ಅಪ್ಪುಗೆಯಿಂದ ಟ್ವಿಟರ್​​​ಗಳಿಗೆ ಆಹಾರವಾದ ಕುಬೇರ..! ಸಖತ್ ಫನ್ನಿ, ಫನ್ನಿ ವಿಡಿಯೋಗಳು..

author-image
Veena Gangani
ಅಪ್ಪುಗೆಯಿಂದ ಟ್ವಿಟರ್​​​ಗಳಿಗೆ ಆಹಾರವಾದ ಕುಬೇರ..! ಸಖತ್ ಫನ್ನಿ, ಫನ್ನಿ ವಿಡಿಯೋಗಳು..
Advertisment
  • ಲೇಡಿ HR ತಬ್ಬಿಕೊಂಡು ಡ್ಯಾನ್ಸ್​ ಮಾಡುತ್ತಿದ್ದ ಅದೇ ಕಂಪನಿ ಸಿಇಓ
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ವಿಡಿಯೋ
  • ಈ ವಿಡಿಯೋ ಇಟ್ಟುಕೊಂಡು ಫನ್ನಿ, ಫನ್ನಿ ರೀಟ್ವಿಟ್​ ಮಾಡಿರೋ ನೆಟ್ಟಿಗರು

ಮೊನ್ನೆಯಿಂದ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಮೆರಿಕಾದಲ್ಲಿ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್ ವೇಳೆ ಆಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ ಹಾಗೂ ಅದೇ ಕಂಪನಿಯ ಲೇಡಿ ಹೆಚ್‌.ಆರ್. ಕ್ರಿಸ್ಟೆನ್ ಕಬೋಟ್ ತಬ್ಬಿಕೊಂಡಿದ್ದು ಹಲ್​ಚಲ್​​ ಸೃಷ್ಟಿಸಿದೆ.

ಇದನ್ನೂ ಓದಿ: ಕಿಪ್ಪಿ ಕೀರ್ತಿಗಾಗಿ ಕೋಬ್ರಾ VS ಕಪ್ಪೆ ಕಿತ್ತಾಟ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಲವ್​ ಸ್ಟೋರಿ..!

publive-image

ಇಬ್ಬರು ತಬ್ಬಿಕೊಂಡು ಡ್ಯಾನ್ಸ್​ ಮಾಡುತ್ತಿದ್ದಾಗ ಏಕಾಏಕಿ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಯಾವಾಗ ಸ್ಕ್ರೀನ್ ಮೇಲೆ ಈ ಇಬ್ಬರ ದೃಶ್ಯ ಕಾಣುತ್ತೋ ಆ ಕೂಡಲೇ ಮುಖ ಮುಚ್ಚಿಕೊಂಡು ಅಲ್ಲಿಂದ ಓಡಿ ಹೋಗಿದ್ದಾರೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಅಲ್ಲದೇ ಅಪ್ಪುಗೆಯಿಂದ ಟ್ವಿಟರ್​​​ಗಳಿಗೆ ಈ ಇಬ್ಬರು ಆಹಾರವಾಗಿದ್ದಾರೆ. ಇದೇ ವಿಡಿಯೋ ಟ್ವಿಟರ್​ ಖಾತೆಯಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಫನ್ನಿ, ಫನ್ನಿ ರೀಟ್ವಿಟ್​ ಮಾಡುತ್ತಿದ್ದಾರೆ.


">July 18, 2025


ಇನ್ನೂ, ಈ ವಿಡಿಯೋ ಮೂಲಕ ಒಹಿಯೊ ರಾಜ್ಯದ ಸಿನ್‌ಸಿನಾಟಿ ಮೂಲದ ಆಸ್ಟ್ರೋನೋಮರ್ ಸಿಇಒ ಆ್ಯಂಡಿ ಬೇರಾನ್ ಹಾಗೂ ಕ್ವಿಸ್ಟಿನ್ ಕ್ಯಾಬೊಟ್ ನಡುವೆ ಸಂಬಂಧದಲ್ಲಿರುವುದು ಬಹಿರಂಗವಾಗಿತ್ತು. ಸದ್ಯ ಅಮೆರಿಕದ ಟೆಕ್ ಕಂಪನಿ ಸಿಇಓ ಆ್ಯಂಡಿ ಬೈರೋನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿದ್ದಾರೆ. ಆ್ಯಂಡಿ ಬೇರಾನ್ ರಾಜೀನಾಮೆ ನೀಡಿರುವುದಾಗಿ ಅಷ್ಟೊನೊಮರ್ ಕಂಪನಿಯು LinkedInನಲ್ಲಿ ತಿಳಿಸಿತ್ತು. ನಮ್ಮ ಕಂಪನಿಯು ಮೌಲ್ಯಗಳು ಮತ್ತು ಮಾನದಂಡಗಳಿಗೆ ಬದ್ಧವಾಗಿದೆ ಎಂದು ರಾಜೀನಾಮೆಯನ್ನು ಸಮರ್ಥಿಸಿಕೊಂಡಿದೆ.

publive-image

ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಆ್ಯಂಡಿ ಬೇರಾನ್ ಅವರು ತಮ್ಮ ಪತ್ನಿ ಮೇಗನ್ ಹಾಗೂ ಇಬ್ಬರು ಮಕ್ಕಳು ಮತ್ತು ಕಂಪನಿಯ ಸಿಬ್ಬಂದಿ ಬಳಿ ಕ್ಷಮೆ ಕೇಳಿದ್ದಾರೆ. ಘಟನೆ ನಡೆದಾಗ ನಾನು ತೋರಿದ ವರ್ತನೆ ನನಗೆ ನಾಚಿಕೆ ತರಿಸಿದೆ. ಇದು ನನ್ನ ಖಾಸಗಿ ವಿಷಯ. ಆದರೆ, ಬೇರೆಯವರ ಖಾಸಗಿ ಕ್ಷಣಗಳನ್ನು ಹೀಗೆ ಬಹಿರಂಗಗೊಳಿಸುವುದು ಎಷ್ಟು ಸರಿ? ಅದರ ಪರಿಣಾಮ ಹೇಗಿರುತ್ತದೆ. ಈ ರೀತಿ ಮಾಡುವುದು ಸರಿ ಅಲ್ಲ' ಎಂದು ಕಿಡಿಕಾರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment