ಹೆಣ್ಣಾಗಿ ಬದಲಾದ ಭಾರತದ ಖ್ಯಾತ ಕ್ರಿಕೆಟರ್​ ಪುತ್ರ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

author-image
Ganesh Nachikethu
Updated On
2024ರ ಟಿ20 ವಿಶ್ವಕಪ್​​.. ಟೀಮ್​ ಇಂಡಿಯಾಗೆ ಬಂತು ಆನೆಬಲ!
Advertisment
  • ಟೀಮ್​ ಇಂಡಿಯಾದ ದಿಗ್ಗಜನಿಗೆ ಶಾಕ್​​ ಕೊಟ್ಟ ಪುತ್ರ
  • ದಿಢೀರ್​ ಹೆಣ್ಣಾಗಿ ಬದಲಾದ ಮಾಜಿ ಕ್ರಿಕೆಟರ್​​ ಮಗಾ
  • 10 ತಿಂಗಳಿಂದ ಹಾರ್ಮೋನ್ ಬದಲಾವಣೆಗೆ ಚಿಕಿತ್ಸೆ

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಕೋಚ್​​ ಸಂಜಯ್​​ ಬಂಗಾರ್​​. ಇವರಿಗೆ ಕಳೆದ ಸೀಸನ್​​ಗೆ ಆರ್​​ಸಿಬಿ ತಂಡದಿಂದ ಕೊಕ್​ ನೀಡಲಾಗಿತ್ತು. ಸಂಜಯ್​​ ಬಂಗಾರ್​​​ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​​​ ಕೂಡ ಹೌದು. ಟೀಮ್​ ಇಂಡಿಯಾದ ಈ ದಿಗ್ಗಜ ತನ್ನ ಮಗನ ವಿಚಾರಕ್ಕೆ ಭಾರೀ ಸುದ್ದಿ ಆಗಿದ್ದಾರೆ.

ಹೆಣ್ಣಾದ ಸಂಜಯ್​ ಬಂಗಾರ್​​ ಪುತ್ರ

ಸಂಜಯ್ ಬಂಗಾರ್ ಅವರ ಹಿರಿಯ ಮಗ ಆರ್ಯನ್ ತನ್ನ ಹಾರ್ಮೋನ್ ಬದಲಿಸಿಕೊಂಡಿದ್ದಾರೆ. ಈ ಬಗ್ಗೆ ಆರ್ಯನ್​ ಅವರೇ ಮಾಹಿತಿ ನೀಡಿದ್ದು, ನಾನು ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದೇನೆ ಎಂದಿದ್ದಾರೆ. ಹಾಗೆಯೇ ಇನ್ಮುಂದೆ ನನ್ನ ಹೆಸರು ಆರ್ಯನ್ ಅಲ್ಲ, ಅನಯಾ ಎಂದು ಹೇಳಿದ್ದಾರೆ.

publive-image

ಲಿಂಗ ಪರಿವರ್ತನೆ ಏಕೆ?

ಅನಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಬರೋಬ್ಬರಿ 10 ತಿಂಗಳ ನಂತರ ಈಗ ಹೆಣ್ಣಾಗಿದ್ದಾರೆ. ಲಿಂಗ ಪರಿವರ್ತನೆಗಾಗಿ ತನ್ನ ಕ್ರಿಕೆಟ್​​ ಕರಿಯರ್​ ಅನ್ನೇ ಬಿಟ್ಟಿದ್ದೇನೆ. ನನಗೆ ಹೆಣ್ಣಾಗೋ ಆಸೆ ಮೊದಲಿನಿಂದಲೂ ಇತ್ತು ಎಂದು ಹೇಳಿದ್ದಾರೆ.

ಕ್ರಿಕೆಟರ್​ ಆಗೋ ಕನಸು ಕಂಡಿದ್ದ ಅನಯಾ

ಅನಯಾ ಸಂಜಯ್​ ಬಂಗಾರ್​ ಹಾಗೇ ಕ್ರಿಕೆಟರ್​ ಆಗಬೇಕು ಅನ್ನೋ ಕನಸು ಕಂಡಿದ್ರು. ತನ್ನ ಬಾಲ್ಯದಿಂದ ಸಾಕಷ್ಟು ಟ್ರೈನಿಂಗ್​ ಕೂಡ ಪಡೆದುಕೊಂಡಿದ್ರು. ಎಡಗೈ ಬ್ಯಾಟರ್​ ಆಗಿದ್ದ ಇವರು ಹಲವು ಅಂತರಾಷ್ಟ್ರೀಯ ಕ್ಲಬ್‌ ಪರ ಆಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment