ನಿರಂತರ ಮಳೆಗೆ ಬೆಚ್ಚಿ ಬಿದ್ದ ಸಿಲಿಕಾನ್‌ ಸಿಟಿ ಟೆಕ್ಕಿಗಳು.. ಮತ್ತೆ ವರ್ಕ್ ಫ್ರಮ್‌ ಹೋಮ್‌ಗೆ ಡಿಮ್ಯಾಂಡ್‌!

author-image
admin
Updated On
Work From Home ಕೆಲಸ ಹುಡುಕುತ್ತಿದ್ದೀರಾ..? ಮೋಸ ಹೋಗ್ಬೇಡಿ ಎಚ್ಚರ, ಯಾಕಂದರೆ..
Advertisment
  • ಒಂದೇ ದಿನದ ಮಳೆರಾಯನ ಆರ್ಭಟಕ್ಕೆ ಬೆಂಗಳೂರು ತತ್ತರ!
  • ಮಾನ್ಯತಾ ಟೆಕ್ ಪಾರ್ಕ್‌, ಸಿಲ್ಕ್ ಬೋರ್ಡ್‌ ಬಳಿ 2 ಅಡಿ ನೀರು
  • ನಿರಂತರ ಮಳೆಯ ವೇಳೆ IT ಕಂಪನಿಗಳ ಸಾರಿಗೆ ಸಂಚಾರವೇ ಕಷ್ಟ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುರಿದ ದಿಢೀರ್ ಮಳೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಹಲವು ತಗ್ಗು ಪ್ರದೇಶಗಳಲ್ಲಿ ನೀರು ಕಾಲುವೆಯಂತೆ ಹರಿಯುತ್ತಿದ್ದರೆ, ಕೆಲ ಭಾಗಗಳ ಜನಜೀವನ ಅಸ್ತವ್ಯಸ್ಥವಾಗಿದೆ. ಒಂದೇ ದಿನದ ಮಳೆರಾಯನ ಆರ್ಭಟಕ್ಕೆ ಬೆಂಗಳೂರು IT ಉದ್ಯೋಗಿಗಳು ಬೆಚ್ಚಿ ಬಿದ್ದಿದ್ದಾರೆ.

ರಸ್ತೆಗಳಲ್ಲಿ ಹರಿಯುವ ನೀರು, ಟ್ರಾಫಿಕ್ ಜಾಮ್‌ನಿಂದ ಸಾರಿಗೆ ಸಂಚಾರ ದುಸ್ಥರವಾಗಿದೆ. ಧಾರಾಕಾರ ಮಳೆಯಿಂದ ಮಾನ್ಯತಾ ಟೆಕ್ ಪಾರ್ಕ್‌, ಸಿಲ್ಕ್ ಬೋರ್ಡ್‌ ಬಳಿ 2 ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿ ನಿಂತಿದ್ದರಿಂದ 2 ಕಿಲೋ ಮೀಟರ್‌ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಎದುರಾಗಿದೆ.

publive-image

ನಿರಂತರ ಮಳೆಯ ವೇಳೆ ಸಿಲಿಕಾನ್ ಸಿಟಿಯ IT ಕಂಪನಿಗಳಿಗೆ ವಾಹನ ಸಂಚಾರವೇ ಕಷ್ಟವಾಗುತ್ತಿದೆ. ಧಾರಾಕಾರ ಮಳೆಗೆ ತತ್ತರಿಸಿದ ಬೆಂಗಳೂರು ಟೆಕ್ಕಿಗಳು ಮತ್ತೆ ವರ್ಕ್ ಫ್ರಮ್‌ ಹೋಮ್‌ಗೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ದಿಢೀರ್‌ ಸಿಟಿ ರೌಂಡ್ಸ್ ರದ್ದು ಮಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ 

ಸೋಷಿಯಲ್ ಮೀಡಿಯಾದಲ್ಲಿ ಟೆಕ್ಕಿಗಳು ಈ ಬಗ್ಗೆ ಅಭಿಯಾನ ನಡೆಸುತ್ತಾ ಇದ್ದು, ವರ್ಕ್ ಫ್ರಮ್‌ ಹೋಮ್‌ ಕಡ್ಡಾಯಗೊಳಿಸಲು ಒತ್ತಾಯಿಸುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗುತ್ತಿದೆ. ಹವಾಮಾನ ವೈಪರಿತ್ಯದ ಇಂತಹ ಪರಿಸ್ಥಿತಿಯಲ್ಲಿ ಸಂಬಂಧಪಟ್ಟವರು ವರ್ಕ್ ಫ್ರಮ್‌ ಹೋಮ್‌ ಕಡ್ಡಾಯಗೊಳಿಸೋದೇ ಉತ್ತಮ ಎನ್ನುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment