ಗಿಲ್ ಬಲು ದುಬಾರಿ.. ಬ್ರಾಂಡ್ ವ್ಯಾಲ್ಯೂ ದುಪ್ಪಟ್ಟು ಏರಿಕೆ.. ಕೊಹ್ಲಿಯನ್ನೂ ಮೀರಿಸಿ ಬಿಟ್ರಾ..?

author-image
Ganesh
Updated On
ಕ್ಯಾಪ್ಟನ್​ ಫೆಂಟಾಸ್ಟಿಕ್​​.. ಗಿಲ್ ಡಬಲ್​ ಹಂಡ್ರೆಡ್​ ಸಿಡಿಸಿ ಬರೆದ ದಾಖಲೆ ಒಂದಾ, ಎರಡಾ?
Advertisment
  • ನ್ಯೂ ಬ್ರ್ಯಾಂಡ್ ಮಷಿನ್ ಶುಭ್​ಮನ್ ಗಿಲ್​​
  • ಬ್ರ್ಯಾಂಡ್​​ಗಳ ಫೇವರಿಟ್ ಪಂಜಾಬ್ ಪುತ್ತರ್
  • ಹಿಟ್​​ಮ್ಯಾನ್ ರೋಹಿತ್ ಶರ್ಮಾ ಕಥೆ ಏನು..?

ವಿಶ್ವ ಕ್ರಿಕೆಟ್​ ಲೋಕದಲ್ಲಿ ಗಿಲ್​​ ಯುಗಾರಂಭ ಶುರುವಾಗಿದೆ. ನಾಯಕನಾಗಿ ಆನ್​ಫೀಲ್ಡ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರುವ ಪಂಜಾಬ್ ಪುತ್ತರ್​, ರನ್​​​​ ಹೊಳೆ ಹರಿಸ್ತಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸುತ್ತ ದಿಗ್ಗಜರ ದಾಖಲೆಗಳನ್ನು ಉಡೀಸ್ ಮಾಡ್ತಿರೋ ಗಿಲ್, ಆಫ್​ ದಿ ಫೀಲ್ಡ್​ನಲ್ಲೂ ಹೊಸ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ.

ನ್ಯೂ ಬ್ರಾಂಡ್ ಮಷಿನ್ ಗಿಲ್

ಪರ್ಪಲ್ ಪ್ಯಾಚ್​ನಲ್ಲಿದ್ದ ಗಿಲ್, ಕ್ಯಾಪ್ಟನ್ ಪಟ್ಟವೇರಿದ್ದೇ ಏರಿದ್ದು, ಟೀಮ್ ಇಂಡಿಯಾದ ನಯಾ ರನ್ ಮಷಿನ್ ಆಗಿದ್ದಾರೆ. ಆನ್​ ಫೀಲ್ಡ್​ನಲ್ಲಿ ರನ್ ಮಷಿನ್ ಆಗಿರುವ ಗಿಲ್, ಆಫ್ ದಿ ಫೀಲ್ಡ್​ನಲ್ಲಿ ನ್ಯೂ ಬ್ರ್ಯಾಂಡ್ ಮಷಿನ್ ಆಗಿದ್ದಾರೆ. ಆಟದ ಮೂಲಕ ಫ್ಯಾನ್ಸ್​ ಮನ ಗೆಲ್ತಿರೋ ಗಿಲ್​, ಮತ್ತೊಂದಡೆ ಬ್ರ್ಯಾಂಡ್​​ಗಳ ಹೃದಯ ಗೆಲ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ನಯಾ ಡಾರ್ಲಿಂಗ್ ಆಗಿದ್ದಾರೆ. ಭಾರತದ ನ್ಯೂ ಬ್ರ್ಯಾಂಡ್ ಮಷಿನ್ ಆಗುವತ್ತ ಹೆಜ್ಜೆಹಾಕಿದ್ದಾರೆ. ಎಡ್ಜ್​ಬಾಸ್ಟನ್ ಟೆಸ್ಟ್ ಬಳಿಕವಂತೂ ಕಾರ್ಪೋರೇಟ್ ಜಗತ್ತಿನ ಫೇವರಿಟ್ ಆಗಿರುವ ಗಿಲ್​​​​ಗೆ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ.

ಇದನ್ನೂ ಓದಿ: CSK, RR ಮಧ್ಯೆ ಭರ್ಜರಿ ಟ್ರೇಡಿಂಗ್​ ಟಾಕ್; ಚೆನ್ನೈ ಫ್ರಾಂಚೈಸಿಯಿಂದ ಹೊರಬಿತ್ತು ಶಾಕಿಂಗ್​ ನ್ಯೂಸ್​..!

publive-image

ಗಿಲ್ ಈಗ ಬಲು ದುಬಾರಿ

ಕಾರ್ಪೋರೇಟ್ ಜಗತ್ತಿನ ಡಾರ್ಲಿಂಗ್ ಗಿಲ್​​, ಫುಲ್ ಕಾಸ್ಟ್ಲಿಯಾಗಿದ್ದಾರೆ. ಇಷ್ಟು ದಿನ ಬ್ರ್ಯಾಂಡ್​ಗಳ ಒಪ್ಪಂದಗಳಿಗಾಗಿ 2 ರಿಂದ 3 ಕೋಟಿ ಪಡೀತ್ತಿದ್ದ ಗಿಲ್, ಇನ್ಮುಂದೆ ಬರೋಬ್ಬರಿ 7 ಕೋಟಿ ಹಣ ಪಡೆಯಲಿದ್ದಾರೆ. ಈ ಹಿಂದೆ ಪಡೀತಿದ್ದ ಹಣಕ್ಕಿಂತ ದುಪ್ಪಟ್ಟು ಹಣ ಜೇಬಿಗಿಳಿಸ್ತಾರೆ. MRF, ಟಾಟಾ ಕ್ಯಾಪಿಟಲ್ಸ್ ಸೇರಿದಂತೆ ಇನ್ನಿತರ ಬಿಗ್ ಬ್ರ್ಯಾಂಡ್​​ಗಳ ಪ್ರಚಾರಕನಾಗಿರುವ ಗಿಲ್​​​ಗಾಗಿ ಮತ್ತಷ್ಟು ಬ್ರ್ಯಾಂಡ್​ಗಳು ಕ್ಯೂ ನಿಂತಿವೆ.

ಇದನ್ನೂ ಓದಿ: ಐಸಿಸಿ ಅಂಪೈರ್ ಪಾಕಿಸ್ತಾನದಲ್ಲಿ ಹಠಾತ್ ನಿಧನ.. ವಯಸ್ಸು ಕೇವಲ 41.. ಅಸಲಿಗೆ ಆಗಿದ್ದೇನು?

publive-image

ಕೊಹ್ಲಿಯೇ​ ‘ಕಿಂಗ್’

ಟಿ20, ಟೆಸ್ಟ್​ ಕ್ರಿಕೆಟ್​​​ನಿಂದ ವಿರಾಟ್ ಕೊಹ್ಲಿ ನಿವೃತ್ತಿಯಾಗಿದ್ದಾರೆ. ಬ್ರ್ಯಾಂಡ್​​​ ಎಂಡೋರ್ಸ್‌ಮೆಂಟ್ ವಿಚಾರದಲ್ಲಿ ಇವತ್ತಿಗೂ ಕೊಹ್ಲಿಯೇ ಕಿಂಗ್ ಆಗಿದ್ದಾರೆ. ಪ್ರತಿ ಬ್ರ್ಯಾಂಡ್​ನ ಒಪ್ಪಂದಕ್ಕೆ 7.5 ಕೋಟಿಯಿಂದ 10 ಕೋಟಿ ಚಾರ್ಚ್ ಮಾಡ್ತಾರೆ. 42ಕ್ಕೂ ಅಧಿಕ ಬ್ರ್ಯಾಂಡ್​​ಗಳ ಪ್ರಮೋಟರ್ ಆಗಿರುವ ವಿರಾಟ್​, ವಾರ್ಷಿಕ ಬ್ರ್ಯಾಂಡ್​​ ಎಂಡೋರ್ಸ್‌ಮೆಂಟ್​​ ಫೀಸ್​ನಿಂದಲೇ 200 ಕೋಟಿಗೂ ಅಧಿಕ ಹಣಗಳಿಸ್ತಾರೆ.

ಶರ್ಮಾಗಿಂತ ಧೋನಿಯೇ ಬೆಸ್ಟ್

ಕೊಹ್ಲಿಗೆ ಹೋಲಿಕೆ ಮಾಡಿದ್ರೆ ರೋಹಿತ್ ಶರ್ಮಾ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ವಿಚಾರದಲ್ಲಿ ಹಿಂದಿದ್ದಾರೆ. ಇಂಟರ್​​ನ್ಯಾಷನಲ್​, ನ್ಯಾಷನಲ್​ ಸೇರಿ 24 ಬ್ರ್ಯಾಂಡ್​ಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ರೋಹಿತ್, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಫೀಸ್​ ಆಗಿ 5 ರಿಂದ 7 ಕೋಟಿ ಮಾತ್ರವೇ ಚಾರ್ಚ್ ಮಾಡ್ತಾರೆ.​​​​​​​​ ಇದರಿಂದ ವಾರ್ಷಿಕ 120 ಕೋಟಿ ತನಕಗಳಿಸ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ವಿಚಾರದಲ್ಲಿ ಧೋನಿಯೇ ಮುಂದಿದ್ದಾರೆ.

ಧೋನಿ ಕ್ರಿಕೆಟ್​ನಿಂದ ದೂರ ಉಳಿದ ವರ್ಷಗಳೇ ಉರುಳಿವೆ. ಹಾಗಿದ್ದರೂ ಮಾಹಿ, ವಿವಿಧ 25 ಬ್ರ್ಯಾಂಡ್​ಗಳ ರಾಯಭಾರಿ ಆಗಿದ್ದಾರೆ. 6 ಕೋಟಿಯ ತನಕ ಚಾರ್ಚ್​ ಮಾಡ್ತಾರೆ. ಆನ್​ಫೀಲ್ಡ್​ ಆಟಕ್ಕೆ ತಕ್ಕಂತೆ ನೇಮ್ ಫೇಮ್ ಮಾತ್ರವೇ ಅಲ್ಲ. ಬ್ರ್ಯಾಂಡ್ ವಾಲ್ಯೂ ಏರುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​​ ನ್ಯೂ ಬ್ರ್ಯಾಂಡ್ ಮಷಿನ್ ಶುಭ್​ಮನ್​ ಗಿಲ್.

ಇದನ್ನೂ ಓದಿ: ರೇಣುಕಾಸ್ವಾಮಿ ಮಾದರಿ ಕೇಸ್​ಗೆ ಟ್ವಿಸ್ಟ್​.. ಅಂತೂ, ಇಂತೂ ಪ್ರಕರಣದ A-1 ಅರೆಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment