Advertisment

ಕೊಹ್ಲಿ ಮಾತ್ರವಲ್ಲ.. ಟೀಂ ಇಂಡಿಯಾಗೆ ಗೆದ್ದ ಖುಷಿಯಲ್ಲೇ ಡಬಲ್ ಶಾಕ್..!

author-image
Ganesh
Updated On
T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!
Advertisment
  • ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದ ಕೊಹ್ಲಿ
  • ಕೊಹ್ಲಿ ಬೆನ್ನಲ್ಲೇ ಹೆಡ್​ ಮಾಸ್ಟರ್​ ದ್ರಾವಿಡ್​​ಗೂ ಸೆಂಡ್​ ಆಫ್
  • ಟೀಂ ಇಂಡಿಯಾ ಹೆಡ್​​ ಕೋಚ್​​​ ದ್ರಾವಿಡ್ ಅವಧಿ ಅಂತ್ಯ

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕಿಂಗ್ ವಿರಾಟ್ ಕೊಹ್ಲಿ ಇದು ನನ್ನ ಕೊನೆಯ ಟಿ20 ವಿಶ್ವಕಪ್​ ಎಂದು ಕಿಂಗ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ ವಿರಾಟ್ ಟಿ20 ವಿಶ್ವಕಪ್​​ಗೆ ನಿವೃತ್ತಿ ಘೋಷಣೆ ಮಾಡೋದು ಗ್ಯಾರಂಟಿ ಆಗಿದೆ. ಇತ್ತ, ಟೀಮ್​ ಇಂಡಿಯಾ ಹೆಡ್​​ಕೋಚ್ ರಾಹುಲ್​ ದ್ರಾವಿಡ್ ಡ್ರೀಮ್​​​ ಸೆಂಡ್ ಆಫ್ ಸಿಕ್ಕಿದೆ.

Advertisment

ರಾಹುಲ್ ದ್ರಾವಿಡ್ ಮೊದಲ ಒಪ್ಪಂದ 2023ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಕೊನೆಗೊಂಡಿತ್ತು. ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ಬೆನ್ನಲ್ಲೇ ದ್ರಾವಿಡ್ ಅವರೊಂದಿಗಿನ ಒಪ್ಪಂದವನ್ನು ಬಿಸಿಸಿಐ ನವೀಕರಿಸಿತ್ತು. 2024ರ ಟಿ20 ವಿಶ್ವಕಪ್‌ವರೆಗೆ ಅವರನ್ನ ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿತ್ತು.

ವಿಶ್ವಕಪ್ ಅಂತ್ಯದೊಂದಿಗೆ ಟೀಮ್ ಇಂಡಿಯಾ ಜೊತೆಗಿನ ಹೆಡ್​​ ಕೋಚ್​​​ ದ್ರಾವಿಡ್ ಪ್ರಯಾಣ ಅಂತ್ಯವಾಗಿದೆ. ನಿರ್ಗಮಿಸ್ತಿರೋ ಹೆಡ್​​ ಮಾಸ್ಟರ್​ಗೆ ಗೆಲುವಿನ ಉಡುಗೊರೆ ನೀಡಿರುವ ಕ್ರಿಕೆಟರ್ಸ್​, ಮೈದಾನದಲ್ಲೇ ಎತ್ತಾಡಿಸಿ ವಿಶೇಷ ಗೌರವ ಸಲ್ಲಿಸಿದರು.

ಇದನ್ನೂ ಓದಿ:ಕಣ್ಣೀರು ಹಾಕುತ್ತಲೇ ಕೊನೆಯ ಬಾಲ್​​ ಎಸೆದ ಪಾಂಡ್ಯ.. ಎಂದೂ ಅಳದ ಬೂಮ್ರಾ ಕೂಡ ಅತ್ತರು.. ವಿಡಿಯೋ

Advertisment

ಇದನ್ನೂ ಓದಿ:T20 World Cup ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment