/newsfirstlive-kannada/media/media_files/2025/08/07/computer-security-diploma-2025-08-07-13-14-43.jpg)
SSLCವರೆಗೂ ಎಲ್ಲರೂ ಎಲ್ಲವನ್ನೂ ಓದಲೇಬೇಕು ಅನ್ನೋ ಪರಿಸ್ಥಿತಿ ಇರುತ್ತೆ. ಯಾರಿಗೂ ಇಂಥದ್ದೇ ಸಬ್ಜೆಕ್ಟ್ ಅನ್ನೋ ಆಪ್ಷನ್ ಇರೋದಿಲ್ಲ. ಆದರೆ, SSLC ಮುಗಿದ ಮೇಲೆ ನಿಮಗೆ ಬೇಕಾದ ಕೋರ್ಸ್ ಮಾಡಬಹುದು. ತುಂಬಾ ಆಪ್ಷನ್ಸ್ ಇರೋದರಿಂದ ಯಾವ ಕೋರ್ಸ್ ಮಾಡಬೇಕು ಅನ್ನೋ ಪ್ರಶ್ನೆ ವಿದ್ಯಾರ್ಥಿಗಳದ್ದು.
ಯಾವ ಕೋರ್ಸ್ ಮಾಡಿದ್ರೆ ಒಳ್ಳೆಯದು? ಪಿಯುಸಿ ಮಾಡಬೇಕಾ? ಐಟಿಐ ಮಾಡಬೇಕಾ? ಡಿಪ್ಲೋಮಾ ಮಾಡಬೇಕಾ? ಅನ್ನೋ ಪ್ರಶ್ನೆ ವಿದ್ಯಾರ್ಥಿಗಳಿಗೆ ಕಾಡುತ್ತಲೇ ಇದೆ. ಪೋಷಕರು ಕೂಡ ಏನೂ ಯೋಚನೆ ಮಾಡದೆ ಯಾರದ್ದೋ ಒತ್ತಡಕ್ಕೆ ಮಣಿದು ಯಾವುದೋ ಕೋರ್ಸ್ಗಳನ್ನು ಓದುವಂತೆ ಮಕ್ಕಳ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಗುರಿ ಮತ್ತು ಆಸಕ್ತಿಗೆ ತಕ್ಕ ವಿಷಯ ಚೂಸ್ ಮಾಡಿಕೊಳ್ಳಬೇಕಾಗುತ್ತದೆ.
ಎಸ್‌ಎಸ್‌ಎಲ್‌ಸಿ ಪಾಸಾದ ನಂತರ ಪಿಯುಸಿ ಅಥವಾ ಡಿಪ್ಲೊಮಾ, ಐಟಿಐ ಮಾಡಬಹುದು. ಅದರಲ್ಲೂ ಯಾರಾದ್ರೂ ಆದಷ್ಟು ಬೇಗ ತಮ್ಮ ವೃತ್ತಿಜೀವನ ಆರಂಭಿಸಬೇಕು ಅಂದುಕೊಂಡಿರುತ್ತಾರೋ ಅಂತವರಿಗೆ ನಾವು ಒಂದಷ್ಟು ಟ್ರೆಂಡಿಂಗ್‌ನಲ್ಲಿರೋ ಡಿಪ್ಲೊಮಾ ಕೋರ್ಸುಗಳ ಬಗ್ಗೆ ಹೇಳ್ತೀವಿ. ಡಿಜಿಟಲ್ ಜಗತ್ತಿನಲ್ಲಿ ಬೇಗ ಸೆಟಲ್ ಆಗಬೇಕು ಅನ್ನೋರಿಗೆ ಇದು ಬೆಸ್ಟ್ ಕೋರ್ಸ್ ಆಗಿದೆ. ಆ ಕೋರ್ಸ್ ಮತ್ಯಾವುದು ಅಲ್ಲ ಬದಲಿಗೆ Computer Security ಡಿಪ್ಲೊಮಾ ಕೋರ್ಸ್.
Computer Security ಡಿಪ್ಲೊಮಾ ಕೋರ್ಸ್ ಏನು ಅಂತಾ ನೋಡೋದಾದ್ರೆ
ಈ ಡಿಪ್ಲೊಮ ಕೋರ್ಸ್ ಅಧ್ಯಯನ ಮಾಡುವುದರಿಂದ ಕಂಪ್ಯೂಟರ್ ಸೆಕ್ಯೂರಿಟಿ ಫಿಸಿಕಲ್ ಸಿಸ್ಟಮ್ ಡೆವಲಪ್ಮೆಂಟ್ಗೆ ಸಂಬಂಧಿಸಿದ ಪ್ರಿನ್ಸಿಪಲ್ಸ್, ಮಾಡ್ಯುಲ್, ಟೂಲ್ಸ್, ಪ್ರೊಸೆಸ್‌ಗಳ ಬಗ್ಗೆ ಅರಿವು ಮೂಡುತ್ತದೆ. ಇದು ಐಟಿ ಸೆಕ್ಯೂರಿಟಿ ಫೀಲ್ಡ್‌ನಲ್ಲಿ ಮಾಡರ್ನ್ ವೆರಿಫಿಕೇಶನ್, ವ್ಯಾಲಿಡೇಷನ್, ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಪ್ರೋಸೆಸ್‌ಗಳ ಬಗ್ಗೆ ಜ್ಞಾನ ಹೆಚ್ಚುತ್ತದೆ. ಈ ಕೋರ್ಸ್ ಮುಗಿಸಿದವರು ಬೇಗ ಜಾಬ್ ಪಡೆಯಬಹುದು. ಉನ್ನತ ಶಿಕ್ಷಣ ಆಸಕ್ತಿ ಇದ್ದಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಬಿಇ ಎರಡನೇ ವರ್ಷಕ್ಕೆ ಡಿಸಿಇಟಿ ಪರೀಕ್ಷೆ ಬರೆದು ಸೇರಬಹುದು.
ಮಾಹಿತಿ ತಂತ್ರಜ್ಞಾನದಲ್ಲಿ ಕಂಪ್ಯೂಟರ್ ಭದ್ರತೆ ಸ್ಪೆಷಲ್ ಸೆಕ್ಟರ್. ಐಟಿ ವಿಭಾಗದಲ್ಲಿನ ಉಪ ವಿಭಾಗ ಇದು. ಆನ್‌ಲೈನ್ ಕಳ್ಳರಿಂದ ನೆಟ್‌ವರ್ಕ್ ಕಳ್ಳತನ ತಡೆಗಟ್ಟುವುದು ಹೇಗೆ? ಕಂಪ್ಯೂಟರ್ನ ಡಾಟಾ ಭದ್ರತೆ ಹೇಗೆ? ಜತೆಗೆ ಕಂಪ್ಯೂಟರ್ ಆಪರೇಟಿಂಗ್ ಹಾಗೂ ಇತರೆ ಮಾಹಿತಿಗಳನ್ನು ಈ ಕೋರ್ಸ್‌ನಿಂದ ಕಲಿಯಬಹುದು. ಇದನ್ನು ಕಲಿತ ನಂತರ ಸೈಬರ್ ಸೆಕ್ಯೂರಿಟಿ ಆಫೀಸರ್ ಆಗಿ ಸರ್ಕಾರಿ ಇಲಾಖೆಗಳು, ಖಾಸಗಿ ಕಂಪನಿಗಳಲ್ಲಿ, ಇತರೆ ಕೆಲವು ಕ್ಷೇತ್ರಗಳಲ್ಲಿ ಜಾಬ್ ಪಡೆಯಬಹುದು. 100% ಉದ್ಯೋಗ ಅವಕಾಶಗಳನ್ನು ಹೊಂದಿರುವ ಕೋರ್ಸ್ ಇದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಬೇಡಿಕೆ ಹೊಂದಿರೋ ಕೋರ್ಸ್ ಇದು.
ಇದು ಟೆಕ್ನಾಲಜಿ ಜಗತ್ತು. ಬೆಳಿಗ್ಗೆ ಎದ್ದ ಕೂಡಲೇ ಜನ ಗ್ಯಾಜೆಟ್‌ಗಳ ಮೊರೆ ಹೋಗುತ್ತಾರೆ. ಇನ್ನು ರಾತ್ರಿ ಮಲಗುವವರೆಗೂ ಗ್ಯಾಜೆಟ್‌ಗಳು ಅವರೊಂದಿಗೆ ಇರುತ್ತವೆ. ಈ ನಿಟ್ಟಿನಲ್ಲಿ ನೋಡುವುದಾದರೆ ಡಾಟಾ ಭದ್ರತೆ ಅತಿ ಮುಖ್ಯ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ಭದ್ರತೆ ಡಿಪ್ಲೊಮಗೆ ಜಾಬ್ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್.
ಈ ಕೋರ್ಸ್ ಮಾಡಲು ವಿದ್ಯಾರ್ಥಿ ಎಜುಕೇಷನ್ ಮಿನಿಮಮ್ 10ನೇ ತರಗತಿ ಪಾಸ್ ಆಗಿರಬೇಕು. ಕೆಲವು ವಿವಿಗಳಲ್ಲಿ ಪಿಯುಸಿ ಪಾಸಾಗಿರಬೇಕು. ಈ ಕೋರ್ಸ್ ಮಾಡಲು ಯಾವುದೇ ವಯೋಮಿತಿ ಇಲ್ಲ. ಮೆರಿಟ್ ಆಧಾರದ ಮೇರೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಡಿಪ್ಲೊಮಾ ಕೋರ್ಸ್ ಮುಗಿಸಿದ ಕೂಡ ಬೇಗ ಉದ್ಯೋಗ ಸಿಗುತ್ತದೆ. ಈ ವಿಷಯದಲ್ಲಿ ಸಂಪೂರ್ಣ ಜ್ಞಾನ ಮತ್ತು ಕೌಶಲ್ಯ ಸಿಗುತ್ತದೆ.
Indira Gandhi National Open University, Indian Institute of Information Technology, NIIT, Jetking, Asian School of Cyber Laws, Indian Institute of Science Bangalore, ಬೆಂಗಳೂರಿನ Appin Technology Lab, Indian Institute of Hardware Technology ಸೇರಿ REVA ಯೂನಿವರ್ಸಿಟಿಯಲ್ಲೂ ಈ ಕೋರ್ಸ್ ಲಭ್ಯವಿದೆ. ಕೋರ್ಸ್ ಫೀಸ್ ವರ್ಷಕ್ಕೆ ₹30,000 - ₹2.5 Lakhs ಇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.