13 ವರ್ಷದ ವಿದ್ಯಾರ್ಥಿ ಜತೆ ಮಲಗಿ ಮಗು ಮಾಡಿಕೊಂಡ ಶಿಕ್ಷಕಿ; ಬೆಡ್​ರೂಮ್​​ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?

author-image
Ganesh Nachikethu
Updated On
13 ವರ್ಷದ ವಿದ್ಯಾರ್ಥಿ ಜತೆ ಮಲಗಿ ಮಗು ಮಾಡಿಕೊಂಡ ಶಿಕ್ಷಕಿ; ಬೆಡ್​ರೂಮ್​​ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?
Advertisment
  • ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ!
  • ಮನುಷ್ಯ ಗುರು ಮಾರ್ಗದರ್ಶನ ಇಲ್ಲದೆ ಹಾದಿಯಲ್ಲಿ ಸಾಗಲಾರ
  • 13 ವರ್ಷದ ವಿದ್ಯಾರ್ಥಿ ಬಾಳನ್ನೇ ಕತ್ತಲಿಗೆ ದೂಡಿದ ಮಹಿಳಾ ಶಿಕ್ಷಕಿ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅನ್ನೋ ಮಾತೊಂದಿದೆ. ಇದರರ್ಥ ಮನುಷ್ಯ ಯಾವುದೇ ಕಾರಣಕ್ಕೂ ಗುರುವಿನ ಮಾರ್ಗದರ್ಶನ ಇಲ್ಲದೆ ಸರಿಯಾದ ಹಾದಿಯಲ್ಲಿ ಸಾಗಲಾರ ಮತ್ತು ಆತ್ಮೋನ್ನತಿ ಹೊಂದಲಾರ ಎಂಬುದು. ಅಕ್ಷರ ಜ್ಞಾನ ಕಲಿಸಿ ಬದುಕಿಗೆ ಅರ್ಥ ಕಲ್ಪಿಸಬೇಕಾದವರು ಗುರು. ದೀಪ ತಾನು ಉರಿದು ಜಗತ್ತಿಗೆ ಬೆಳಕು ನೀಡುವ ಹಾಗೇ ಗುರು ಕೂಡ ವಿದ್ಯಾರ್ಥಿ ಬಾಳಲ್ಲಿ ಬೆಳಕು ಮೂಡಿಸಬೇಕು. ಆದರೆ, ಇಲ್ಲೋರ್ವ ಗುರು ತನ್ನ ವಿದ್ಯಾರ್ಥಿ ಬಾಳನ್ನೇ ಕತ್ತಲಿಗೆ ದೂಡಿದ್ದಾರೆ.

ಪಾಠ ಮಾಡಬೇಕಾದ ಗುರುವಿನಿಂದಲೇ ವಿದ್ಯಾರ್ಥಿ ಮೇಲೆ ಅತ್ಯಾಚಾರ ಆಗಿದೆ. 13 ವರ್ಷದ ವಿದ್ಯಾರ್ಥಿ ಮೇಲೆ ಸತತ 4 ವರ್ಷಗಳಿಂದ ಅತ್ಯಾಚಾರ ಮಾಡಿದ ಶಿಕ್ಷಕಿಯೊಬ್ಬಳು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತ ಕೆಲಸ ಮಾಡಿದ್ದಾಳೆ. 13 ವರ್ಷದ ವಿದ್ಯಾರ್ಥಿನಿಯಿಂದಲೇ ಆಕೆ ತಾಯಿ ಆಗಿದ್ದಾಳೆ ಎಂದರೆ ನೀವು ನಂಬಲೇಬೇಕು.

ಏನಿದು ಕೇಸ್​​?

5ನೇ ತರಗತಿ ಶಿಕ್ಷಕಿಯಾಗಿರೋ ಈಕೆ ಹೆಸರು ಲಾರಾ ಕ್ಯಾರನ್. ಇವರಿಗೆ 34 ವರ್ಷ. ಈಕೆ ತನ್ನ 13 ವರ್ಷದ ವಿದ್ಯಾರ್ಥಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾಳೆ. ಅಲ್ಲದೇ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ಕಾರಣ ಒಂದು ಮಗುವಿನ ತಾಯಿ ಆಗಿದ್ದಾಳೆ. ಹೀಗಾಗಿ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಅಸಲಿಗೆ ಆಗಿದ್ದೇನು?

ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಘಟನೆ ಇದು. ಲಾರಾ ಕ್ಯಾರನ್ 13 ವರ್ಷ ವಯಸ್ಸಿನ ವಿದ್ಯಾರ್ಥಿ ಜತೆಗೆ ಬಹಳ ಸಲುಗೆಯಿಂದ ಇದ್ದಳು. ಹುಡುಗನ ಕುಟುಂಬವೂ ಲಾರಾ ಕ್ಯಾರನ್‌ಗೆ ನಿಕಟವಾಗಿತ್ತು. ಕೆಲವು ದಿನಗಳ ಕಾಲ ವಿದ್ಯಾರ್ಥಿಯನ್ನು ಯಾವುದೋ ಕಾರಣಕ್ಕೆ ಲಾರಾ ಕ್ಯಾರನ್‌ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಲಾರಾ ಕ್ಯಾರನ್‌ ಲೈಂಗಿಕವಾಗಿ ಬಳಸಿಕೊಂಡಿದ್ದಳು. ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಆತನ ಜೊತೆ ದೈಹಿಕ ಸಂಪರ್ಕ ಸಾಧಿಸಿದ್ದಳು.

ಸಿಕ್ಕಿಬಿದ್ದಿದ್ದು ಹೇಗೆ?

ಒಂದು ದಿನ ರಾತ್ರಿ 13 ವರ್ಷದ ವಿದ್ಯಾರ್ಥಿ ತನ್ನ ಮನೆಯಲ್ಲಿ ಇರಲಿಲ್ಲ. ಎಲ್ಲರೂ ಎದ್ದು ಆತನಿಗಾಗಿ ಹುಡುಕಾಡಿದರು. ಆಗ ಅಲ್ಲೇ ಪಕ್ಕದಲ್ಲಿದ್ದ ಲಾರಾ ಕ್ಯಾರನ್‌ ಮನೆಗೆ ವಿದ್ಯಾರ್ಥಿ ಹೋಗಿದ್ದ. ಲಾರಾ ಕ್ಯಾರನ್‌ ಜತೆಗೆ ಬೆಡ್​ರೂಮ್​​ನಲ್ಲಿ ಮಲಗಿದ್ದ. ಅದೇ ವೇಳೆ ಈಕೆ ಆತನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ಸಿಕ್ಕಿಬಿದ್ದಿದ್ದಳು.

ನಂತರ ಪೊಲೀಸರಿಗೆ ದೂರು ನೀಡಿ ವಿಚಾರಣೆ ನಡೆಸಿದಾಗ ಶಿಕ್ಷಕಿ ತನಗೆ ಕಿರುಕುಳ ನೀಡಿದ್ದನ್ನು ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ ಆಕೆ ವಿದ್ಯಾರ್ಥಿ ಜತೆಗೆ 1 ಮಗು ಮಾಡಿಕೊಂಡಿದ್ದು, ಬೆಳಕಿಗೆ ಬಂದಿದೆ. ಈ ಕೇಸಲ್ಲಿ ಶಿಕ್ಷಕಿಯನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ:ಟೀಮ್​ ಇಂಡಿಯಾ ಗೆಲುವಿಗೆ ಕಾರಣ ಇವರೇ: ಈ ಬಗ್ಗೆ ಕ್ಯಾಪ್ಟನ್​ ಸೂರ್ಯಕುಮಾರ್​​ ಯಾದವ್​ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment