/newsfirstlive-kannada/media/post_attachments/wp-content/uploads/2024/10/Yash-Dhull.jpg)
ಕ್ಯಾನ್ಸರ್ ಅನ್ನೇ ಗೆದ್ದು ಟೀಮ್ ಇಂಡಿಯಾಗಾಗಿ ತನ್ನ ಜೀವವನ್ನೇ ಪಣವಾಗಿ ಇಟ್ಟವರು ಯುವರಾಜ್ ಸಿಂಗ್. ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈಗ ಅವರದ್ದೇ ಹಾದಿಯಲ್ಲಿ 21ರ ಹರೆಯದ ಯಶ್ ಧುಲ್ ಸಾಗಿದ್ದಾರೆ. ಯಶ್ ಧುಲ್ ಜೀವನದಲ್ಲೂ ಅಂತಹದ್ದೇ ತಿರುವು ಕಾಣಬಹುದು. ಯಶ್ ಧುಲ್ ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ಭರ್ಜರಿ ಶತಕ ಸಿಡಿಸಿ ಸುದ್ದಿಯಾಗಿದ್ದಾರೆ.
ಯಶ್ ದಿಟ್ಟ ಹೋರಾಟ
ಇತ್ತೀಚೆಗೆ ನಡೆದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಯಶ್ ಮಿಂಚಿನ ಶತಕ ಸಿಡಿಸಿದ್ದಾರೆ. ಅದ್ಭುತವಾಗಿ ಬ್ಯಾಟ್ ಬೀಸಿದ ಯಶ್ ತಾನು ಎದುರಿಸಿದ 191 ಎಸೆತಗಳಲ್ಲಿ ಬರೋಬ್ಬರಿ 11 ಫೋರ್, 3 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಬಾರಿಸಿದ್ರು. ಈ ಮೂಲಕ ದೆಹಲಿ ತಂಡಕ್ಕೆ ನೆರವಾದರು.
ಪಂದ್ಯ ಡ್ರಾ ಆಗಿದ್ದು ಏಕೆ?
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್ನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ವಿರುದ್ಧ ತಮಿಳುನಾಡು ಭರ್ಜರಿ ಪ್ರದರ್ಶನ ನೀಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ತಮಿಳುನಾಡು ಪರ ಸಾಯಿ ಸುದರ್ಶನ್ (213), ವಾಷಿಂಗ್ಟನ್ ಸುಂದರ್ (152) ಮತ್ತು ಪ್ರದೋಶ್ ರಂಜನ್ ಪಾಲ್ (117) ಚಚ್ಚಿದ್ರು. ಇವರ ನೆರವಿನಿಂದ ತಮಿಳುನಾಡು 6 ವಿಕೆಟ್ ನಷ್ಟಕ್ಕೆ 674 ಗಳಿಸಿ ಡಿಕ್ಲೇರ್ ಘೋಷಿಸಿತ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ದೆಹಲಿ ಪರ ಯಶ್ 105 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಬೇರೆ ಯಾರೂ ಉತ್ತಮ ಬ್ಯಾಟಿಂಗ್ ಮಾಡದ ಕಾರಣ ಡೆಲ್ಲಿ 266 ರನ್‌ಗಳಿಗೆ ಆಲೌಟ್ ಆಯ್ತು. 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡದೆ ತಮಿಳುನಾಡು ಮತ್ತೆ ಡಿಕ್ಲೇರ್ ಘೋಷಿಸಿತ್ತು. ಕೊನೆಯ ದಿನದಾಟಕ್ಕೆ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್ ಕಲೆ ಹಾಕಿದ ಕಾರಣ ಪಂದ್ಯ ಡ್ರಾ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ