ಸೂರ್ಯಕುಮಾರ್ ಅಂಗಳಕ್ಕಿಳಿದ್ರೆ ರನ್ ಸುನಾಮಿ
ದಂಡಂ ದಶಗುಣಂ ಆಟಕ್ಕೆ ಎಲ್ಲರೂ ಕ್ಲೀನ್ಬೋಲ್ಡ್..!
ನೀರು ಕುಡಿದಷ್ಟೇ ಸಲೀಸಾಗಿ ಬಾರಿಸ್ತಾರೆ ಬೌಂಡರಿ..!
ಟಿ20 ಕ್ರಿಕೆಟ್ ಅಂದ್ರೆನೇ ಹೊಡಿಬಡಿ ಆಟ. ಇಲ್ಲೇನಿದ್ರೂ ಬ್ಯಾಟ್ ಸದ್ದು ಮಾಡಿದ್ರೇನೆ ಕಿಮ್ಮತ್ತು. ಆ ಗತ್ತು ಇರೋ ಆಟಗಾರ ಅಂದ್ರೆ ಸೂರ್ಯಕುಮಾರ್ ಯಾದವ್. ಈ ಡಿಸ್ಟ್ರಕ್ಟಿವ್ ಬ್ಯಾಟರ್ ಆನ್ ಫೀಲ್ಡ್ನಲ್ಲಿ ಎಬ್ಬಿಸ್ತಿರೋ ಹಲ್ಚಲ್ ಜೋರಾಗಿರುತ್ತೆ.
ಸೂರ್ಯ ನೋಡೋಕೆ ಮಾತ್ರ ಸೈಲೆಂಟ್. ಆದ್ರೆ ಆಟ ಮಾತ್ರ ಸಿಕ್ಕಾಪಟ್ಟೆ ವೈಲೆಂಟ್. ದಂಡಂ ದಶಗುಣಂ ಆಟಕ್ಕೆ ಎತ್ತಿದ ಕೈ. ಮೈದಾನಕ್ಕೆ ಕಾಲಿಟ್ಟರೆ ಸಾಕು ರನ್ ಸುನಾಮಿ ಸೃಷ್ಟಿಸ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿಕೊಟ್ಟ ಮೂರೇ ವರ್ಷದಲ್ಲಿ ಟಿ20 ಕ್ರಿಕೆಟ್ ಲೋಕವನ್ನ ಕಬ್ಜಾ ಮಾಡಿ, ಅಧಿಪತಿಯಾಗಿ ಮೆರೆದಾಡ್ತಿದ್ದಾರೆ. ಮೋಸ್ಟ್ ಡೇಂಜರಸ್ ಬ್ಯಾಟರ್ ಅನ್ನೋ ಹೆಗ್ಗಳಿಕೆ ಸಂಪಾದಿಸಿದ್ದಾರೆ.
ಮಾಡ್ರನ್ ಕ್ರಿಕೆಟ್ನ ವಿಧ್ವಂಸಕಾರಿ ಬ್ಯಾಟ್ಸ್ಮನ್
ಟಿ20 ಕ್ರಿಕೆಟ್ನಲ್ಲಿ ಸೂರ್ಯನ ಹೆಸರು ಹೇಳಿದ್ರೆ ಸಾಕು, ಬೌಲರ್ಗಳು ಬೆಚ್ಚಿ ಬೀಳ್ತಾರೆ. ಆ ಮಟ್ಟಿಗೆ ವಿಧ್ವಂಸಕಾರಿ ಆಟದಿಂದ ಭಯ ಹುಟ್ಟಿಸಿದ್ದಾರೆ. ಇವರ ಬ್ಯಾಟ್ನಿಂದ ಸಿಡಿಯುವ ಸಿಕ್ಸರ್ಗಳಂತೂ ನಿಜಕ್ಕೂ ನಂಬಲು ಅಸಾಧ್ಯ. ಹಾಗೇಯೆ ಬೌಂಡರಿಗಳನ್ನ ನೀರು ಕುಡಿದಷ್ಟೇ ಸುಲಭವಾಗಿ ಬಾರಿಸುವ ಪಂಟರ್ ಕೂಡ ಹೌದು. ಅದ್ಯಾವ ಮಟ್ಟಿಗೆ ಅಂದರೆ ಬೌಂಡರಿ ಗಳಿಸೋದ್ರಲ್ಲಿ ಸೂರ್ಯ ಮುಂದೆ ಇನ್ನೊಬ್ಬ ಆಟಗಾರನಿಲ್ಲ.
ಇದನ್ನೂ ಓದಿ:ಅರ್ಧ ಸುಟ್ಟ ಪೇಪರ್ ತುಂಡು ನೀಡಿತು ಸುಳಿವು.. NEET ಅಕ್ರಮದ ರಹಸ್ಯ ಬಯಲು ಮಾಡಿದ ಸಿಬಿಐ..!
ಟಿ20 ಕ್ರಿಕೆಟ್ನಲ್ಲಿ ಸೂರ್ಯ ಬೌಂಡರಿ ಸ್ಪೆಷಲಿಸ್ಟ್ ಅಂದರೂ ತಪ್ಪಲ್ಲ. ಯಾಕಂದ್ರೆ ನಿರ್ದಯವಾಗಿ ಬೌಲರ್ಗಳನ್ನ ದಂಡಿಸುವ ಸ್ಕೈ, ಪ್ರತಿ ಎಸೆತಗಳನ್ನ ಬೌಂಡರಿ ಗಳಿಸಲು ಟಾರ್ಗೆಟ್ ಮಾಡ್ತಾರೆ. ಬೌಲರ್ಸ್ಗೆ ಸೆಟಲ್ ಆಗಲು ಟೈಮ್ ಕೊಡೋದೇ ಇಲ್ಲ. ಬೌಂಡರಿಗಳ ಸುರಿಮಳೆ ಸುರಿಸ್ತಾರೆ. ಈ ವಿಚಾರದಲ್ಲಿ ಡಿಸ್ಟ್ರಕ್ಟಿವ್ ಬ್ಯಾಟರ್ನನ್ನ ಮೀರಿಸೋರೇ ಇಲ್ಲ.
ಬೌಂಡರಿ ಕಿಂಗ್..!
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 65 ಇನ್ನಿಂಗ್ಸ್ ಆಡಿರೋ ಸೂರ್ಯ ಕಮ್ಮಿ ಎಸೆತದಲ್ಲಿ ಬೌಂಡ್ರಿ ಗಳಿಸೋದ್ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2340 ರನ್ ಗಳಿಸಿರೋ ಅವರು ಪ್ರತಿ 4.1 ಬಾಲ್ಗೆ ಬೌಂಡರಿ ಗಳಿಸಿದ್ದಾರೆ. 47 ಇನ್ನಿಂಗ್ಸ್ಗಳಿಂದ 1141 ರನ್ ಗಳಿಸಿದ ಫಿನ್ ಅಲೇನ್ ಕೂಡ ಸರಾಸರಿ 4.1 ಬಾಲ್ಗೆ ಬೌಂಡರಿ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ನ ಆಂಡ್ರೆ ರಸೆಲ್ 71 ಇನ್ನಿಂಗ್ಸ್ ಆಟವಾಡಿ 1033 ರನ್ ಬಾರಿಸಿದ್ದು, ಪ್ರತಿ 4.3 ಎಸೆತಕ್ಕೆ ಬೌಂಡರಿ ಗಳಿಸಿದ್ದಾರೆ. ಎವಿನ್ ಲೆವೆಸ್ 52 ಇನ್ನಿಂಗ್ಸ್ಗಳಿಂದ 1465 ರನ್ ಗಳಿಸಿದ್ದು 4.4 ಎಸೆತಕ್ಕೊಂದು ಬೌಂಡರಿ ಬಾರಿಸಿದ್ದಾರೆ. ಕಾಲಿನ್ ಮುನ್ರೋ 62 ಇನ್ನಿಂಗ್ಸ್ ಆಡಿದ್ದು, 1724 ರನ್ ಗಳಿಸಿದ್ದಾರೆ. ಪ್ರತಿ 4.6 ಎಸೆತಕ್ಕೊಂದು ಬೌಂಡರಿ ಸಿಡಿಸಿದ್ದಾರೆ.
175.44ರ ಭಯಂಕರ ಸ್ಟ್ರೈಕ್ರೇಟ್..!
ಸೂರ್ಯ ಟಿ20 ಕ್ರಿಕೆಟ್ನ ಬೆಸ್ಟ್ ಸ್ಟ್ರೈಕ್ರೇಟ್ ಬ್ಯಾಟ್ಸ್ಮನ್. ಇದೇ ವಿಚಾರಕ್ಕೆ ಸ್ಕೈ ಹೆಚ್ಚು ಪ್ರಖ್ಯಾತಿ ಗಳಿಸಿದ್ದು, 167.74ರ ಭಯಾನಕ ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದಾರೆ. ಇದು ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲಿ 3ನೇ ಗರಿಷ್ಠ ಸ್ಟ್ರೈಕ್ರೇಟ್ ಆಗಿದೆ. ಬಿಲಾಲ್ ಜಲ್ಮಿ 176.01 ಹಾಗೂ ಕೆಜಿ ಸ್ಟ್ಯಾಂಗೋ 175.44 ಹೊಂದಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಸದ್ಯ ಅತ್ಯಾದ್ಭುತ ಫಾರ್ಮ್ನಲ್ಲಿರೋ ಸೂರ್ಯ, ಇವರಿಬ್ಬರನ್ನ ಹಿಂದಿಕ್ಕಿ, ಸ್ಕೈಕ್ರೇಟ್ ಕಾ ಕಿಂಗ್ ಅನ್ನಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.
ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್
ನಿಬ್ಬೆರಗಾಗಿಸೋ ಸ್ಟ್ರೈಕ್ರೇಟ್ ಹೊಂದಿರೋ ಸೂರ್ಯಕುಮಾರ್, ಬೌಂಡರಿ ಗಳಿಸೋದ್ರಲ್ಲಿ ಎಲ್ಲರನ್ನ ಚಕಿತಗೊಳಿಸಿದ್ದಾರೆ. ಆಡಿದ 65 ಇನ್ನಿಂಗ್ಸ್ಗಳಲ್ಲೇ ಈಗಾಗ್ಲೇ 207 ಬೌಂಡರಿ ಸಿಡಿಸಿದ್ದಾರೆ. ಆ ಮೂಲಕ ತಾನೋರ್ವ ಡೇಂಜರಸ್ ಬ್ಯಾಟರ್ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಅವರ ವೀರಾವೇಶ, ಸಿಕ್ಸರ್-ಬೌಂಡರಿಗಳ ಮೊರೆತ ಲಂಕಾ ಪ್ರವಾಸದಲ್ಲೂ ಮುಂದುವರೆಯೋದು ಪಕ್ಕಾ.
ಇದನ್ನೂ ಓದಿ:ಒಬ್ಬಂಟಿಯಾಗಿ ಓಡಾಡೋ ಹೆಣ್ಮಕ್ಕಳೇ ಹುಷಾರ್.. ಬೆಂಗಳೂರಲ್ಲಿ ಓರ್ವ ಯುವತಿಗೆ ಏನಾಯ್ತು ಅಂದರೆ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್