/newsfirstlive-kannada/media/media_files/2025/08/10/harley-davidson-2025-08-10-16-58-19.jpg)
ರೋಡಲ್ಲಿ ಸುಯ್ ಅಂತ ಸೌಂಡ್ ಬಂದ್ರೆ ಸಾಕು.. ಇದ್ಯಾವುದಪ್ಪಾ ಬೈಕ್? ಆಯಾಬುಝನಾ ಅಥವಾ ಹಾರ್ಲಿ ಡೇವಿಡ್ಸನ್ನಾ ಅಂತ ಕಣ್ ಕಣ್ ಬಿಡ್ತಾ ನೋಡ್ತಾ ಇರ್ತಿವಿ. ಯಾಕಂದ್ರೆ ಸೂಪರ್ ಬೈಕ್ಗಳ ಕ್ರೇಝ್ ಅಂದ್ರೆ ಹಂಗೇ ರೀ..
ಯೆಸ್ YOU HEARD IT RIGHT.. ಡಿಸ್ಕೌಂಟ್ ಡಿಸ್ಕೌಂಟ್ ಡಿಸ್ಕೌಂಟ್.. ಸೂಪರ್ ಬೈಕ್ಗಳ ಮೇಲೆ ರಿಯಾಯಿತಿ ಸಿಗೋದು ಸ್ವಲ್ಪ ಕಷ್ಟಾನೇ.. ಆದರೂ ಈ ಡಿಸ್ಕೌಂಟ್ ಹೆಂಗೆ? HARLEY-DAVIDSON FAT BOY ಮಾಡೆಲ್ ಮೇಲೆ ಇದೀಗ ಫ್ಲ್ಯಾಟ್ 3 ಲಕ್ಷ ರೂಪಾಯಿ ರಿಯಾಯಿತಿ ನೀಡ್ತಾ ಇರೋದು. ಈ ಬೈಕ್ 5 ಕಲರ್ಗಳಲ್ಲಿ ಲಭ್ಯ. 2*2 ಸೈಲೆಂಸರ್ಗಳನ್ನು ಹೊಂದಿದೆ. ಜೊತೆಗೆ 103HP ಪವರ್ ಈ ಗಾಡಿಗಿದೆ. 3 ರೈಡ್ ಮೋಡ್ ಹೊಂದಿದೆ- ರೋಡ್, ರೈನ್ ಹಾಗೂ ಸ್ಪೋರ್ಟ್ ಮೋಡ್ನಲ್ಲಿ ಇದನ್ನು ಚಲಾಯಿಸಬಹುದು. 127mm ANALOG DISPLAY ಹೊಂದಿದೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ 6 ಜನರ ಬಂಧನ.. ಇನ್ನುಳಿದವರಿಗಾಗಿ ಹುಟುಕಾಟ ನಡೆಸಿದ ಪೊಲೀಸರು
ಅಡ್ಜಸ್ಟ್ ಮಾಡಬಹುದಾದ ಬ್ರೇಕ್ ಲೀವರ್ ಹಾಗೂ USB C-TYPE ಚಾರ್ಜಿಂಗ್ ಸೌಲಭ್ಯ ಕೂಡ ಇದೆ. ಇದು 1866 cc ಗಾಡಿ ಮತ್ತು ಪ್ರತೀ ಲೀಟರ್ ಪೆಟ್ರೋಲ್ಗೆ ಸುಮಾರು 18 ಕಿ.ಮೀ ಮೈಲೇಜ್ ನೀಡುತ್ತೆ. ಆದ್ರೆ ಇದನ್ನು ಯಮಭಾರ ಅಂತ ಹೇಳಬಹುದು. ಯಾಕಂದ್ರೆ 300 ಕೆಜಿ ತೂಕವನ್ನು ಈ ಬೈಕ್ ಹೊಂದಿದೆ. ಇವಿಷ್ಟು HARLEY-DAVIDSON FAT BOY ಮಾಡೆಲ್ನ ಪರ್ಫಾಮೆನ್ಸ್ ಡೀಟೇಲ್ಸ್.. ಇನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಇದರ ಬೆಲೆ.
ಇದರ ಎಕ್ಸ್-ಶೋರೂಂ ಬೆಲೆ 25-30ಲಕ್ಷ ಇದೆ. ಇದು ಪ್ರತಿ ನಗರಕ್ಕೂ ಹಾಗೂ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತೆ. ಆದ್ರೆ ಇದರ ಬೆಲೆ ಎಷ್ಟೇ ಇದ್ರೂ ಕೂಡ ನಿಮಗೆ 3 ಲಕ್ಷ ಫ್ಲ್ಯಾಟ್ ಡಿಸ್ಕೌಂಟ್ ನೀಡ್ತೀವಿ ಅಂತಿದೆ ಈ ಕಂಪನಿ. ಇದಕ್ಕೆ ಕಾರಣಾನೂ ಇದೆ ಹಾಗೂ ಒಂದೊಳ್ಳೆ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಕೂಡ ಇದೆ. ಅದೇನೆಂದ್ರೆ ಈ ವರ್ಷ ಅಂದ್ರೆ HARLEY-DAVIDSON FAT BOY ಮಾಡೆಲ್ನ ಪ್ರೊಡಕ್ಷನ್ನ ಸ್ಥಗಿತಗೊಳಿಸಲಾಗಿದೆ. ಆದ್ರೆ ಇದೇ ಈ ಗಾಡಿಯ ಎಂಡ್ ಅಂತ ಭಾವಿಸಬೇಡಿ. ಬದಲಾಗಿ ಈ ಮಾಡೆಲ್ ಹಾಗೂ HARLEY-DAVIDSON FAT BOB ಮಾಡೆಲ್ಗಳನ್ನು ಸ್ಟಾಪ್ ಮಾಡಿ, ಇನ್ಮುಂದೆ, ಇದರ ADVANCED ವರ್ಷನ್ ಆದ 1923ccಯ STREET BOB ಮಾಡೆಲ್ ಮಾರುಕಟ್ಟೆಗೆ ಲಗ್ಗೆ ಇಡ್ತಾ ಇದೆ.
ಹಾಗಾಗಿ ಈ ಹಿಂದಿನ ಮಾಡೆಲ್ಗಳಾದ HARLEY-DAVIDSON FAT BOY ಹಾಗೂ HARLEY-DAVIDSON FAT BOB ಬೈಕ್ಗಳ ಮೇಲೆ ಸ್ವತಃ HARLEY-DAVIDSON ಡಿಸ್ಕೌಂಟ್ ನೀಡ್ತಾ ಇದ್ದು, ಅದನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಆದ್ರೆ, ಎಷ್ಟು ಸ್ಟಾಕ್ ಲಭ್ಯ ಇದ್ಯೋ ಆ ಗಾಡಿಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ. ಸೋ ದುಬಾರಿ ಹಾಗೂ ಸ್ಪೋಟ್ಸ್ ಬೈಕ್ ಮೇಲೆ ಡಿಸ್ಕೌಂಟ್ ಸಿಗೋದೇ ಅಪರೂಪ. ಆದ್ರೆ ನೀವೇನಾದ್ರೂ ಈ ಬೈಕ್ಗಳ ಪ್ರಿಯರಾಗಿದ್ರೆ ಬೇಗ ಬೇಗ ಶೋರೂಂಗೆ ಭೇಟಿ ನೀಡಿ.
ವಿಶೇಷ ವರದಿ: ರಾಹುಲ್ ದಯಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ