/newsfirstlive-kannada/media/post_attachments/wp-content/uploads/2024/12/ATUL-SUBHASH-CASE.jpg)
ಟೆಕ್ಕಿ ಅತುಲ್ ಸುಭಾಷ್ ಪ್ರಕರಣದಲ್ಲಿ ಪೋಲಿಸರು ಸುಭಾಷ್ ಪತ್ನಿಯನ್ನು ಸೇರಿ ಒಟ್ಟು ಮೂವರನ್ನು ಬಂಧಿಸಿದ್ದಾರೆ. ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಹಾಗೂ ಸಹೋದರ ಅನುರಾಗ್​ರನ್ನು ಬಂಧಿಸಿಲಾಗಿದೆ.
ಪೊಲೀಸರು ಹೇಳುವ ಪ್ರಕಾರ ನಿಖಿತಾಳನ್ನ ಗುರುಗ್ರಾಮ್​ನಲ್ಲಿ ಹಾಗೂ ಆಕೆಯ ತಾಯಿ ಮತ್ತು ಸಹೋದರರನ್ನ ಪ್ರಯಾಗರಾಜ್​ನಲ್ಲಿ ಬಂಧಿಸಿರುವುದಾಗಿ ಹೇಳಿದ್ದಾರೆ. ಇನ್ನೂ ಒಬ್ಬ ಆರೋಪಿಯನ್ನು ಬಂಧಿಸುವುದು ಬಾಕಿ ಇದೆ ಎಂದು ಪೊಲಿಸರು ಹೇಳಿದ್ದಾರೆ. ನಿನ್ನೆಯಷ್ಟೇ ಮೂವರನ್ನು ಬಂಧಿಸಿದ್ದು, ತಡರಾತ್ರಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ತೆರಳಿದ ಪೊಲೀಸರು ಈ ಮೂವರನ್ನು ರಣರೋಚಕ ಆಪರೇಷನ್ ಮೂಲಕ ಈ ಮೂವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿ:Justice Is Due ಅತುಲ್ ಸುಭಾಷ್ ಕೇಸ್‌ಗೆ ಹೊಸ ಟ್ವಿಸ್ಟ್; ಮಗನ ಮುಂದಿಟ್ಟುಕೊಂಡ ಟೆಕ್ಕಿ ಪತ್ನಿ ಮಾಡಿದ್ದೇನು?
ಈಗಾಗಲೇ ಮೂವರು ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ನೀಡಿದೆ ಎಂದು ಹೇಳೀದ್ದಾರೆ. ಅತುಲ್ ಸುಭಾಷ್​ ಜೀವ ಕಳೆದುಕೊಂಡ ಪ್ರಕರಣದಲ್ಲಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರು ಪ್ರಮುಖ ಆರೋಪಿಗಳು. ಅವರ ವಿರುದ್ಧ ಒಟ್ಟು 24 ಪೇಜ್​ ಡೆತ್​ನೋಟ್​ ಬರೆದಿಟ್ಟು 80 ನಿಮಿಷದ ವಿಡಿಯೋ ಮಾಡಿಟ್ಟು ಜೀವ ಕಳೆದುಕೊಂಡಿದ್ದರು ಸುಭಾಷ್​. 34 ವರ್ಷದ ಸುಭಾಷ್, ಮೂಲತಃ ಬಿಹಾರದ ಸಮಸ್ತಿಪುರದವರು. ಕಳೆದ ಸೋಮವಾರ ಬೆಂಗಳೂರಿನ ಅವರ ಫ್ಲ್ಯಾಟ್​ನಲ್ಲಿ ಜೀವಕಳೆದುಕೊಂಡು ಶವವಾಗಿ ಪತ್ತೆಯಾಗಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಟೆಕ್ಕಿ ದುರಂತ.. ಅತುಲ್ ಸುಭಾಷ್ ಪತ್ನಿ ಆರೋಪಗಳೆಲ್ಲಾ ಸುಳ್ಳಾ? ಸ್ಫೋಟಕ ಸತ್ಯಗಳು ಬಯಲು
ಅವರು ಬರೆದಿಟ್ಟು ಹೋಗಿದ್ದ ಪತ್ರದಲ್ಲಿ ಹಾಗೂ ವಿಡಿಯೋದಲ್ಲಿ ಮ್ಯಾಚ್​ ಮೇಕಿಂಗ್​ ವೆಬ್​ಸೈಟ್​ನಲ್ಲಿ ಪರಿಚಯವಾಗಿದ್ದ ನಿಖಿತಾರನ್ನು 2019ರಲ್ಲಿ ಮದುವೆಯಾಗಿದ್ದರಿಂದ ಹಿಡಿದು ಅವರು ಹಣಕ್ಕಾಗಿ ಹೇಗೆ ಪೀಡಿಸಿದ್ದರು. ದೊಡ್ಡ ಮೊತ್ತದ ಹಣಕ್ಕಾಗಿ ಹೇಗೆ ಕಾಡಿದರು ಎಂಬ ವಿವರಗಳನ್ನೆಲ್ಲಾ ಬರೆದಿದ್ದರು. ಈ ಒಂದು ಪ್ರಕರಣ ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಪುರುಷರ ಜೀವಕ್ಕೂ ಬೆಲೆ ಇದೆ. ಅವರ ಮೇಲೆಯೂ ದೌರ್ಜನ್ಯಗಳು ನಡೆಯುತ್ತಿವೆ ಎಂದು ದೇಶಾದ್ಯಂತ ಒಂದು ಆಕ್ರೋಶ ವ್ಯಕ್ತವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us