ವಧು ವರರನ್ನು ಹುಡುಕುವವರೇ ಎಚ್ಚರ.. ಯುವತಿ ಮಾತು ನಂಬಿ ಲಕ್ಷಾಂತರ ಹಣ ಕಳೆದುಕೊಂಡ ಟೆಕ್ಕಿ

author-image
Veena Gangani
Updated On
ವಧು ವರರನ್ನು ಹುಡುಕುವವರೇ ಎಚ್ಚರ.. ಯುವತಿ ಮಾತು ನಂಬಿ ಲಕ್ಷಾಂತರ ಹಣ ಕಳೆದುಕೊಂಡ ಟೆಕ್ಕಿ
Advertisment
  • ಯುವತಿಯನ್ನು ನಂಬಿ ಮೋಸ ಹೋದ ದಾವಣಗೆರೆಯ ಟೆಕ್ಕಿ
  • ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯಿಂದ ಮೋಸ
  • ಯುವತಿ ಮಾತು ನಂಬಿ ಲಿಂಕ್ ಕ್ಲಿಕ್ ಮಾಡಿ ಲಕ್ಷ ಲಕ್ಷ ಹಣ ಕಳ್ಕೊಂಡ

ದಾವಣಗೆರೆ: ಮದುವೆ ಆಗದ ಯುವಕರಿಗೆ ಹೇಗೆ ಗಾಳ ಹಾಕಬೇಕು ಅಂತ ಕರಗತ ಮಾಡಿಕೊಂಡವಳು ಈ ಕಿಲಾಡಿ. ಮ್ಯಾಟ್ರಿಮೋನಿಯಲ್ಲಿ ಅಕೌಂಟ್ ಓಪನ್ ಮಾಡಿ ಪರಿಚಯ ಮಾಡಿ ನೈಸ್ ಆಗಿ ಮಾತನಾಡುತ್ತಿದ್ದವಳು ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ: ಮೀಟಿಂಗ್​ಗೂ ಮುನ್ನ ಸಿಎಂಗೆ ರೈತರಿಂದ ಟಕ್ಕರ್​.. ಮಾವು, ಹೂವು, ಬಾಳೆ, ತರಕಾರಿ ಕೊಟ್ಟು ಆಕ್ರೋಶ

ದಿನೇ ದಿನೇ ಡಿಜಿಟಲ್ ಯುಗ ಬೆಳೆಯುತ್ತಿದ್ದಂತೆ ಆನ್‌ಲೈನ್ ವಂಚಕರ ಜಾಲವೂ ಬೆಳೆಯುತ್ತಿದೆ. ಈ ಆನ್‌ಲೈನ್ ವಂಚಕರ ಜಾಲಕ್ಕೆ ದಾವಣಗೆರೆಯ ಟೆಕ್ಕಿಯೋರ್ವ ಮೋಸ ಹೋಗಿದ್ದಾನೆ. ಸಂಗಮ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಖಾತೆ ಹೊಂದಿದ್ದ ದಾವಣಗೆರೆ ನಗರ ಕೊಂಡಜ್ಜಿ ರಸ್ತೆ ನಿವಾಸಿಯಾಗಿರುವ ಟೆಕ್ಕಿ ಮದುವೆಗಾಗಿ ಯುವತಿ ಹುಡುಕಾಟದಲ್ಲಿದ್ದ. ಈ ವೇಳೆ ಈ ಟೆಕ್ಕಿ ಮೊಬೈಲ್‌ಗೆ ಸುಂದರ ಯುವತಿಯ ಡಿಪಿ ಇರುವ ನಂಬರ್‌ನಿಂದ ಮೆಸೇಜ್ ಬಂದಿದೆ. ಮೆಟ್ರಿಮನಿ ಆ್ಯಪ್‌ನಲ್ಲಿ ನಿಮ್ಮ ಪ್ರೊಫೈಲ್ ನೋಡಿದ್ದೀನಿ. ನೀವು ನನಗೆ ಇಷ್ಟವಾಗಿದ್ದೀರಾ. ನಾನು ಮೂಲತಃ ತಮಿಳುನಾಡಿನ ಚೆನ್ನೈನವಳು.

publive-image

ಸದ್ಯ ಮಲೇಷಿಯಾದಲ್ಲಿ ವಾಸವಿದ್ದೇನೆ ಎಂದಿದ್ದಾಳೆ. ಯುವತಿಯ ಮಾತು ನಂಬಿದ ಟೆಕ್ಕಿ ಕೆಲ ದಿನಗಳ ಕಾಲ ಮೊಬೈಲ್‌ನಲ್ಲಿಯೇ ಮಾತುಕತೆ ನಡೆಸಿದ್ದಾನೆ. ಬಳಿಕ ತಾನು Global TRX ಎಂಬ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿ ಹೂಡಿಕೆ ಮಾಡಿದ್ದು, ಉತ್ತಮ ಆದಾಯ ಬರುತ್ತಿದೆ. ಇಷ್ಟವಾದ್ರೆ ಟ್ರೈ ಮಾಡು ಅಂತಾ ಲಿಂಕ್ ಕಳಿಸಿದ್ದಾಳೆ ಅಷ್ಟೇ. ಲಿಂಕ್ ಕ್ಲಿಕ್ ಮಾಡಿ ಸುಮಾರು 9.23 ಲಕ್ಷದಷ್ಟು ಹಣ ಡೆಪಾಸಿಟ್ ಮಾಡಿ ಮೋಸ ಹೋಗಿದ್ದಾನೆ. ಬಳಿಕ ದಾವಣಗೆರೆ ಸಿಇಎನ್ ಠಾಣೆಗೆ ದೂರು ನೀಡಿದ್ದಾನೆ.

ಬರೋಬ್ಬರಿ 18 ಬಾರಿ ಟ್ರಾನ್ಸ್ಯಾಕ್ಷನ್ ಮಾಡಿರುವ ಟೆಕ್ಕಿ ಯುವತಿ ಮಾತು ನಂಬಿ 9.23 ಲಕ್ಷ ಹೂಡಿಕೆ ಮಾಡಿದ್ದಾನೆ. ಬಳಿಕ ಮತ್ತೊಂದು ಅಪರಿಚಿತ ನಂಬರ್‌ನಿಂದ ಟೆಕ್ಕಿಗೆ ಕರೆ ಬಂದಿದ್ದು, ಪ್ರೊಸೆಸಿಂಗ್ ಫೀ ಶೇಕಡ ಐದರಷ್ಟು ಆಗುತ್ತದೆ ಎಂದಿದ್ದಾನೆ. ಅದನ್ನು ಸಹ ಪಾವತಿಸಿದ್ದಾನೆ. ಬಳಿಕ ಯುಎಸ್ ಡಾಲರ್‌ನಿಂದ ಇಂಡಿಯನ್ ರೂಪಾಯಿಗೆ ಕನ್ವರ್ಟ್ ಮಾಡಲು ಹಣ ನೀಡಿ ಅಂತಾ ಯಾವಾಗ ಹೇಳಿದ್ದಾರೋ ಆಗ ಸ್ನೇಹಿತರ ಬಳಿ ವಿಚಾರಿಸಿದಾಗ ತಾನು ಮೋಸ ಆಗಿರೋದು ಗೊತ್ತಾಗಿದೆ. ಅಪ್ಪ ಅಮ್ಮ ಹಾಗೂ ಸಂಬಂಧಿಕರು ನೋಡಿದ ಹುಡುಗಿಯನ್ನೇ ಮದುವೆಯಾಗಿ. ಆನ್‌ಲೈನ್‌ನಲ್ಲಿ ಯುವತಿಯರ ಸೌಂದರ್ಯಕ್ಕೆ, ಯುವಕರ ಸಂಬಳಕ್ಕೆ ಮಾರು ಹೋಗಿ ಮೋಸ ಹೋಗುತಿದ್ದಾರೆ. ಈ ಆನ್‌ಲೈನ್ ವಂಚನೆಗೆ ಅನಕ್ಷರಸ್ಥರಷ್ಟೇ ಅಲ್ಲ ವಿದ್ಯಾವಂತ ಯುವ ಸಮೂಹವೂ ಬಲಿಯಾಗುತ್ತಿದ್ದು, ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment