ಭಾರತ ಬಿಟ್ಟು ಹೋಗಲ್ಲ.. ಕಾಶ್ಮೀರದಲ್ಲಿ ಪಟ್ಟು ಹಿಡಿದ ಪಾಕಿಸ್ತಾನಿ ಮಹಿಳೆಯರು; ಇವರ ಬೇಡಿಕೆ ಏನು?

author-image
admin
Updated On
ಭಾರತ ಬಿಟ್ಟು ಹೋಗಲ್ಲ.. ಕಾಶ್ಮೀರದಲ್ಲಿ ಪಟ್ಟು ಹಿಡಿದ ಪಾಕಿಸ್ತಾನಿ ಮಹಿಳೆಯರು; ಇವರ ಬೇಡಿಕೆ ಏನು?
Advertisment
  • ಕಾಶ್ಮೀರದಲ್ಲಿರುವ ಮಾಜಿ ಉಗ್ರರ ಪಾಕಿಸ್ತಾನ ಪತ್ನಿಯರ ಬಿಗಿ ಪಟ್ಟು
  • 2010ರಲ್ಲಿ ಪುನರ್ವಸತಿ ಯೋಜನೆಯಲ್ಲಿ ಭಾರತಕ್ಕೆ ಬಂದಿದ್ದ ಇವರು
  • ಕೂಡಲೇ ದೇಶ ಖಾಲಿ ಮಾಡಲು ಪೊಲೀಸರಿಂದ ನೋಟಿಸ್ ಜಾರಿ

ಶ್ರೀನಗರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಪಾಕಿಸ್ತಾನಿಯರು ಭಾರತ ಬಿಟ್ಟು ಹೋಗುವ ಡೆಡ್‌ಲೈನ್ ಮುಗಿದಿದೆ. ಆದರೆ ಕಾಶ್ಮೀರದಲ್ಲಿರುವ ಮಾಜಿ ಉಗ್ರರ ಪಾಕಿಸ್ತಾನ ಪತ್ನಿಯರ ಭಾರತ ಬಿಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ನಮಗೆ ಇಲ್ಲೇ ಇರಲು ಬಡಿ ಅಥವಾ ನಮ್ಮ ಶವವನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎನ್ನುತ್ತಿದ್ದಾರೆ.

2010ರಲ್ಲಿ ಜಮ್ಮು ಕಾಶ್ಮೀರದ ಪುನರ್ವಸತಿ ನೀತಿಯಡಿಯಲ್ಲಿ ಇವರೆಲ್ಲಾ ಭಾರತಕ್ಕೆ ಬಂದಿದ್ದರು. ರಾಜ್ಯ ಸರ್ಕಾರ ಇವರಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಿ ನೆಲೆಸಲು ಅವಕಾಶ ನೀಡಿತ್ತು. ಆದರೆ ಪಹಲ್ಗಾಮ್ ದಾಳಿಯ ಇವರಿಗೆಲ್ಲಾ ಭಾರತ ಸರ್ಕಾರ ದೇಶ ಖಾಲಿ ಮಾಡಲು ನೋಟಿಸ್ ಜಾರಿ ಮಾಡಿದೆ.

publive-image

ಭಾರತದ ಗಡಿಪಾರು ಆದೇಶದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪತ್ನಿಯರು ಕಂಗಾಲಾಗಿದ್ದಾರೆ. ಕಣ್ಣೀರು ಹಾಕುತ್ತಿರುವ ಇವರು ನಾವು ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಇಲ್ಲೇ ಸಾಯುತ್ತೇವೆ. ನಮಗೆ ಇಲ್ಲೇ ಇರಲು ಬಡಿ ಅಥವಾ ನಮ್ಮ ಶವವನ್ನು ಕಳುಹಿಸಿ ಎನ್ನುತ್ತಿದ್ದಾರೆ.

ಪಾಕಿಸ್ತಾನಕ್ಕೆ ಕಳುಹಿಸುವುದಕ್ಕಿಂತ ಭಾರತದಲ್ಲೇ ನಮ್ಮನ್ನು ಕೊಂದು ಬಿಡಿ. ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ನಾವು ಭಾರತದಲ್ಲೇ ಪ್ರಾಣ ಬಿಡುತ್ತೇವೆ. ಹೋಗಲೇಬೇಕು ಅಂದ್ರೆ ನಮ್ಮ ಮೃತದೇಹಗಳನ್ನು ಅಲ್ಲಿಗೆ ಕಳುಹಿಸಿ ಕೊಡಿ ಎಂದು ಮಾಜಿ ಉಗ್ರರ ಪಾಕಿಸ್ತಾನ ಪತ್ನಿಯರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

publive-image

ಕಾಶ್ಮೀರದಲ್ಲಿ ಪುನರ್ವಸತಿ ಪಡೆದ ಮಾಜಿ ಉಗ್ರರ ಪಾಕಿಸ್ತಾನಿ ಪತ್ನಿಯರು ದೇಶ ಬಿಟ್ಟು ಹೋಗಲು ಭಾರತ ಸರ್ಕಾರ ಕೊಟ್ಟಿದ್ದ ಗಡುವು ಕೂಡ ಮುಗಿದಿದೆ. ಇವರಿಗೆಲ್ಲಾ ದೇಶ ಬಿಟ್ಟು ಹೋಗುವಂತೆ ಈಗಾಗಲೇ ಪೊಲೀಸರು ಸೂಚನೆ ನೀಡಿದ್ದಾರೆ. ಈಗ ಕಾಶ್ಮೀರದಲ್ಲಿ ಪುನರ್ವಸತಿ ಪಡೆದಿರುವ ಮಾಜಿ ಉಗ್ರರ ಪತ್ನಿಯರು ಮಕ್ಕಳನ್ನ ಬಿಟ್ಟು ಭಾರತದಿಂದ ಹೊರ ಹೋಗಲು ನಿರಾಕರಿಸುತ್ತಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್‌ಗೆ 4 ಉಗ್ರರು ಬಂದಿದ್ದು ಹೇಗೆ? ಅತ್ಯಾಧುನಿಕ ಫೋನ್​ ಬಳಕೆಯ ರಹಸ್ಯ ಬಯಲು 

ಈ ಪಾಕ್ ಮಹಿಳೆಯರು, ತಮ್ಮನ್ನು ಭಾರತದಲ್ಲೇ ಬದುಕಲು ಬಿಡಿ. ಇಲ್ಲವೇ ನಮ್ಮ ಮೃತದೇಹಗಳನ್ನು ಬ್ಯಾಗ್‌ಗಳಲ್ಲಿ ತುಂಬಿ ಕಳುಹಿಸಿ ಕೊಡಿ. ನನಗೆ ಮೂವರು ಮಕ್ಕಳಿದ್ದಾರೆ. ನನ್ನ ಚಿಕ್ಕ ಮಗಳನ್ನು ಇಲ್ಲಿಯೇ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಆಕೆ ಇನ್ನೂ ಚಿಕ್ಕವಳು. ನಾನು ಆಕೆಯನ್ನು ಇಲ್ಲಿ ಬಿಟ್ಟು ಹೋಗುವುದು ಹೇಗೆ. ಪಾಕಿಸ್ತಾನಕ್ಕೆ ಮರಳುವುದಕ್ಕಿಂತ ಇಲ್ಲಿಯೇ ಸಾಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment