ಒರಾಕಲ್ ಕಂಪನಿಯಲ್ಲಿ 20-30 ಸಾವಿರ ಉದ್ಯೋಗಿಗಳಿಗೆ ಲೇ ಆಫ್‌ : ಮುಂದುವರಿದ ಟೆಕ್ ಕಂಪನಿಗಳ ಲೇ ಆಫ್‌

ಒರಾಕಲ್ ಪ್ರಸಿದ್ದ ಐ.ಟಿ. ಕಂಪನಿ. ಆದರೇ, ಒರಾಕಲ್ ಕಂಪನಿಯು 20 ರಿಂದ 30 ಸಾವಿರ ಐಟಿ ಉದ್ಯೋಗಿಗಳಿಗೆ ಲೇ ಆಫ್ ನೀಡಲು ತೀರ್ಮಾನಿಸಿದೆ. ಒರಾಕಲ್ ಕಂಪನಿಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಅಳವಡಿಸಿಕೊಂಡು ಐ.ಟಿ. ಉದ್ಯೋಗಿಗಳಿಗೆ ಲೇ ಆಫ್ ನೀಡಿ ಮನೆಗೆ ಕಳಿಸಲಾಗುತ್ತಿದೆ.

author-image
Chandramohan
ORACLE COMPANY LAY OFF022
Advertisment


ಇವತ್ತು ಟೆಕ್ ವರ್ಲ್ಡ್‌ನಲ್ಲಿ ಒಂದು ಶಾಕಿಂಗ್ ನ್ಯೂಸ್ ಕೇಳಿಬರ್ತಿದೆ. ಪ್ರಖ್ಯಾತ ಒರಾಕಲ್ ಕಂಪನಿಯು ಬರೋಬ್ಬರಿ 20,000 ದಿಂದ 30,000 ಉದ್ಯೋಗಿಗಳನ್ನು ಲೇ-ಆಫ್ ಮಾಡೋಕೆ ಪ್ಲ್ಯಾನ್ ಮಾಡ್ತಿದೆ ಅಂತ ವರದಿಯಾಗಿದೆ. ಎಐ ಡೇಟಾ ಸೆಂಟರ್‌ಗಳನ್ನ ಎಕ್ಸ್‌ಪ್ಯಾಂಡ್ ಮಾಡೋಕೆ ಬೇಕಿರೋ ಭಾರಿ ಹಣಕಾಸಿನ ಒತ್ತಡ ತಡೆಯೋಕೆ ಆಗದೆ ಕಂಪನಿ ಈ ನಿರ್ಧಾರ ತಗೊಳ್ತಿದೆ ಅಂತ ಹೂಡಿಕೆ ಬ್ಯಾಂಕ್ ಟಿಡಿ ಕೋವೆನ್ ತನ್ನ ರಿಸರ್ಚ್ ರಿಪೋರ್ಟ್‌ನಲ್ಲಿ ತಿಳಿಸಿದೆ. ಇಷ್ಟು ದೊಡ್ಡ ಮಟ್ಟದ ವಜಾ ಪ್ರಕ್ರಿಯೆ ಮೂಲಕ ಕಂಪನಿಯು ಸುಮಾರು 8 ರಿಂದ 10 ಬಿಲಿಯನ್ ಡಾಲರ್ ಕ್ಯಾಶ್ ಫ್ಲೋ ಉಳಿಸಿಕೊಳ್ಳುವ ಗುರಿ ಹೊಂದಿದೆ.
ಇಷ್ಟೊಂದು ದೊಡ್ಡ ಮಟ್ಟದ ಉದ್ಯೋಗ ಕಡಿತಕ್ಕೆ ಮೇನ್ ರೀಸನ್ ಒರಾಕಲ್ ಮಾಡ್ತಿರೋ ಎಐ ಇನ್ವೆಸ್ಟ್‌ಮೆಂಟ್. ಅಮೆರಿಕದ ದೊಡ್ಡ ದೊಡ್ಡ ಬ್ಯಾಂಕ್‌ಗಳು ಒರಾಕಲ್‌ನ ಎಐ ಡೇಟಾ ಸೆಂಟರ್ ಪ್ರಾಜೆಕ್ಟ್‌ಗಳಿಗೆ ಸಾಲ ಕೊಡೋಕೆ ಹಿಂದೇಟು ಹಾಕ್ತಿದ್ದಾವೆ. ಒರಾಕಲ್‌ನ ಒಟ್ಟು ಸಾಲ ಆಲ್ ರೆಡಿ 100 ಬಿಲಿಯನ್ ಡಾಲರ್ ಗಡಿ ದಾಟಿದ್ದು, ಬ್ಯಾಂಕ್‌ಗಳು ಈಗ ಇಂಟರೆಸ್ಟ್ ರೇಟ್ ಅನ್ನು ಕೂಡ ದ್ವಿಗುಣಗೊಳಿಸಿವೆ. ಇದ್ರಿಂದಾಗಿ ಕಂಪನಿ ತನ್ನ ಕೆಲವು ಆಸ್ತಿಗಳನ್ನು ಮತ್ತು ಚಟುವಟಿಕೆಗಳನ್ನು ಮಾರಾಟ ಮಾಡೋ ಬಗ್ಗೆ ಗಂಭೀರವಾಗಿ ಯೋಚನೆ ಮಾಡ್ತಿದೆ.
ಈ ಇಡೀ ಬಿಕ್ಕಟ್ಟಿಗೆ ಕಾರಣ ಓಪನ್ ಎಐ ಜೊತೆಗಿನ 300 ಬಿಲಿಯನ್ ಡಾಲರ್ ಪಾರ್ಟ್‌ನರ್‌ಶಿಪ್ ಅಂತ ವಿಶ್ಲೇಷಿಸಲಾಗುತ್ತಿದೆ. ಸುಮಾರು 30 ಲಕ್ಷ ಜಿಪಿಯುಗಳನ್ನ ಒದಗಿಸೋ ಭರವಸೆ ಕೊಟ್ಟಿರೋ ಒರಾಕಲ್‌ಗೆ ಈಗ ಅದು ದೊಡ್ಡ ಆರ್ಥಿಕ ಹೊರೆಯಾಗಿದೆ. ಇದ್ರಿಂದಾಗಿ ಒರಾಕಲ್ ಶೇರ್ ವ್ಯಾಲ್ಯೂ 50 ಪರ್ಸೆಂಟ್‌ಗಿಂತ ಹೆಚ್ಚು ಕುಸಿದಿದ್ದು, ಕಂಪನಿಗೆ ಮಾರುಕಟ್ಟೆಯಲ್ಲಿ ಸುಮಾರು 463 ಬಿಲಿಯನ್ ಡಾಲರ್ ನಷ್ಟವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಕಂಪನಿ ಸುಮಾರು 58 ಬಿಲಿಯನ್ ಡಾಲರ್ ಸಾಲವನ್ನ ಕೇವಲ ಟೆಕ್ಸಾಸ್ ಮತ್ತು ನ್ಯೂ ಮೆಕ್ಸಿಕೊದ ಡೇಟಾ ಸೆಂಟರ್‌ಗಳಿಗಾಗಿಯೇ ಖರ್ಚು ಮಾಡಿದೆ.
ಫೈನಾನ್ಶಿಯಲ್ ಕಷ್ಟದಿಂದ ಹೊರಬರಲು ಒರಾಕಲ್ ಈಗ ಹೊಸ ಪ್ಲ್ಯಾನ್‌ಗಳನ್ನ ಮಾಡ್ತಿದೆ. ಹೊಸ ಕಸ್ಟಮರ್ಸ್ ಹತ್ತಿರ ಕಾಂಟ್ರಾಕ್ಟ್ ವ್ಯಾಲ್ಯೂನ 40 ಪರ್ಸೆಂಟ್ ಅಮೌಂಟ್ ಅನ್ನ ಅಡ್ವಾನ್ಸ್ ಡೆಪಾಸಿಟ್ ಆಗಿ ಪೇ ಮಾಡೋಕೆ ಫೋರ್ಸ್ ಮಾಡ್ತಿದೆ. ಅಷ್ಟೇ ಅಲ್ಲದೆ, 2022 ರಲ್ಲಿ ಖರೀದಿ ಮಾಡಿದ್ದ ಸೆರ್ನರ್ ಅನ್ನೋ ಹೆಲ್ತ್ ಟೆಕ್ ಯೂನಿಟ್ ಅನ್ನು ಕೂಡ ಮಾರಾಟ ಮಾಡೋಕೆ ರೆಡಿಯಾಗಿದೆ. ಕಸ್ಟಮರ್ಸ್ ತಮ್ಮದೇ ಚಿಪ್‌ಗಳನ್ನ ತರೋ ಬ್ರಿಂಗ್​ ಯುವರ್​​ ಓನ್​ ಚಿಪ್​​ ಅನ್ನೋ ಮಾಡೆಲ್ ಅನ್ನು ಕೂಡ ಕಂಪನಿ ಪರಿಶೀಲಿಸುತ್ತಿದೆ, ಅಂದ್ರೆ ಗ್ರಾಹಕರನ್ನೇ ಸಹ-ಹೂಡಿಕೆದಾರರನ್ನಾಗಿ ಮಾಡೋದು ಇವರ ಪ್ಲ್ಯಾನ್ ಆಗಿದೆ.
ಇನ್ನೊಂದೆಡೆ ಒರಾಕಲ್ ಮೇಲೆ ನಂಬಿಕೆ ಕಳೆದುಕೊಂಡಿರೋ ಓಪನ್ ಎಐ, ತನ್ನ ಕೆಲವು ಕೆಪಾಸಿಟಿ ಅವಶ್ಯಕತೆಗಳನ್ನ ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ಕಡೆಗೆ ಡೈವರ್ಟ್ ಮಾಡ್ತಿದೆ ಅನ್ನೋದು ಕೂಡ ವರದಿಯಾಗಿದೆ. ಒರಾಕಲ್ ಈವರೆಗೂ ಅಫೀಶಿಯಲ್ ಆಗಿ ಈ ಲೇ-ಆಫ್ ಬಗ್ಗೆ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ. ಎಐ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸೋಕೆ ಹೋದ ಕಂಪನಿ ಈಗ ಫೈನಾನ್ಶಿಯಲ್ ಕ್ರೈಸಿಸ್‌ನಲ್ಲಿ ಸಿಲುಕಿರೋದು ಜಾಗತಿಕ ಟೆಕ್ ಇಂಡಸ್ಟ್ರಿಯಲ್ಲೇ ದೊಡ್ಡ ಆತಂಕ ಮೂಡಿಸಿದೆ. ಒರಾಕಲ್‌ನ ಈ ಮುಂದಿನ ನಡೆ ಉದ್ಯೋಗಿಗಳ ಭವಿಷ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ORACLE COMPANY LAY OFF





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

oracle company lay off
Advertisment