ಟೀಮ್​​ ಇಂಡಿಯಾಗೆ ಸ್ಫೋಟಕ ಆಟಗಾರನಿಂದ ಆನೆಬಲ; ಯುವ ಬ್ಯಾಟರ್​ಗೆ ಸುವರ್ಣಾವಕಾಶ

author-image
Ganesh Nachikethu
Updated On
ಟೀಮ್​​ ಇಂಡಿಯಾಗೆ ಸ್ಫೋಟಕ ಆಟಗಾರನಿಂದ ಆನೆಬಲ; ಯುವ ಬ್ಯಾಟರ್​ಗೆ ಸುವರ್ಣಾವಕಾಶ
Advertisment
  • ಟೀಮ್​ ಇಂಡಿಯಾಗೆ ಸ್ಫೋಟಕ ಬ್ಯಾಟರ್​ ಎಂಟ್ರಿ!
  • ಸಂಜು ಸ್ಯಾಮ್ಸನ್​​ ಜತೆ ಯುವ ಬ್ಯಾಟರ್​ ಓಪನಿಂಗ್​​
  • ಸೌತ್​​ ಆಫ್ರಿಕಾ ವಿರುದ್ಧ ಅಬ್ಬರಿಸಲಿರೋ ಯುವ ಬ್ಯಾಟರ್​​

ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಯನ್ನು ಟೀಮ್​​ ಇಂಡಿಯಾ 3-0 ಅಂತರದಿಂದ ಹೀನಾಯ ಸೋಲು ಕಂಡಿದೆ. ಇದು ರೋಹಿತ್ ಶರ್ಮಾ ನಾಯಕತ್ವದ ಭಾರತ ಟೆಸ್ಟ್ ತಂಡಕ್ಕೆ ತೀವ್ರ ಮುಖಭಂಗ ತಂದಿದೆ. ಈ ಬೆನ್ನಲ್ಲೇ ಟೀಮ್​ ಇಂಡಿಯಾ ಟಿ20 ಸರಣಿಗಾಗಿ ಸೌತ್​ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಭಾರತ ಟಿ20 ತಂಡದ ಕ್ಯಾಪ್ಟನ್​​​ ಸೂರ್ಯಕುಮಾರ್​ ನೇತೃತ್ವದಲ್ಲಿ ತಂಡ ಕಣಕ್ಕಿಳಿಯುತ್ತಿದೆ.

ನಾಳೆ ಎಂದರೆ ನವೆಂಬರ್​​ 8ನೇ ತಾರೀಕಿನಿಂದ ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ 4 ಟಿ20 ಪಂದ್ಯಗಳ ಸರಣಿ ಶುರುವಾಗಲಿದೆ. ಟಿ20 ವಿಶ್ವಕಪ್​ ಚಾಂಪಿಯನ್​​ ಭಾರತ ತಂಡದ ವಿರುದ್ಧ ಗೆಲ್ಲಲೇಬೇಕು ಎಂದು ಸೌತ್​ ಆಫ್ರಿಕಾ ಭಾರೀ ತಯಾರಿ ನಡೆಸಿಕೊಂಡಿದೆ. ಸೌತ್​ ಆಫ್ರಿಕಾ ವಿರುದ್ಧ ಸರಣಿಗೆ ಟೀಮ್​ ಇಂಡಿಯಾದಲ್ಲಿ ಬಹುತೇಕ ಯುವಕರಿಗೆ ಮಣೆ ಹಾಕಲಾಗಿದೆ. ಇದರ ಮಧ್ಯೆ ಸ್ಫೋಟಕ ಬ್ಯಾಟರ್​ ಬಗ್ಗೆ ಬಿಗ್​ ಅಪ್ಡೇಟ್​ ಒಂದಿದೆ.

ಅಭಿಷೇಕ್​ ಶರ್ಮಾಗೆ ಸಿಗುತ್ತಾ ಅವಕಾಶ?

ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ. ಇವರಿಗೆ ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಸ್ಟಾರ್ ವಿಕೆಟ್‌ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರೊಂದಿಗೆ ಅಭಿಷೇಕ್ ಶರ್ಮಾ ಓಪನಿಂಗ್​ ಮಾಡಬಹುದು. ಅಭಿಷೇಕ್ ಶರ್ಮಾ ಎಡಗೈ ಬ್ಯಾಟರ್ ಆಗಿದ್ದರೆ, ಸಂಜು ಸ್ಯಾಮ್ಸನ್ ಬಲಗೈ ಬ್ಯಾಟರ್​ ಆಗಿದ್ದಾರೆ. ಲೆಫ್ಟ್​ ರೈಟ್​ ಕಾಂಬಿನೇಷನ್​ ವರ್ಕೌಟ್​​ ಆಗಬಹುದು.

ವೃತ್ತಿಜೀವನ ಹೀಗಿದೆ?

ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಪರ 8 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 22.71 ಸರಾಸರಿಯಲ್ಲಿ 159 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 1 ಶತಕ ಸಿಡಿಸಿದ್ದಾರೆ. ಇವರು 63 ಐಪಿಎಲ್ ಪಂದ್ಯಗಳಲ್ಲಿ 155.13 ಸ್ಟ್ರೈಕ್ ರೇಟ್‌ನಲ್ಲಿ 128 ಬೌಂಡರಿ ಮತ್ತು 73 ಸಿಕ್ಸರ್‌ಗಳನ್ನು ಒಳಗೊಂಡಂತೆ 1376 ರನ್ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಹೀಗಿದೆ!

ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್​), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವಿಶಾಕ್, ಅವೇಶ್ ಖಾನ್ ಯಶ್ ದಯಾಳ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment