/newsfirstlive-kannada/media/post_attachments/wp-content/uploads/2024/08/SYBER_CRIME_2.jpg)
ಬೆಂಗಳೂರು: ಸಿಲಿಕಾನ್​ ಸಿಟಿಯ ಸಾಫ್ಟ್​ವೇರ್​ ದಂಪತಿಗೆ ಸೈಬರ್​ ಖದೀಮರು ವಂಚನೆ ಮಾಡಿದ್ದ 1 ಕೋಟಿ 40 ಲಕ್ಷ ರೂಪಾಯಿಗಳನ್ನ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಇದನ್ನೂ ಓದಿ:ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್​ಗೆ ಏನಾಯಿತು..?
ಉದ್ಯಾನ ನಗರಿಯ ಬಾಣಸವಾಡಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ದಂಪತಿಯಾದ ನೇಹಾ ಮತ್ತು ಲೋಕೇಶ್ (ಹೆಸರು ಬದಲಾಯಿಸಲಾಗಿದೆ) ಒಟ್ಟು 1 ಕೋಟಿ 53 ಲಕ್ಷ ರೂ.ಗಳ ವಂಚನೆಗೆ ಒಳಗಾಗಿದ್ದರು. ಇಂಗ್ಲೆಂಡ್​​ನಿಂದ ಕೆಲಸ ಮಾಡುತ್ತಿದ್ದ ದುಷ್ಕರ್ಮಿಗಳು ಹಣವನ್ನು ಇನ್ವೆಸ್ಟ್ ಮಾಡಿದರೆ ಅದಕ್ಕಿಂತ ಹೆಚ್ಚಿನ ಹಣ ಕೊಡುವುದಾಗಿ ಸೋಶಿಯಲ್​ ಮೀಡಿಯಾದಲ್ಲಿ ಆ್ಯಡ್​ ಶೇರ್ ಮಾಡಿದ್ದರು. ಈ ಜಾಹೀರಾತನ್ನು ನೋಡಿದ್ದ ಬೆಂಗಳೂರಿನ ದಂಪತಿ ಅವರನ್ನು ಸಂಪರ್ಕಿಸಿದ್ದರು. ಹೀಗಾಗಿ ಖದೀಮರು ನಕಲಿ ವೆಬ್​ಸೈಟ್​ ಲಿಂಕ್​ ಅನ್ನು ಶೇರ್ ಮಾಡಿದ್ದರು. ಈ ಲಿಂಕ್​ ಸತ್ಯವೆಂದು ಗೊತ್ತಾಗಲೆಂದು ಉತ್ತರ ಭಾರತದ ಕೆಲ ಖಾತೆಗಳನ್ನ ಬಳಕೆ ಮಾಡಿದ್ದರು. ಇದನ್ನು ನಂಬಿದ್ದ ದಂಪತಿ ನಕಲಿ ವೆಬ್​ಸೈಟ್​ ಲಿಂಕ್​ಗೆ 1 ಕೋಟಿ 53 ಲಕ್ಷ ರೂ.ಗಳ ಹೂಡಿಕೆ ಮಾಡಿದ್ದರು. ಎಂಬುದು ಪೊಲೀಸ್​ ತನಿಖೆಯಿಂದ ಗೊತ್ತಾಗಿದೆ.
ಇದನ್ನೂ ಓದಿ: ₹1200 ಕೋಟಿ ವೆಚ್ಚದ ಸಂಸತ್ ಭವನ ಸೋರಿಕೆ.. ₹120 ಬಕೆಟ್​ ಮೇಲೆ ಅವಲಂಬಿತ ಆಯ್ತಾವೆಂದು ವ್ಯಂಗ್ಯ
/newsfirstlive-kannada/media/post_attachments/wp-content/uploads/2024/08/SYBER_CRIME.jpg)
ಕೆಲವು ತಿಂಗಳ ಬಳಿಕ ದಂಪತಿ ಹಣ ವಾಪಸ್ ಪಡೆಯಲು ವೆಬ್‌ಸೈಟ್​ಗೆ ಲಾಗ್​ ಇನ್ ಆಗಲು ಟ್ರೈ ಮಾಡ್ತಾರೆ. ಆದರೆ ಲಾಗ್​ ಇನ್ ಕ್ಯಾನ್ಸಲ್ ಮಾಡಲಾಗಿತ್ತು. ಹೀಗಾಗಿ ಮೋಸವಾಗಿರುವುದು ಗೊತ್ತಾಗಿ ದಂಪತಿ ಪೂರ್ವ ವಿಭಾಗದ ಸೈಬರ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ಅವರ ಟೀಮ್,​ 50 ಖಾತೆಗಳಲ್ಲಿ ಇದ್ದ ಹಣ ಪತ್ತೆ ಹಚ್ಚಿ ದಂಪತಿಗೆ ವಾಪಸ್ ಮಾಡಿದ್ದಾರೆ. ಆದರೆ ಇನ್ನು 13 ಲಕ್ಷ ರೂಪಾಯಿಗಳು ಏನಾಗಿದ್ದಾವೆ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us