ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಸ್ಥಾನಕ್ಕೆ ಬಂತು ಕುತ್ತು
ಹಾರ್ದಿಕ್ ಪಾಂಡ್ಯ ಬುಡವನ್ನೇ ಅಲುಗಾಡಿಸಿದ ಯುವ ಬ್ಯಾಟರ್..!
ನಿತೀಶ್ ರೆಡ್ಡಿಯಿಂದಲೇ ಕಾದಿದ್ಯಾ ಹಾರ್ದಿಕ್ ಪಾಂಡ್ಯಗೆ ಆಪತ್ತು?
ಇತ್ತೀಚೆಗೆ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 86 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ 2-0 ಅಂತರದಿಂದ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ. 2ನೇ ಟಿ20 ಪಂದ್ಯ ಗೆಲ್ಲಲು ಪ್ರಮುಖ ಕಾರಣ ಟೀಮ್ ಇಂಡಿಯಾದ ಯುವ ಆಲ್ರೌಂಡರ್.
ಟೀಮ್ ಇಂಡಿಯಾ ಕೈ ಹಿಡಿದ ನಿತೀಶ್ ರೆಡ್ಡಿ
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಸ್ಟಾರ್ ಆಲ್ರೌಂಡರ್ ನಿತೀಶ್ ರೆಡ್ಡಿ ನೆರವಾದರು. ಬಾಂಗ್ಲಾದೇಶ ಬೌಲರ್ಗಳ ಬೆಂಡೆತ್ತಿದ ನಿತೀಶ್ ಅಬ್ಬರಿಸಿದ್ರು. ತಾನು ಎದುರಿಸಿದ 34 ಬಾಲ್ನಲ್ಲಿ ಬರೋಬ್ಬರಿ 74 ರನ್ ಗಳಿಸೋ ಮೂಲಕ ಮೇಡಿನ್ ಫಿಫ್ಟಿ ಮಾಡಿದ್ರು. ಬರೋಬ್ಬರಿ 7 ಸಿಕ್ಸರ್, 4 ಫೋರ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 215ಕ್ಕೂ ಹೆಚ್ಚು ಇತ್ತು. ಇವರ ಸಹಾಯದಿಂದ ಟೀಮ್ ಇಂಡಿಯಾದ ಸ್ಕೋರ್ 200ರ ಗಡಿ ದಾಟಿತ್ತು.
ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಬಂತು ಕುತ್ತು
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಇವರು ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಆದರೆ, ಈಗ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ನಿತೀಶ್ ರೆಡ್ಡಿಯಿಂದಲೇ ಕುತ್ತು ಬಂದಿದೆ. ಇದಕ್ಕೆ ಕಾರಣ ನಿತೀಶ್ ರೆಡ್ಡಿ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಮಾಡಿದ ಕಮಾಲ್. ಹಾರ್ದಿಕ್ ಪಾಂಡ್ಯ ಒಂದು ವೇಳೆ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಹಿಂದೆ ಬಿದ್ದರೆ, ನಿತೀಶ್ ರೆಡ್ಡಿ ಇವರ ಬದಲಿಗೆ ಟೀಮ್ ಇಂಡಿಯಾದಲ್ಲಿ ಖಾಯಂ ಸದಸ್ಯರು ಆಗುವುದು ಕನ್ಫರ್ಮ್ ಆಗಿದೆ.
ಇದನ್ನೂ ಓದಿ: ಬಾಂಗ್ಲಾದೇಶಕ್ಕೆ 86 ರನ್ಗಳ ಹೀನಾಯ ಸೋಲು; ಭಾರತ ತಂಡಕ್ಕೆ ರೋಚಕ ಜಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ