Smart phone, ಸ್ಮಾರ್ಟ್​ TV ಖರೀದಿ ಪ್ಲಾನ್​​ನಲ್ಲಿ ಇದ್ದೀರಾ..? ಸ್ವಲ್ಪ ಕಾಯಿರಿ..!

author-image
Ganesh
Updated On
ಕೊನೆಗೂ ಮಾರುಕಟ್ಟೆಗೆ ಬಂತು iPhone 16: ರೇಟ್​ ಎಷ್ಟು? ಸ್ಪೆಷಲ್​ ಫೀಚರ್ಸ್​ ಏನು?
Advertisment
  • Just wait.. ಆತುರದ ನಿರ್ಧಾರ ಬೇಡವೇ ಬೇಡ
  • ಕೇಂದ್ರ ಸರ್ಕಾರ ಮಹತ್ವದ ಪ್ಲಾನ್​​ನಲ್ಲಿ ಇದೆ, ತಾಳಿರಿ!
  • ಕಡಿಮೆ ಬೆಲೆಗೆ ಸಿಗುವ ನಿರೀಕ್ಷೆಯಲ್ಲಿ ಟೆಕ್ ಜಗತ್ತು

ಬಜೆಟ್ ಮಂಡನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಬಜೆಟ್‌ನಿಂದ ಪರಿಹಾರ ಸಿಗುವ ನಿರೀಕ್ಷೆ ಇದೆ. ಟೆಕ್ ಕ್ಷೇತ್ರ ಕೂಡ ಭಾರೀ ನಿರೀಕ್ಷೆಯಲ್ಲಿದೆ.

ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ ಆಗ್ರಹ ಮಾಡಿದೆ. ಹೀಗಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಜನರಿಗೆ ಸರ್ಕಾರ ಸ್ವಲ್ಪ ರಿಲೀಫ್ ನೀಡಬಹುದು.
ಮೊಬೈಲ್ ಫೋನ್ ಕಂಪನಿಗಳು ಆಮದು ಸುಂಕ ಕಡಿಮೆ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದವು. ಆಮದು ಸುಂಕ ಕಮ್ಮಿ ಇದ್ದರೆ ಜನರಿಗೆ ಕಡಿಮೆ ಬೆಲೆಗೆ ಫೋನ್​ಗಳು ಸಿಗುತ್ತವೆ.

ಇದನ್ನೂ ಓದಿ: ಈಗೇನಿದ್ದರೂ WhatsApp ಟಾರ್ಗೆಟ್​.. ಈ 4 ಮೆಸೇಜ್ ಬಂದರೆ ಕ್ಲಿಕ್ ಮಾಡಬೇಡಿ!

ಇತರ ಎಲೆಕ್ಟ್ರಾನಿಕ್ ವಸ್ತುಗಳು ಅಗ್ಗ..?

ಮೊಬೈಲ್ ಹೊರತುಪಡಿಸಿ ಇತರ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಬಜೆಟ್ ನಂತರ ಕಡಿಮೆ ಆಗಬಹುದು. ಫೋನ್ ಕಂಪನಿಗಳಂತೆ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​ಕೂಡ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಎಲೆಕ್ಟ್ರಾನಿಕ್ ವಸ್ತುಗಳ ಘಟಕಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯ ಮಾಡಿವೆ. ಒಂದು ವೇಳೆ ಸರ್ಕಾರ ಅಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಸ್ಮಾರ್ಟ್ ಟಿವಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಕಡಿಮೆ ಆಗಲಿದೆ.

ಇದನ್ನೂ ಓದಿ: ATM ಮೂಲಕ PF ಹಣ ಡ್ರಾ..! ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment