ಐಟಿ ಕಂಪನಿ ವಿಪ್ರೋದಲ್ಲಿ ಮಾರ್ಚ್ 1 ರಿಂದ ವೇತನ ಹೆಚ್ಚಳ: ಉದ್ಯೋಗಿಗಳಿಗೆ ಎಐ ಸವಾಲು ಮಧ್ಯೆ ವೇತನ ಹೆಚ್ಚಳ!

ಐಟಿ ಕಂಪನಿಗಳೆಲ್ಲಾ ಈಗ ಆಂಥ್ರೋಪಿಕ್ ಕ್ಲೌಡ್ ಎಐ ನಿಂದ ತತ್ತರಿಸಿ ಹೋಗುತ್ತಿವೆ. ಇದರ ಮಧ್ಯೆ ವಿಪ್ರೋ ಕಂಪನಿಯು ತನ್ನ ಐ.ಟಿ. ಉದ್ಯೋಗಿಗಳಿಗೆ ವೇತನ ಹೆಚ್ಚಳದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವರ್ಷದ ಮಾರ್ಚ್ 1 ರಿಂದಲೇ ವೇತನ ಹೆಚ್ಚಳವಾಗಲಿದೆ.

author-image
Chandramohan
Wipro
Advertisment


ಐಟಿ ಸೆಕ್ಟರ್‌ನಲ್ಲಿರೋ ವಿಪ್ರೋ ಎಂಪ್ಲಾಯಿಸ್‌ಗೆ ಒಂದು ಬಿಗ್ ಗುಡ್ ನ್ಯೂಸ್ ಬಂದಿದೆ. ಮಾರ್ಚ್ 1 ರಿಂದ ಅನ್ವಯವಾಗುವಂತೆ ಕಂಪನಿ ಈಗ ವೇತನ ಹೆಚ್ಚಳ ಅಥವಾ ಸ್ಯಾಲರಿ ಹೈಕ್ ಮಾಡೋಕೆ ಡಿಸೈಡ್ ಮಾಡಿದೆ. ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲದಿಂದ ವೇಟ್ ಮಾಡ್ತಿದ್ದ ಉದ್ಯೋಗಿಗಳಿಗೆ ಇದು ದೊಡ್ಡ ರಿಲೀಫ್ ಅಂತಾನೇ ಹೇಳಬಹುದು. ಲಾಸ್ಟ್ ಟೈಮ್ ಸೆಪ್ಟೆಂಬರ್ 2024 ರಲ್ಲಿ ವಿಪ್ರೋ ಸ್ಯಾಲರಿ ಹೈಕ್ ಮಾಡಿತ್ತು, ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಇನ್ಕ್ರಿಮೆಂಟ್ ಆಗಿರಲಿಲ್ಲ.
ಕಂಪನಿಯ ಇಂಟರ್ನಲ್‌ ಮೆಮೊ ಮೂಲಕ ಈ ವಿಷಯವನ್ನ ಈಗಾಗ್ಲೇ ಎಂಪ್ಲಾಯಿಸ್‌ಗೆ ತಿಳಿಸಲಾಗಿದೆ ಅಂತ ಮೂಲಗಳು ಹೇಳ್ತಿವೆ. ಆದ್ರೆ, ಎಷ್ಟು ಪರ್ಸಂಟೇಜ್ ಹೈಕ್ ಆಗುತ್ತೆ ಅನ್ನೋ ಇನ್ಫಾರ್ಮೇಷನ್ ಇನ್ನೂ ಆಫೀಶಿಯಲ್ ಆಗಿ ರಿವೀಲ್ ಆಗಿಲ್ಲ. ಜನವರಿಯಲ್ಲಿ ನಡೆದ ಥರ್ಡ್ ಕ್ವಾರ್ಟರ್ ಮೀಟಿಂಗ್‌ನಲ್ಲೇ ಕಂಪನಿಯ CHRO ಸೌರಭ್ ಗೋವಿಲ್ ಅವರು ಇದರ ಬಗ್ಗೆ ಸುಳಿವು ನೀಡಿದ್ದರು. ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಮ್ ಮೀಟಿಂಗ್ ನಂತರ ಈ ಫೈನಲ್ ಡಿಸಿಷನ್ ತಗೊಳ್ಳಲಾಗಿದೆ.
ಪ್ರಸ್ತುತ ಮಾರ್ಕೆಟ್‌ನಲ್ಲಿ ಡಿಮ್ಯಾಂಡ್ ಸ್ವಲ್ಪ ವೀಕ್ ಇರೋದ್ರಿಂದ ಮತ್ತು ಜಾಗತಿಕ ಮಟ್ಟದ ಅನಿಶ್ಚಿತತೆ ಇರೋದ್ರಿಂದ ಎಲ್ಲಾ ಐಟಿ ಕಂಪನಿಗಳು ಸ್ಯಾಲರಿ ಹೈಕ್ ಮಾಡೋ ವಿಷಯದಲ್ಲಿ ತುಂಬಾ ಕೇರ್ಫುಲ್ ಆಗಿವೆ. ಗ್ರಾಹಕರು ಖರ್ಚು ಮಾಡೋದು ಕೂಡ ಕಡಿಮೆ ಆಗಿರೋದ್ರಿಂದ ಐಟಿ ಸೆಕ್ಟರ್ ಮೇಲೆ ಸ್ವಲ್ಪ ಪ್ರೆಷರ್ ಇದೆ. ಇದೇ ಕಾರಣಕ್ಕೆ ಕಳೆದ ಫೈನಾನ್ಶಿಯಲ್ ಇಯರ್‌ನಲ್ಲಿ ವಿಪ್ರೋ ಮಾತ್ರವಲ್ಲದೆ ತುಂಬಾ ದೊಡ್ಡ ಕಂಪನಿಗಳು ಇನ್ಕ್ರಿಮೆಂಟ್ ಪ್ರೊಸೆಸ್‌ ಅನ್ನ ಮುಂದೂಡಿದ್ದವು ಅಥವಾ ತುಂಬಾ ಕಡಿಮೆ ಹೈಕ್ ನೀಡಿದ್ದವು.
ವಿಪ್ರೋಗೆ ಕಾಂಪಿಟೇಶನ್ ಕೊಡ್ತಿರೋ ಬೇರೆ ಕಂಪನಿಗಳನ್ನ ನೋಡೋದಾದ್ರೆ, ಟಿಸಿಎಸ್ ಕಳೆದ ಸೆಪ್ಟೆಂಬರ್‌ನಿಂದ ತನ್ನ 80% ಎಂಪ್ಲಾಯಿಸ್‌ಗೆ 2 ರಿಂದ 8 ಪರ್ಸೆಂಟ್ ಹೈಕ್ ಕೊಟ್ಟಿದೆ. ಇನ್ಫೋಸಿಸ್ ಕೂಡ ಎರಡು ಹಂತಗಳಲ್ಲಿ 5 ರಿಂದ 8 ಪರ್ಸೆಂಟ್ ಇನ್ಕ್ರಿಮೆಂಟ್ ನೀಡಿದೆ. ಇದರಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ಕೊಟ್ಟೋರಿಗೆ ಇನ್ನೂ ಜಾಸ್ತಿ ಸ್ಯಾಲರಿ ಸಿಕ್ಕಿದೆ. ಇನ್ನು ಕಾಗ್ನಿಜೆಂಟ್ ಕೂಡ ನವೆಂಬರ್‌ನಿಂದ ಸ್ಯಾಲರಿ ಹೈಕ್ ಜಾರಿಗೆ ತಂದಿದೆ. ಈಗ ವಿಪ್ರೋ ಕೂಡ ಈ ಲಿಸ್ಟ್‌ಗೆ ಸೇರ್ಪಡೆ ಆಗ್ತಿದೆ.
ಐಟಿ ಫೀಲ್ಡ್‌ನಲ್ಲಿ ಕರಿಯರ್ ಮಾಡಬೇಕು ಅನ್ಕೊಂಡಿರೋ ಸ್ಟೂಡೆಂಟ್ಸ್‌ಗೆ ಈ ನ್ಯೂಸ್ ಒಂದು ಪಾಸಿಟಿವ್ ಸಿಗ್ನಲ್ ಆಗಿದೆ. ಮಾರ್ಕೆಟ್ ಎಷ್ಟೇ ಟೈಟ್ ಆಗಿದ್ರೂ ಕಂಪನಿಗಳು ಟ್ಯಾಲೆಂಟ್ ಇರೋರಿಗೆ ಸ್ಯಾಲರಿ ಹೈಕ್ ನೀಡ್ತಾನೆ ಇರ್ತವೆ. ಸೋ, ಸ್ಟೂಡೆಂಟ್ಸ್ ನೀವು ಕೂಡ ಲೇಟೆಸ್ಟ್ ಸ್ಕಿಲ್ಸ್ ಕಲಿಯೋದ್ರ ಕಡೆ ಗಮನ ಕೊಡಿ. ನಿಮ್ಮ ಫ್ರೆಂಡ್ಸ್ ಯಾರಾದ್ರೂ ಐಟಿ ಕಂಪನಿಯಲ್ಲಿ ಜಾಬ್ ಮಾಡ್ತಿದ್ರೆ ಅವರಿಗೆ ಈ ಇನ್ಫಾರ್ಮೇಷನ್ ಶೇರ್ ಮಾಡಿ.

wipro chairmen rishad premji and azim premji


ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್‌ಜೀ, ಸಂಸ್ಥಾಪಕ ಅಜೀಂ ಪ್ರೇಮಜೀ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

AZIM PREMJI LETTER TO CM SIDDARAMAIAH wipro salary hike from march 1st
Advertisment