6 ತಿಂಗಳ ಅಂತರದಲ್ಲಿ ತಂದೆ, ಅಣ್ಣನ ಅಗಲಿಕೆ.. ಆಕಾಶ್ ದೀಪ್ ಬದುಕೇ ಒಂದು ಕರುಳು ಹಿಂಡುವ ಕತೆ

author-image
Ganesh
Updated On
6 ತಿಂಗಳ ಅಂತರದಲ್ಲಿ ತಂದೆ, ಅಣ್ಣನ ಅಗಲಿಕೆ.. ಆಕಾಶ್ ದೀಪ್ ಬದುಕೇ ಒಂದು ಕರುಳು ಹಿಂಡುವ ಕತೆ
Advertisment
  • ಎಡ್ಜ್​​​ಬಾಸ್ಟನ್ ಟೆಸ್ಟ್​ ಗೆಲುವಿನ ಹೀರೋ ಆಕಾಶ್​ ದೀಪ್
  • ಹೆಸರಷ್ಟೇ ಆಕಾಶ್ ದೀಪ್​.. ಬದುಕೆಲ್ಲ ಕತ್ತಲೆ.. ಕತ್ತಲೆ
  • ಎಲ್ಲರ ಕರಳು ಹಿಂಡುತ್ತೆ ಇವರ ಕರುಣಾಜನಕ ಕಥೆ

ಆಕಾಶ್​ ದೀಪ್​.. ಎಡ್ಜ್​ಬಾಸ್ಟನ್​​ನಲ್ಲಿ ಮ್ಯಾಚ್ ವಿನ್ನರ್.. ಬೂಮ್ರಾ ಅಲಭ್ಯತೆಯಲ್ಲಿ ಕಣಕ್ಕಿಳಿದಿದ್ದ ಆಕಾಶ್ ದೀಪ್, ಟೀಮ್ ಇಂಡಿಯಾ ಪಾಲಿಗೆ ಗೆಲುವಿನ ದೀಪ. ಗೆಲುವಿನ ದೀಪವಾಗಿರುವ ಆಕಾಶ್ ದೀಪ್ ಜೀವನದ ಕಥೆ ನಿಜಕ್ಕೂ ಕರುಣಾಜನಕ.

ಈ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ನನ್ನ ಸಹೋದರಿ ಕಳೆದ 2 ತಿಂಗಳಿಂದ ಕ್ಯಾನ್ಸರ್​​ನಿಂದ ಬಳಲುತ್ತಿದ್ದಾಳೆ. ಈಗ ಸ್ಥಿರವಾಗಿದ್ದಾಳೆ. ನಾನು ಚೆಂಡನ್ನ ಕೈಗೆತ್ತಿಕೊಂಡಾಗಲ್ಲಾ ಅವಳ ಆಲೋಚನೆಗಳು, ಮುಖ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು. ಆಕೆ ನನ್ನ ಪ್ರದರ್ಶನದಿಂದ ಸಂತೋಷವಾಗಿರ್ತಾಳೆ. ಈ ಪ್ರದರ್ಶನವನ್ನು ಅವಳಿಗೆ ಡೆಡಿಕೇಟ್ ಮಾಡ್ತೇನೆ. ಈ ಗೆಲುವು ಆಕೆಯ ನಗುವನ್ನ ಮರಳಿ ತರುತ್ತದೆ -ಆಕಾಶ್ ದೀಪ್, ಟೀಂ ಇಂಡಿಯಾ ವೇಗಿ

ಇದನ್ನೂ ಓದಿ: ಚೊಚ್ಚಲ ಟೆಸ್ಟ್​ ಗೆದ್ದ ಖುಷಿ, ಗಿಲ್ ದೊಡ್ಡ ಎಡವಟ್ಟು.. ಕ್ಯಾಪ್ಟನ್​​ನಿಂದ ಒಪ್ಪಂದ ಉಲ್ಲಂಘನೆ​​!

publive-image

ಇದು ಕ್ಯಾನ್ಸರ್‌ಪೀಡಿತ ಸಹೋದರಿಯನ್ನು ನೆನದು ಎಡ್ಜ್​ ಬಾಸ್ಟನ್ ಹೀರೋ ನುಡಿದ ಭಾವುಕ ಮಾತುಗಳು. ಮನಸಲ್ಲಿ ನೋವಿದ್ರೂ, ಗೆಲುವಿಗಾಗಿ ಹೋರಾಡಿದ ಆಕಾಶ್ ದೀಪ್​ ಮನದಾಳದ ಮಾತು. ಈ ಅನ್‌ಸಂಗ್ ಹೀರೋ ಆಕಾಶ್ ದೀಪ್​​​​​​ ಬದುಕೆ ಒಂದು ಕರುಳು ಹಿಂಡುವ ಕಥೆಯಾಗಿದೆ.

ಬದುಕೆಲ್ಲ ಕತ್ತಲೆ, ಕತ್ತಲೆ

ಎಡ್ಜ್ ಬಾಸ್ಟನ್​ನಲ್ಲಿ ಟೆಸ್ಟ್​​ನಲ್ಲಿ ಆಕಾಶ್ ದೀಪ್ ಬರೋಬ್ಬರಿ 10 ವಿಕೆಟ್ ಉರುಳಿಸಿದ್ರು. ಘಟನಾನುಘಟಿ ಬೌಲರ್​ಗಳಿಗೆ ಕಾಡಿದ ದೀಪ್, ಟೀಮ್ ಇಂಡಿಯಾ ಗೆಲುವಿನ ದೀಪವಾದರು. ಆಕಾಶ್ ದೀಪ್ ಬದುಕಲ್ಲಿ ಅನುಭವಿಸಿದ ನೋವುಗಳು ಎಂತವರಿಗೂ ಸ್ಫೂರ್ತಿಯ ಕಥೆ.

ಕಠಿಣ ಶ್ರಮಕ್ಕೆ ಸಿಕ್ಕ ಪ್ರತಿಫಲ

ಟೆಸ್ಟ್ ತಂಡಕ್ಕೆ ಆಕಾಶ್ ದೀಪ್ ಆಯ್ಕೆ, ಬೂಮ್ರಾ ಅಲಭ್ಯತೆಯಲ್ಲಿ ಕಣಕ್ಕಿಳಿದಿದ್ದು ಅದೃಷ್ಟ ಅವಕಾಶ ಅನ್ನೋದು ಬಹುತೇಕರ ಊಹೆ. ಆದ್ರೆ ಅದು ಕೇವಲ ಊಹೆಯಷ್ಟೇ ನಿಜವಲ್ಲ. ​​ಆಕಾಶ್​ ದೀಪ್ ಹಾರ್ಡ್​​ವರ್ಕ್​, ಡೆಡಿಕೇಷನ್​​ನ​ ಸಿಕ್ಕ ಪ್ರತಿಫಲವೇ ಆಗಿದೆ. ಇದಕ್ಕೆ ಸಾಕ್ಷಿ ಟನ್ನಿಸ್ ಬಾಲ್​ ಟು ಲೆದರ್ ಬಾಲ್ ಜರ್ನಿ.

ಇದನ್ನೂ ಓದಿ: ಇಬ್ಬರು ಕನ್ನಡಿಗರಿಗೆ ಪ್ಲೇಯಿಂಗ್-11ನಿಂದ ಗೇಟ್​ಪಾಸ್?​ ಲಾರ್ಡ್ಸ್​​ ಟೆಸ್ಟ್​ನಲ್ಲಿ ಒಟ್ಟು 4 ಮೇಜರ್ ಸರ್ಜರಿ..!

publive-image

ಬಿಹಾರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಆಕಾಶ್ ದೀಪ್, ತಂದೆ ರಾಮ್ಜಿ ಸಿಂಗ್​ ಸಿಂಗ್​ ಟೀಚರ್. ಟೀಚರ್ ಆಗಿದ್ದ ತಂದೆಗೆ ಮಗ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲಿ ಎಂಬ ಮಹಾದಾಸೆ. ಇದೇ ಕಾರಣಕ್ಕೆ ಪೊಲೀಸ್​ ಪರೀಕ್ಷೆಯನ್ನು ಬರೆಸಿದ್ದರು. ಆಕಾಶ್ ದೀಪ್​ಗೆ ಕ್ರಿಕೆಟ್​​ ಜೀವನದ ಗುರಿಯಾಗಿತ್ತು. ಇದಕ್ಕಾಗಿ 2010ರಲ್ಲಿ ಆಕಾಶ್ ದೀಪ್ ಪಶ್ಚಿಮ ಬಂಗಾಳಕ್ಕೆ ವಲಸೆ ಬರಬೇಕಾಯ್ತು. ಈ ವೇಳೆ ಆಕಾಶ್ ದೀಪ್​ಗೆ ಕನಸಿಗೆ ಮತ್ತಷ್ಟು ನೀರು ಎರೆದ ಚಿಕ್ಕಪ್ಪ ಹತ್ತಿರದ ಕ್ರಿಕೆಟ್ ಆಕಾಡಮಿಗೆ ಸೇರಿಸಿದ್ರು. ಇಲ್ಲಿಂದಲೇ ಶುರುವಾಗಿದ್ದು ಆಕಾಶ್ ದೀಪ್ ಕ್ರಿಕೆಟ್ ಜರ್ನಿ.

ತಂದೆ, ಅಣ್ಣನ ಅಕಾಲಿಕ ನಿಧನ

ಬೆಂಗಾಲ್​ಗೆ ಬಂದ ಆಕಾಶ್ ದೀಪ್​​​, ಕನಸಿಗೆ ರೆಕ್ಕೆ ಪುಕ್ಕು ಬಂತು. ಬ್ಯಾಟರ್ ಆಗಲು ಬಯಸಿದ್ದ ಆಕಾಶ್ ದೀಪ್​ಗೆ ಕೋಚ್ ಫಾಸ್ಟ್ ಬೌಲರ್ ಆಗುವ ಸಲಹೆ ನೀಡಿದರು. ಇದು ಆಕಾಶ್ ದೀಪ್​ಗೆ ಪ್ಲಸ್ ಆಯ್ತು. ಇದೇ ವೇಳೆ ​ ಜೀವನದಲ್ಲಿ ಬರ ಸಿಡಿಲು ಬಡಿದಿತ್ತು. ಅದೇ ತಂದೆಯ ಅಕಾಲಿಕ ಮರಣ. ಇನ್ನೇನು ತಂದೆಯ ಸಾವಿನ ಆಘಾತದಿಂದ ಸುಧಾರಿಸಿಕೊಳ್ಳುವ ಮುನ್ನವೇ ಅಣ್ಣನ ಸಾವು. ಕೇವಲ 6 ತಿಂಗಳ ಅಂತರದಲ್ಲಿ ಕಂಡ ಈ ಸಾವಿನ ಅಘಾತ ಬದುಕನ್ನೇ ಬಹುತೇಕ ಕಸಿದಿತ್ತು. ಆರ್ಥಿಕ ಸಮಸ್ಯೆ ಕಾಡಿತು. ಹೀಗಾಗಿ ಲೋಕಲ್​ ಟೆನ್ನಿಸ್​ ಬಾಲ್​ ಕ್ರಿಕೆಟ್​ ಟೂರ್ನಮೆಂಟ್​​ ಆಡ್ತಿದ್ದ ಆಕಾಶ್ ದೀಪ್, ದಿನಕ್ಕೆ 600 ರೂ ಸಂಪಾದನೆ ಮಾಡ್ತಿದರು.

ಬೆಂಗಾಲ್​ U-23ಗೆ ಆಯ್ಕೆ

ಒಂದ್ಕಡೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡ್ತಿದ್ದ ಆಕಾಶ್ ದೀಪ್, ಮತ್ತೊಂದೆಡೆ ಫಸ್ಟ್​ ಡಿವಿಷನ್​ ಲೀಗ್​ನಲ್ಲಿ ಆಡ್ತಿದ್ದರು. ಇದೇ ವೇಳೆ ಶಮಿಯ ಪರಿಚಯವೂ ಸಿಕ್ತು. ಫಿಟ್ನೆಸ್ ಮೇಲೆ ಫೋಕಸ್ ಮಾಡಿದ್ದ ಆಕಾಶ್ ದೀಪ್, 135ಕ್ಕೂ ಹೆಚ್ಚಿನ ವೇಗದಲ್ಲಿ ಬೌಲ್ ಮಾಡ್ತಿದ್ದರು. ಕ್ಲಬ್ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆಕಾಶ್ ದೀಪ್, 2019ರಲ್ಲಿ ಬೆಂಗಾಲ್​ ಅಂಡರ್​-23 ತಂಡಕ್ಕೆ ಆಯ್ಕೆಯಾದರು.

publive-image

ಇದೇ ವರ್ಷ ಡೊಮೆಸ್ಟಿಕ್ ಕ್ರಿಕೆಟ್​ಗೂ ಡೆಬ್ಯು ಮಾಡಿದ ಆಕಾಶ್ ದೀಪ್, ಸಿಕ್ಕ ಅವಕಾಶ ಎರಡೂ ಕೈಗಳಿಂದ ಬಾಚಿಕೊಂಡರು. ಆ ಬಳಿಕ ಐಪಿಎಲ್​​ಗೂ ಪದಾರ್ಪಣೆ ಮಾಡಿದ ಆಕಾಶ್ ದೀಪ್, 2024ರಲ್ಲಿ ಇದೇ ಇಂಗ್ಲೆಂಡ್ ಎದುರು ಟೀಮ್ ಇಂಡಿಯಾ ಪರ ಡೆಬ್ಯು ಮಾಡಿದ್ರು. ಇಂಜುರಿ ಕಾರಣಕ್ಕೆ ಬಾರ್ಡರ್​ ಗವಾಸ್ಕರ್ ಟೆಸ್ಟ್ ಸರಣಿಯಿಂದ ದೂರವಾಗಿದ್ದ ಆಕಾಶ್ ದೀಪ್, ಇದೀಗ ಇಂಗ್ಲೆಂಡ್ ಎದುರಿನ ಸರಣಿಗೆ ಕಮ್​ಬ್ಯಾಕ್ ಮಾಡಿದ್ರು. ಟೀಮ್ ಇಂಡಿಯಾದ ಗೆಲುವಿನ ರೂವಾರಿಯಾದ್ರು.
ಜೀವನದ ಸಂಕಷ್ಟಗಳ ನಡುವೆ ಕುಗ್ಗದ ಆಕಾಶ್​​ ದೀಪ್ ಛಲದ ಹೋರಾಟ ನಡೆಸಿ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಇದೇ ರೀತಿ ಟೀಮ್​ ಇಂಡಿಯಾ ಪರ ಮಿಂಚಲಿ.. ಪ್ರಜ್ವಲಿಸಲಿ ಅನ್ನೋದೇ ಎಲ್ಲರ ಆಶಯ.

ಇದನ್ನೂ ಓದಿ: ಹಾರ್ಟ್​ ಅಟ್ಯಾಕ್​ಗೆ ಮತ್ತೊಂದು ಕಾರಣ ಬಿಚ್ಚಿಟ್ಟ ಹೃದ್ರೋಗ ತಜ್ಞರು; ಬೆಂಗಳೂರು ಜನರ ಆತಂಕ ಏನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment