/newsfirstlive-kannada/media/post_attachments/wp-content/uploads/2024/10/TEAM-INDIA-1.jpg)
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​​ ಮಹಿಪಾಲ್ ಲೊಮ್ರೋರ್. ಮುಂದಿನ ಸೀಸನ್​ಗೆ ಇವರನ್ನು ಆರ್​​​ಸಿಬಿ ರೀಟೈನ್​ ಲಿಸ್ಟ್​ನಿಂದ ಕೈ ಬಿಟ್ಟಿದೆ. ಮೆಗಾ ಆಕ್ಷನ್​​ನಲ್ಲಿ ಆರ್​​ಸಿಬಿ ತಂಡ ಮಹಿಪಾಲ್ ಲೊಮ್ರೋರ್ ಮೇಲೆ ಆರ್​​​ಟಿಎಂ ಕಾರ್ಡ್​​ ಬಳಬಸಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹೊತ್ತಲ್ಲೇ ಮಹಿಪಾಲ್ ಲೊಮ್ರೋರ್ ಅಬ್ಬರಿಸಿದ್ದಾರೆ.
ಸದ್ಯ ನಡೆಯುತ್ತಿರೋ ರಣಜಿ ಟ್ರೋಫಿಯಲ್ಲಿ ರಾಜಸ್ಥಾನದ ಪರ ಆಡುತ್ತಿರೋ ಬ್ಯಾಟರ್​​ ಮಹಿಪಾಲ್ ಲೊಮ್ರೋರ್ ಅಮೋಘ ಪ್ರದರ್ಶನ ನೀಡಿದ್ರು. ಉತ್ತರಾಖಂಡ ವಿರುದ್ಧ ಆರ್​​ಸಿಬಿ ಸ್ಟಾರ್​ ಬ್ಯಾಟರ್​​ ಟ್ರಿಪಲ್​ ಸೆಂಚೂರಿ ಸಿಡಿಸಿ ಗಮನ ಸೆಳೆದ್ರು.
ಮೊದಲ ತ್ರಿಶತಕ ಸಿಡಿಸಿದ ಮಹಿಪಾಲ್​​
ಇನ್ನು, ಮಹಿಪಾಲ್ ಲೊಮ್ರೋರ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲೇ ಮೊದಲ ಟ್ರಿಪಲ್ ಸೆಂಚುರಿ ಬಾರಿಸಿದ್ರು. ಮೊದಲ 253 ಬಾಲ್​ನಲ್ಲಿ ಡಬಲ್​ ಸೆಂಚೂರಿ ಪೂರೈಸಿದ್ರು. ಬಳಿಕ ಅಗ್ರೆಸ್ಸಿವ್​ ಆಗಿ ಬ್ಯಾಟ್​ ಬೀಸಿ ಇವರು 357 ಎಸೆತಗಳಲ್ಲಿ ತ್ರಿಶತಕ ಚಚ್ಚಿದ್ರು.
/newsfirstlive-kannada/media/post_attachments/wp-content/uploads/2024/11/Mahipal-Lomror.jpg)
ಬೌಂಡರಿಗಳ ಸುರಿಮಳೆ
ಮಹಿಪಾಲ್ ಇನ್ನಿಂಗ್ಸ್​ ಉದ್ಧಕ್ಕೂ ಎದುರಾಳಿ ಬೌಲರ್​ಗಳ ಕಾಡಿದ್ರು. ತಾನು ಎದುರಿಸಿದ 360 ಎಸೆತಗಳಲ್ಲಿ ಬರೋಬ್ಬರಿ 13 ಸಿಕ್ಸರ್ ಹಾಗೂ 25 ಫೋರ್​ಗಳು ಚಚ್ಚಿದ್ರು. ರಾಜಸ್ಥಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 660 ರನ್ ಗಳಿಸಿದೆ. ಮಹಿಪಾಲ್ ಲೊಮ್ರೋರ್ ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ 43ನೇ ಆಟಗಾರ ಎನಿಸಿಕೊಂಡರು.
ಸರ್ಫರಾಜ್​ ಖಾನ್​ ದಾಖಲೆ ಉಡೀಸ್​​
ಇದು ರಣಜಿ ಟೂರ್ನಿ ಇತಿಹಾಸದಲ್ಲೇ 47ನೇ ತ್ರಿಶತಕವಾಗಿದೆ. ಬರೋಬ್ಬರಿ 3 ವರ್ಷಗಳ ನಂತರ ಆಟಗಾರನೊಬ್ಬ ತ್ರಿಶತಕ ಸಾಧನೆ ಮಾಡಿದ್ದಾರೆ. ಮೊದಲು ಮುಂಬೈ ತಂಡದ ಸರ್ಫರಾಜ್ ಖಾನ್ ರಣಜಿಯಲ್ಲಿ ತ್ರಿಶತಕ ದಾಖಲಿಸಿದ್ದರು. ಈಗ ಮಹಿಪಾಲ್ ಲೊಮ್ರೋರ್ ಇವರ ದಾಖಲೆಯನ್ನು ಉಡೀಸ್​ ಮಾಡಿದ್ದಾರೆ.
ಇದನ್ನೂ ಓದಿ: ಸ್ಟಾರ್​​ ಆಟಗಾರನಿಗೆ ಬಿಗ್​ ಶಾಕ್​​; ಕ್ಯಾಪ್ಟನ್ಸಿ ವಿಚಾರದಲ್ಲಿ ಮುಂಬೈ ಇಂಡಿಯನ್ಸ್​ ಅಚ್ಚರಿ ನಿರ್ಧಾರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us