಂಟ್ರಿ
  • ಆರ್​​ಸಿಬಿ ತಂಡಕ್ಕೆ ಸಿಕ್ಕೇಬಿಟ್ರು ಜೂನಿಯರ್​​ ಎಬಿ ಡಿವಿಲಿಯರ್ಸ್​​; ಯಾರದು?

ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಮುಶೀರ್ ಖಾನ್‌. ಇವರು ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ಎ ಹಾಗೂ ಭಾರತ ಬಿ ನಡುವಿನ ಪಂದ್ಯದಲ್ಲಿ ಬರೋಬ್ಬರಿ 181 ರನ್​ ಚಚ್ಚುವ ಮೂಲಕ ಮುಶೀರ್‌ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ತನ್ನನ್ನು ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿಗೆ ಆಯ್ಕೆ ಮಾಡಿ ಎಂದು ಬಿಸಿಸಿಐ ಕದ ತಟ್ಟಿದ್ದಾರೆ. ಮುಶೀರ್​ ಖಾನ್​ ಆಟ ಎಬಿ ಡಿವಿಲಿಯರ್ಸ್​ ಅವರ ಆಟವನ್ನೇ ನೆನಪಿಸುತ್ತದೆ.

ಮುಶೀರ್​ ಖಾನ್​ ಸಹೋದರ ಸರ್ಫರಾಜ್‌ ಖಾನ್‌. ಈಗಾಗಲೇ ಸರ್ಫರಾಜ್​​ ಖಾನ್​ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಈಗ ಸರ್ಫರಾಜ್​ ತಮ್ಮ ಮುಶೀರ್​​ ಟೀಮ್​ ಇಂಡಿಯಾ ಸೇರುವ ಕನಸು ಕಾಣುತ್ತಿದ್ದಾರೆ. ಹೀಗಿರುವಾಗ ಮುಂದಿನ ಐಪಿಎಲ್​ ಸೀಸನ್​​ನಲ್ಲಿ ಮುಶೀರ್​ ಖಾನ್​​ ಮೇಲೆ ಹಲವು ಐಪಿಎಲ್​ ತಂಡಗಳು ಕಣ್ಣಿಟ್ಟಿವೆ. ಆರ್​​ಸಿಬಿ ಕೂಡ ಮುಶೀರ್​ ಖಾನ್​ ಖರೀದಿ ಮಾಡಲು ಮುಂದಾಗಿದೆ.

ವರ್ಷದ ಕೊನೆಗೆ 2025ರ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿ ಮುಶೀರ್ ಖಾನ್‌ ಖರೀದಿಗೆ ಆರ್​​ಸಿಬಿ ಪ್ಲಾನ್​ ಮಾಡಿದೆ. ಇವರು ಅಂಡರ್‌ 19 ಭಾರತ ತಂಡದ ಪರ ಆಡಿದ ಅನುಭವ ಹೊಂದಿದ್ದು, ಆರ್​​ಸಿಬಿಗೆ ಒಳ್ಳೆ ಫಿನಿಶರ್​ ಆಗಲಿದ್ದಾರೆ.


">September 6, 2024

ಆರ್​​ಸಿಬಿಯಿಂದ ಮೆಗಾ ಪ್ಲಾನ್​​!

ಕಳೆದ ಸೀಸನ್​​ನಲ್ಲಿ ಭಾರೀ ಹವಾ ಕ್ರಿಯೇಟ್​ ಮಾಡಿದ್ದ ಆರ್​​ಸಿಬಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ಯುವ ಆಟಗಾರರ ಹುಡುಕಾಟದಲ್ಲಿದೆ ಆರ್​​​ಸಿಬಿ. ಮುಶೀರ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಇವರನ್ನು ಹರಾಜಿನಲ್ಲಿ ಹಣದ ಹೊಳೆಯನ್ನೇ ಹರಿಸಿ ಕೊಳ್ಳಲು ಆರ್​​ಸಿಬಿ ನಿರ್ಧರಿಸಿದೆ.

ಇದನ್ನೂ ಓದಿ:IPL 2025: ಆರ್​​​ಸಿಬಿ ತಂಡಕ್ಕೆ ಬಿಗ್​ ಆಫರ್​ ಕೊಟ್ಟ ಕನ್ನಡಿಗ ಕೆ.ಎಲ್​ ರಾಹುಲ್​​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment