Advertisment

Audi, BMW, 5 ಕೆಜಿ ಬೆಳ್ಳಿ! ಐಷಾರಾಮಿ ಬಂಗಲೆಗಳು.. ಕೋಚ್ ಗಂಭೀರ್​ ಆಸ್ತಿ ಅಬ್ಬಾಬ್ಬ..!

author-image
Ganesh
Updated On
Audi, BMW, 5 ಕೆಜಿ ಬೆಳ್ಳಿ! ಐಷಾರಾಮಿ ಬಂಗಲೆಗಳು.. ಕೋಚ್ ಗಂಭೀರ್​ ಆಸ್ತಿ ಅಬ್ಬಾಬ್ಬ..!
Advertisment
  • ಟೀಂ ಇಂಡಿಯಾದ ನೂತನ ಕೋಚ್ ಆಗಿ ಗಂಭೀರ್ ಆಯ್ಕೆ
  • ಗೌತಮ್​​ ಗಂಭೀರ್​​ಗೆ ಏನೆಲ್ಲ ಕ್ರೇಜ್ ಇದೆ ಗೊತ್ತಾ ನಿಮಗೆ..?
  • ಹೆಡ್​ ಕೋಚ್ ಗೌತಮ್ ಗಂಭೀರ್​​​ ಎಷ್ಟು ಕೋಟಿ ಒಡೆಯ..?

ಟಿ20 ವಿಶ್ವಕಪ್ ಬೆನ್ನಲ್ಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನು ತೊರೆದಿದ್ದಾರೆ. ದ್ರಾವಿಡ್ ನಿಭಾಯಿಸುತ್ತಿದ್ದ ಜವಾಬ್ದಾರಿಯನ್ನು ಗೌತಮ್ ಗಂಭೀರ್ ಹೆಗಲಿಗೆ ಬಿಸಿಸಿಐ ನೀಡಿದೆ. 2027ರವರೆಗೆ ಟೀಂ ಇಂಡಿಯಾ ನೂತನ ಕೋಚ್ ಆಗಿ ಗಂಭೀರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Advertisment

ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್ ಆಗಿದ್ದ ಗಂಭೀರ್, ಐಪಿಎಲ್​​ನಲ್ಲೂ ಮಿಂಚಿದ್ದಾರೆ. ಬಿಜೆಪಿ ಸಂಸದರಾಗಿಯೂ ಸೇವೆ ಸಲ್ಲಿಸಿರುವ ಅವರು, ಐಪಿಎಲ್​ನಲ್ಲಿ ಕಾಮೆಂಟರಿ, ಮೆಂಟರ್​​ಶಿಪ್​​ ಮೂಲಕ ಸಾಕಷ್ಟು ಆಸ್ತಿ ಗಳಿಸಿದ್ದಾರೆ.

ಗಂಭೀರ್ ಸಂಪಾದನೆ ಎಷ್ಟು..?
ಗೌತಮ್ ಗಂಭೀರ್ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಒಟ್ಟು ಸಂಪತ್ತು ಸುಮಾರು 265 ಕೋಟಿ ರೂಪಾಯಿ. ಕ್ರಿಕೆಟ್‌ನಿಂದ ಮಾತ್ರವಲ್ಲದೇ ಬ್ರ್ಯಾಂಡ್ ಪ್ರಾಯೋಜಕತ್ವದಿಂದಲೂ ಹಣ ಗಳಿಸುತ್ತಾರೆ. ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಕೂಡ ಮಾಡಿದ್ದು, ಅದರಿಂದಲೂ ಹಣ ಸಂಪಾದನೆ ಮಾಡ್ತಾರೆ. ಮಾಹಿತಿಗಳ ಪ್ರಕಾರ ಸಣ್ಣ ವ್ಯಾಪಾರಗಳು, ರೆಸ್ಟೋರೆಂಟ್‌ಗಳು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ:ಕಾಲೇಜಿನಲ್ಲಿ ಪ್ರೀತಿ, ಪ್ರೇಮ ವಿವಾಹ.. ಪತಿಯ ಸಾವಿನ ಸುದ್ದಿ ಕೇಳಿ ಬಿಲ್ಡಿಂಗ್​​ನಿಂದ ಹಾರಿ ಪ್ರಾಣಬಿಟ್ಟ ಪತ್ನಿ

Advertisment

publive-image

ಸ್ಟಾರ್ ಸ್ಪೋರ್ಟ್ಸ್‌ಗಾಗಿ ಕಾಮೆಂಟರಿ ಮತ್ತು ಇತರೆ ಕ್ರಿಕೆಟ್​​ಗೆ ಸಂಬಂಧಿಸಿ ಮಾಡುವ ಕೆಲಸಕ್ಕಾಗಿ ಸುಮಾರು 1.5 ಕೋಟಿ ರೂಪಾಯಿ ಹಣ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಗಂಭೀರ್ ಸಂಸದರಾಗಿ ಆಯ್ಕೆಯಾಗಿದ್ದರು. ಚುನಾವಣೆ ವೇಳೆ ಅವರು ತಮ್ಮ ಆಸ್ತಿ 12.4 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿಕೊಂಡಿದ್ದರು.

ದೆಹಲಿಯ ರಾಜಿಂದರ್ ನಗರದಲ್ಲಿ ಗಂಭೀರ್ ಐಷಾರಾಮಿ ಮನೆ ಹೊಂದಿದ್ದಾರೆ. ಅದರ ಮೌಲ್ಯ ಸುಮಾರು 15 ಕೋಟಿ. ಗ್ರೇಟರ್ ನೋಯ್ಡಾದ ಜೆಪಿ ವಿಶ್ ಟೌನ್​ನಲ್ಲಿ 4 ಕೋಟಿ ರೂಪಾಯಿ ಮೌಲ್ಯದ ನಿವೇಶನ ಇದೆ. ಜೊತೆಗೆ ಮಲ್ಕಾಪುರ ಗ್ರಾಮದಲ್ಲಿ ಒಂದು ಮನೆಯಿದ್ದು, ಅದರ ಮೌಲ್ಯ 1 ಕೋಟಿ ರೂಪಾಯಿ ಎನ್ನಲಾಗಿದೆ. ಜೊತೆಗೆ 5 ಕೆಜಿ ಬೆಳ್ಳಿ ಕೂಡ ಇದೆ.

publive-image

ಐಪಿಎಲ್‌ನಿಂದ 25 ಕೋಟಿ ಗಳಿಕೆ..?
ಗೌತಮ್ ಗಂಭೀರ್ ಕೊನೆಯ ಐಪಿಎಲ್ ಆಡಿದ್ದು 2018ರಲ್ಲಿ. ಆ ಒಂದು ಋತುವಿನಲ್ಲಿ ಅವರು 2.8 ಕೋಟಿ ರೂಪಾಯಿ ಪಡೆದಿದ್ದರು. ಐಪಿಎಲ್​​ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮೆಂಟರ್ ಆಗಿ ಸೇರಿಕೊಂಡರು. ಐಪಿಎಲ್ 2024-2025ರಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಲು ಗಂಭೀರ್ ಅವರು 25 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್ ತಂಡ 24.75 ಕೋಟಿಗೆ ಖರೀದಿಸಿದೆ. ಗಂಭೀರ್ ಯಾವುದೇ ಪಂದ್ಯವನ್ನು ಆಡದೆ ಇದ್ದರೂ ಐಪಿಎಲ್‌ ಆಟಗಾರರಿಗಿಂತ ಹೆಚ್ಚು ಹಣ ಪಡೆಯುತ್ತಾರೆ.

Advertisment

publive-image

ಗೌತಮ್ ಗಂಭೀರ್​ಗೆ ಕಾರು ಕ್ರೇಜ್​..!
ಗಂಭೀರ್​​ಗೆ ಕಾರುಗಳೆಂದರೆ ತುಂಬಾ ಇಷ್ಟ. ಆಡಿ ಕ್ಯೂ 5 (Audi Q5) ಮತ್ತು ಬಿಎಂಡಬ್ಲ್ಯು 530 ಡಿ (BMW 530D) ಕಾರುಗಳನ್ನ ಹೊಂದಿದ್ದಾರೆ. ಟೊಯೊಟಾ ಕೊರೊಲ್ಲಾ (Toyota Corolla) ಮತ್ತು ಮಹೀಂದ್ರ ಬೊಲೆರೊ ಸ್ಟಿಂಗರ್ (Toyota Corolla) ಕಾರುಗಳು ಕೂಡ ಅವರ ಬಳಿ ಇವೆ. ಮಾತ್ರವಲ್ಲ, Mercedes GLS 350D, Maruti Suzuki SX4 ಕೂಡ ಇದೆ.

ಇದನ್ನೂ ಓದಿ:ನಿಮ್ಮ ಮೊಬೈಲ್​​ನಲ್ಲಿ ಈ App ಇದ್ದರೆ ಕೂಡಲೇ Uninstall ಮಾಡಿ -ಸರ್ಕಾರದಿಂದ ಎಚ್ಚರಿಕೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment