ಪತ್ನಿ ಕೊಂದು ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಬೆಂಗಳೂರಿಗೆ ವಾಪಸ್‌; ರಾಕೇಶ್‌ ತಂದೆ ಬಿಚ್ಚಿಟ್ರು ಇಂಚಿಂಚೂ ಮಾಹಿತಿ!

author-image
admin
Updated On
ಪತ್ನಿ ಕೊಂದು ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಬೆಂಗಳೂರಿಗೆ ವಾಪಸ್‌; ರಾಕೇಶ್‌ ತಂದೆ ಬಿಚ್ಚಿಟ್ರು ಇಂಚಿಂಚೂ ಮಾಹಿತಿ!
Advertisment
  • ದೊಡ್ಡ ಕಮ್ಮನಹಳ್ಳಿಯಲ್ಲಿ ಪತ್ನಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ್ದ
  • ಪತ್ನಿ ಕೊಲೆಗೆ ಕಾರಣ ಅನ್ನೋ ನಿಗೂಢ ಇಂದು ಬಯಲಾಗೋ ಸಾಧ್ಯತೆ
  • ಮೃತ ಗೌರಿ ನನ್ನ ಸಹೋದರಿಯ ಮಗಳು ಎಂದ ರಾಕೇಶ್ ತಂದೆ

ಬೆಂಗಳೂರು: ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಪತ್ನಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸ್ಕೇಪ್ ಆಗಿದ್ದ ಟೆಕ್ಕಿ ರಾಕೇಶ್‌ನನ್ನು ಪೊಲೀಸರು ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ ಕರೆ ತಂದಿದ್ದಾರೆ.

ನಿನ್ನೆ ರಾತ್ರಿಯೇ ಕೋರಮಂಗಲ NGV ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿದರು. ಪೊಲೀಸರು ಟೆಕ್ಕಿ ರಾಕೇಶ್‌ನನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಶಿಫ್ಟ್​ ಮಾಡಿದ್ದಾರೆ. ಇಂದು ಪತ್ನಿಯ ಕೊಲೆಗೆ ಕಾರಣ ಏನು ಅನ್ನೋದರ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ.

ಟೆಕ್ಕಿ ರಾಕೇಶ್ ತಂದೆ ಸ್ಫೋಟಕ ಮಾಹಿತಿ!
ಟೆಕ್ಕಿ ರಾಕೇಶ್‌ ತನ್ನ ಪತ್ನಿ ಗೌರಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಸೂಟ್‌ಕೇಸ್‌ಗೆ ತುಂಬಿ ಪುಣೆಗೆ ಹೋಗಿದ್ದ. ಈ ಕೊಲೆ ಮಾಡಲು ಕಾರಣ ಏನು ಅನ್ನೋ ಸತ್ಯ ಇನ್ನೂ ನಿಗೂಢವಾಗಿದೆ. ಈ ಮಧ್ಯೆ ಟೆಕ್ಕಿ ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ ಹಾಗೂ ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರಲಿಲ್ಲ. ಮದುವೆಯ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡಿಕೊಂಡಿದ್ದಳು. 2 ವರ್ಷದ ಹಿಂದೆ ಕುಟುಂಬದ ವಿರೋಧದ ನಡುವೆಯೂ ರಾಕೇಶ್, ಗೌರಿ ಮದುವೆ ಆಗಿದ್ರು.

ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ಹಲವು ಬಾರಿ ಜಗಳ ಆಡುತ್ತಿದ್ದಳು. ಗಂಡ-ಹೆಂಡತಿ ಮತ್ತು ಕುಟುಂಬಸ್ಥರ ಈ ಜಗಳ ಪೊಲೀಸ್ ಠಾಣೆಯ ಮೇಟ್ಟಿಲು ಏರಿತ್ತು.

ಮಾರ್ಚ್ 26ರಂದು ನನ್ನ ಮಗ ರಾಕೇಶ್, ತನ್ನ ಪತ್ನಿ ಗೌರಿಯನ್ನು ಕೊಲೆ‌ ಮಾಡಿದ್ದೀನಿ ಅಂತಾ ನನಗೆ ಕರೆ ಮಾಡಿ ಹೇಳಿದ್ದ. ರಾಕೇಶ್‌, ಕಳೆದ ಮಾರ್ಚ್ 27 ಗುರುವಾರ ಮಧ್ಯಾಹ್ನ ನನಗೆ ಕಾಲ್ ಮಾಡಿ ಹೇಳಿದ್ದ.

ಇದನ್ನೂ ಓದಿ: ಪತ್ನಿಯನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಂದ ಎಸ್ಕೇಪ್ ಆದ ಪತಿ.. ಆಮೇಲೆ ಏನೇನಾಯ್ತು? 

ಫೋನ್‌ನಲ್ಲಿ ಆಕೆ ನನಗೆ ತುಂಬಾ ಕಿರುಕುಳ ಕೊಡುತ್ತಿದ್ದಳು. ಅದಕ್ಕೆ ನಾನು ಹೀಗೆ ಮಾಡಿದ್ದೇನೆ ಎಂದಿದ್ದ. ಆಕೆಯ ತಾಯಿಗೂ ಎರಡ್ಮೂರು ದಿನದ ಹಿಂದೆ ಫೋನ್ ಮಾಡಿ, ಕಿರುಕುಳ ಕೊಡುತ್ತಿದ್ದಳು. ಅವರ ಅಮ್ಮನೂ ಮಗಳಿಗೆ ಬುದ್ಧಿ ಹೇಳಿದ್ದಳು. ಹುಡುಗಿಯ ತಾಯಿ ನನ್ನ ಸ್ವಂತ ಸೋದರಿ. ಹುಡುಗಿ, ನನ್ನ ಸ್ವಂತ ಸೋದರ ಸೊಸೆ. ನನ್ನ ತಾಯಿ ಮುದುಕರಾಗಿದ್ದಾರೆ, ಅವರಿಗೂ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಅಲ್ಲೂ ಪೊಲೀಸ್ ಸ್ಟೇಷನ್​ನಲ್ಲಿ ಸಾಕಷ್ಟು ಕಂಪ್ಲೆಂಟ್​ಗಳಾಗಿವೆ.

publive-image

ಇದೇ ವೇಳೆ ನನ್ನ ಮಗ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀನಿ ಎಂದು ಹೇಳಿದ್ದ. ಅದಕ್ಕೆ ನಾನು ನಿನ್ನ ನಿರ್ಧಾರ ತುಂಬಾ ತೀವ್ರವಾಗಿದೆ ಅಂತ ನಾನು ಹೇಳಿದ್ದೆ. ಮುಂಬೈನ ಮೆಗವಾಡಿ ಪೊಲೀಸರಿಗೆ ಈ ಘಟನೆ ಬಗ್ಗೆ ಕೂಡಲೇ ನಾನು ಹೇಳಿದೆ. ಗೌರಿ ತಾಯಿ ಮತ್ತು ಸ್ಥಳೀಯ ಪೊಲೀಸರಿಗೆ ನಾನೇ ಈ ಕೊಲೆ ವಿಚಾರ ತಿಳಿಸಿದ್ದೆ. ಆಮೇಲೆ ಶಿರವಾರ ಪೊಲೀಸರು ಆತನನ್ನು ಪತ್ತೆ ಹಚ್ಚಿದರು.

ರಾಕೇಶ್ ಬೆಂಗಳೂರಿನಿಂದ ಬಂದವನು ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಜಿರಳೆ ಔಷಧಿ ತೆಗೆದುಕೊಂಡು ಕುಡಿದಿದ್ದಾನೆ. ಬೈಕ್ ಸವಾರನೋರ್ವ ಅಸ್ವಸ್ಥನಾಗಿದ್ದವನ ಕಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ ಎಂದು ಆರೋಪಿ ರಾಕೇಶ್ ತಂದೆ ರಾಜೇಂದ್ರ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment