/newsfirstlive-kannada/media/post_attachments/wp-content/uploads/2025/06/PRASIDH-KRISHNA-2.jpg)
ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಈ ಬಾರಿ ಬಿಗ್ ಬ್ಯಾಟಲ್ ನಡೆಯಲಿದೆ. ಇಂಗ್ಲೆಂಡ್ ಘಟಾನುಘಟಿ ಬ್ಯಾಟರ್ಸ್ ವರ್ಸಸ್ ಭಾರತದ ಅನಾನುಭವಿ ಬೌಲರ್ಸ್ ನಡುವಿನ ಯುದ್ಧ ಕ್ರಿಕೆಟ್ ಲೋಕದ ಗಮನ ಸೆಳೆದಿದೆ. ಅನಾನುಭವಿಗಳೇ ತುಂಬಿರೋ ಇಂಡಿಯನ್ ಪೇಸ್ ಅಟ್ಯಾಕ್ ಆಂಗ್ಲರಿಗೆ ಕೌಂಟರ್ ಕೊಡುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
ಆಂಗ್ಲರ ನಾಡು ಇಂಗ್ಲೆಂಡ್ನಲ್ಲಿ ಬೌಲರ್ಗಳೇ ಮ್ಯಾಚ್ ವಿನ್ನರ್ಸ್. ವೇಗಿಗಳಿಗೆ ನೆರವಾಗೋ ಪೇಸ್ ಅಂಡ್ ಬೌನ್ಸಿ ಟ್ರ್ಯಾಕ್ನಲ್ಲಿ ಬೌಲರ್ಗಳು ಬೆಂಕಿಯುಂಡೆಗಳನ್ನೆ ಉಗುಳ್ತಾರೆ. ಒಂದು ಕ್ಷಣ ಬ್ಯಾಟ್ಸ್ಮನ್ ಯಾಮಾರಿದ್ರೂ ಮುಗಿತು ಕಥೆ ವಿಕೆಟ್ ಎಗರಿರುಯತ್ತೆ. ವೇಗಿಗಳ ಪಾಲಿಗೆ ಇಂಗ್ಲೆಂಡ್ನ ಕಂಡಿಷನ್ಸ್ ಅಂದ್ರೆ ಒಂದರ್ಥದಲ್ಲಿ ಸ್ವರ್ಗ. ಈ ಬೌಲರ್ಗಳ ಪಾಲಿನ ಸ್ವರ್ಗದಲ್ಲಿ ಹೊಸ ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗ್ತಿದೆ.
ಇದನ್ನೂ ಓದಿ: ಪೂರನ್ ಅಚ್ಚರಿಯ ನಿರ್ಧಾರ.. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ..!
ಜೂನ್ 20ರಿಂದ ಆರಂಭವಾಗೋ ಇಂಡೋ-ಇಂಗ್ಲೆಂಡ್ ನಡುವಿನ ಬ್ಯಾಟಲ್ನಲ್ಲೂ ಅಷ್ಟೇ ಬೌಲರ್ಗಳೇ ಮ್ಯಾಚ್ ವಿನ್ನರ್ಸ್. ಹೆಡ್ಡಿಂಗ್ಲೆ, ಎಡ್ಜ್ಬ್ಯಾಸ್ಟನ್, ಲಾರ್ಡ್ಸ್, ಮ್ಯಾಂಚೆಸ್ಟರ್, ಕೆನ್ನಿಂಗ್ಟನ್ ಓವಲ್.. ಐದು ಟೆಸ್ಟ್ ಪಂದ್ಯಗಳು ನಡೆಯೋ ಈ ಐದೂ ಸ್ಟೇಡಿಯಂಗಳೂ ಬೌಲರ್ಗಳಿಗೆ ಹೆಚ್ಚು ನೆರವಾಗಲಿದೆ. ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಇಂಗ್ಲೆಂಡ್ಗೆ ಹೋಲಿಸಿದ್ರೆ ಡಲ್ ಹೊಡೆಯುತ್ತಿದೆ.
ಬೂಮ್ರಾನೇ ಬೌಲಿಂಗ್ ಬಲ.. ಎಲ್ಲ ಪಂದ್ಯ ಆಡಲ್ಲ
ಇಂಗ್ಲೆಂಡ್ ಪ್ರವಾಸದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾನೇ ಟೀಮ್ ಇಂಡಿಯಾದ ಬೌಲಿಂಗ್ ಬಲ ಎನಿಸಿದ್ದಾರೆ. ಆಂಗ್ಲರ ನಾಡಲ್ಲಿ 17 ಇನ್ನಿಂಗ್ಸ್ಗಳನ್ನಾಡಿರುವ ಬೂಮ್ರಾ, 37 ವಿಕೆಟ್ ಉರುಳಿಸಿದ್ದಾರೆ. ಉಳಿದೆಲ್ಲಾ ಬೌಲರ್ಗಳಿಂತ ಇಂಗ್ಲೆಂಡ್ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಅನುಭವ ಬೂಮ್ರಾಗಿದೆ. ಈ ಅನುಭವಿ ಬೂಮ್ರಾ 5 ಪಂದ್ಯಗಳ ಪೈಕಿ 3 ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ. 2 ಪಂದ್ಯಗಳಲ್ಲಿ ಬೂಮ್ರಾ ಅಲಭ್ಯತೆ ಟೀಮ್ ಇಂಡಿಯಾ ಕಾಡಲಿದೆ.
ಸಿರಾಜ್ ಮೇಲೆ ಒತ್ತಡ
ಬೂಮ್ರಾ ಬಿಟ್ರೆ ವೇಗಿ ಮೊಹಮ್ಮದ್ ಸಿರಾಜ್ಗೆ ಇಂಗ್ಲೆಂಡ್ ನಾಡಲ್ಲಿ ಆಡಿದ ಅನುಭವ ಇದೆ. ಆಡಿದ 5 ಪಂದ್ಯಗಳಿಂದ 24 ವಿಕೆಟ್ ಬೇಟೆಯಾಡಿ ಮಿಂಚಿದ್ದಾರೆ. ಈ ಬಾರಿ ಸಿರಾಜ್ಗೆ ಬೌಲಿಂಗ್ ಪಾರ್ಟನರ್ ಅಲಭ್ಯತೆ ಕಾಡಲಿದೆ. ಬೂಮ್ರಾ ಅಲಭ್ಯರಾಗೋದ್ರಿಂದ ಸಿರಾಜ್ಗೆ ಒತ್ತಡ ಹೆಚ್ಚಲಿದೆ. ಒತ್ತಡಕ್ಕೆ ಸಿಲುಕಿದ ಸಂದರ್ಭಗಳಲ್ಲಿ ಲೈನ್ ಅಂಡ್ ಲೆಂಥ್ ಕಂಡುಕೊಳ್ಳುವಲ್ಲಿ ವಿಫಲರಾಗಿ ರನ್ಬಿಟ್ಟು ಕೊಟ್ಟ, ವಿಕೆಟ್ ಬೇಟೆಯಾಡುವಲ್ಲಿ ಎಡವಿದ ಹಲವು ಉದಾಹರಣೆಗಳಿವೆ. ಇಂಗ್ಲೆಂಡ್ನ ಬೌಲಿಂಗ್ ಟ್ರ್ಯಾಕ್ ರೆಕಾರ್ಡ್ ಸಮಾಧಾನ ತರಿಸಿದ್ರೂ ಒತ್ತಡವನ್ನ ಹ್ಯಾಂಡಲ್ ಮಾಡುವಲ್ಲಿ ಎಡವಿರೋದು ಟೆನ್ಶನ್ಗೆ ಕಾರಣವಾಗಿದೆ.
ತಂಡದ ಕೈ ಹಿಡಿತಾರಾ ಕನ್ನಡಿಗ ‘ಪರ್ಪಲ್ ಪ್ರಸಿದ್ಧ್’?
ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಸದ್ಯ ಸಾಲಿಡ್ ರಿಧಮ್ನಲ್ಲಿದ್ದಾರೆ. ಐಪಿಎಲ್ನಲ್ಲಿ ಹೈಯೆಸ್ಟ್ ವಿಕೆಟ್ ಬೇಟೆಯಾಡಿ ಪರ್ಪಲ್ ಕ್ಯಾಪ್ ಗೆದ್ದ ಪ್ರಸಿದ್ಧ್ ಇದೀಗ ಇಂಗ್ಲೆಂಡ್ ಚಾಲೆಂಜ್ಗೆ ಸಜ್ಜಾಗಿದ್ದಾರೆ. ರೆಡ್ಬಾಲ್ ಫಾರ್ಮೆಟ್ಗೆ ಶಿಫ್ಟ್ ಆಗ್ತಿರೋ ಪ್ರಸಿದ್ಧ್ಗೆ ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಅನುಭವವಿಲ್ಲ. ಕೌಂಟಿ ಕ್ರಿಕೆಟ್ನಲ್ಲಿ 3 ಪಂದ್ಯ ಆಡಿದ್ರೂ 4 ವಿಕೆಟ್ ಉರುಳಿಸಿದ್ದಾರಷ್ಟೇ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ ಒಂದೇ ಪಂದ್ಯದಲ್ಲಿ ಪ್ರಸಿದ್ಧ್ 6 ವಿಕೆಟ್ ಉರುಳಿಸಿದ್ರು. ಇಂಗ್ಲೆಂಡ್ ಕಂಡಿಷನ್ಸ್ಗೆ ಸಾಮ್ಯತೆ ಇರೋ ಆಸ್ಟ್ರೇಲಿಯಾದಲ್ಲಿ ಉತ್ತಮ ಆಟವಾಡಿರೋದು ಸದ್ಯಕ್ಕೆ ಸಮಾಧಾನ ತರಿಸಿದೆ.
ಇದನ್ನೂ ಓದಿ: ಪೂರನ್ ಅಚ್ಚರಿಯ ನಿರ್ಧಾರ.. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ..!
ಆರ್ಷ್ದೀಪ್ ಎಂಟ್ರಿ..
ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ರೈಟ್ ಆರ್ಮ್ ಪೇಸರ್ಗಳ ಇದ್ದ ತಂಡಕ್ಕೆ ಲೆಫ್ಟ್ ಆರ್ಮ್ ಪೇಸರ್ ಆರ್ಷ್ದೀಪ್ ಎಂಟ್ರಿ ಬ್ಯಾಲೆನ್ಸ್ ತಂದಿದೆ. ಇಂಗ್ಲೆಂಡ್ನಲ್ಲಿ 5 ಕೌಂಟಿ ಪಂದ್ಯಗಳನ್ನ ಆಡಿದ ಅನುಭವವೂ ಆರ್ಷ್ದೀಪ್ಗಿದ್ದು, 13 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಒಂದೇ ಒಂದು ಟೆಸ್ಟ್ ಪಂದ್ಯವನ್ನ ಆಡಿದ ಅನುಭವ ಇಲ್ಲ ಅನ್ನೋದು ಮೈನಸ್ ಆಗಿದೆ.
ಆಕಾಶ್ದೀಪ್ ಆಸರೆಯಾಗ್ತಾರಾ?
ವೇಗಿಗಳ ವಿಭಾಗದಲ್ಲಿರೋ ಇನ್ನೊಬ್ಬ ಬೌಲರ್ ಆಕಾಶ್ದೀಪ್ ಕೂಡ ಇಂಗ್ಲೆಂಡ್ನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಆಡಿಲ್ಲ. ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವ ಇದ್ರೂ ಎಫೆಕ್ಟಿವ್ ಅನಿಸಿಲ್ಲ. ಇಂಡಿಯನ್ ಕಂಡಿಷನ್ಸ್ನಲ್ಲೂ ಒಕೆ ಒಕೆ ಪರ್ಫಾಮೆನ್ಸ್ ನೀಡಿರುವ ಆಕಾಶ್ದೀಪ್, ಇಂಗ್ಲೆಂಡ್ನಲ್ಲಿ ತಂಡಕ್ಕೆ ಆಸರೆಯಾಗ್ತಾರಾ? ಇದು ದೊಡ್ಡ ಪ್ರಶ್ನೆಯಾಗಿದೆ.
ಒಂದೆಡೆ ಟೀಮ್ ಇಂಡಿಯಾ ಬೌಲಿಂಗ್ ಲೈನ್ ಅಪ್ನಲ್ಲಿ ಅನಾನುಭವಿಗಳೇ ತುಂಬಿದ್ರೆ ಇಂಗ್ಲೆಂಡ್ ಬ್ಯಾಟಿಂಗ್ ಆರ್ಡರ್ನಲ್ಲಿ ಘಟಾನುಘಟಿಗಳಿದ್ದಾರೆ. ಅಗ್ರೆಸ್ಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಆಡ್ತಿರೋ ಇಂಗ್ಲೆಂಡ್ ಬ್ಯಾಟರ್ಸ್, ಟೀಮ್ ಇಂಡಿಯಾ ಬೌಲರ್ಗಳ ಸವಾರಿ ಮಾಡೋಕೆ ಕಾದಿದ್ದಾರೆ. ಇದಕ್ಕೆ ಇಂಡಿಯನ್ ಪೇಸ್ ಅಟ್ಯಾಕ್ ಹೇಗೆ ಟಕ್ಕರ್ ಕೊಡುತ್ತೆ? ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ: ಫ್ರಾಂಚೈಸಿ ಮಾರಾಟಕ್ಕೆ ಮುಂದಾದ್ರಂತೆ RCB ಮಾಲೀಕರು.. ಎಷ್ಟು ಕೋಟಿಗೆ ಡಿಮ್ಯಾಂಡ್ ಇಡಬಹುದು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ