/newsfirstlive-kannada/media/media_files/2026/02/14/anthropic-claude-1-2026-02-14-16-49-42.jpg)
ಭಾರತದ ಅಂಥ್ರೋಪಿಕ್ ವರ್ಸಸ್ ಅಮೆರಿಕಾದ ಅಂಥ್ರೋಪಿಕ್!
ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯುಗ. ಎಲ್ಲವೂ ಈಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕವೇ ನಡೆಯುತ್ತಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಿಂದ ಉದ್ಯೋಗಗಳು ಕಣ್ಮರೆಯಾಗುವ ಆತಂಕವೂ ಇದೆ. ಈಗಾಗಲೇ ಜಗತ್ತಿನಲ್ಲಿ ಅಮೆರಿಕಾದ ಅಂಥ್ರೋಪಿಕ್ಸ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿಯು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅಂಥ್ರೋಪಿಕ್ಸ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ 7 ಟೂಲ್ ಗಳು ಸಾಫ್ಟ್ ವೇರ್ ಕಂಪನಿಗಳು ಮಾಡುವ ಎಲ್ಲ ಕೆಲಸಗಳನ್ನು ಮಾಡ್ತಾವೆ. ಇದರಿಂದಾಗಿ ಸಾಫ್ಟ್ ವೆೇರ್ ಕಂಪನಿಗಳಿಗೆ ಭಾರಿ ನಡುಕ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ಅಂಥ್ರೋಪಿಕ್ಸ್ ಎಐ ಕಂಪನಿಯಿಂದ ಸಾಫ್ಟ್ ವೇರ್ ದೈತ್ಯ ಕಂಪನಿಗಳಾದ ಇನ್ಪೋಸಿಸ್, ಎಚ್‌ಸಿಎಲ್, ಟೆಕ್ ಮಹೀಂದ್ರಾ, ಟಿಸಿಎಸ್ ಸೇರಿದಂತೆ ಎಲ್ಲ ಐ.ಟಿ. ಕಂಪನಿಗಳ ಷೇರುಗಳ ಬೆಲೆಯೇ ಭಾರಿ ಕುಸಿತ ಕಾಣುತ್ತಿದೆ. ಇನ್ನೂ ಒಂದೆರೆಡು ವರ್ಷದಲ್ಲಿ ಐ.ಟಿ. ಉದ್ಯೋಗಿಗಳಿಗೆ ಅಂಥ್ರೋಪಿಕ್ಸ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿಯು ಭಾರಿ ದುಸ್ವಪ್ನವಾಗಲಿದೆ. ಈಗಾಗಲೇ ಅಂಥ್ರೋಪಿಕ್ಸ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿಯು ಬರೋಬ್ಬರಿ 30 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ.
/filters:format(webp)/newsfirstlive-kannada/media/media_files/2026/02/14/anthropic-claude-2026-02-14-16-52-55.jpg)
ಆದರೇ, ಅಮೆರಿಕಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿಯಾದ ಅಂಥ್ರೋಪಿಕ್ಸ್ ವಿರುದ್ಧ ಬೆಳಗಾವಿ ನಿವಾಸಿಯೊಬ್ಬರು ಈಗ ಕಾನೂನು ಸಮರ ಸಾರಿದ್ದಾರೆ. ಬೆಳಗಾವಿಯ ನಿಪ್ಪಾಣಿ ಮೂಲದ ಮೊಹಮ್ಮದ್ ಅಯಾಜ್ ಅಮೆರಿಕಾದ ಅಂಥ್ರೋಪಿಕ್ಸ್ ಕಂಪನಿಯ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಏಕೆಂದರೇ, ಮೊಹಮ್ಮದ್ ಅಯಾಜ್ ಬೆಳಗಾವಿಯಲ್ಲಿ 2017 ರಲ್ಲೇ ಆಂಥ್ರೋಪಿಕ್ಸ್ ಕಂಪನಿಯನ್ನು ಆರಂಭಿಸಿದ್ದಾರೆ. ಈಗ ಅಮೆರಿಕ ಮೂಲದ ಆಂಥ್ರೋಪಿಕ್ ಎಂಟ್ರಿಯಿಂದ ಸಮಸ್ಯೆಯಾಗಿದೆ. ತಮ್ಮ ಸಂಸ್ಥೆಯ ಹೆಸರು ನಶಿಸುವ ಆತಂಕದಿಂದ ಮೊಹಮ್ಮದ್ ಅಯಾಜ್ ಕೋರ್ಟ್ ಮೊರೆ ಹೋಗಿದ್ದಾರೆ. ಈಗಾಗಲೇ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ದೂರು ದಾಖಲು ಮಾಡಿಕೊಂಡಿದೆ.
ಅಮೆರಿಕದ ಆಂಥ್ರೋಪಿಕ್ ಎಂಟ್ರಿಯಿಂದ ನಮ್ಮ ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ಆನ್ ಲೈನ್​ನಲ್ಲಿ ನಮ್ಮ ಅಸ್ತಿತ್ವವೇ ನಶಿಸಿ ಹೋಗುವ ಆತಂಕ ಇದೆ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದಾನೆ ಎಂದು ಸಂಸ್ಥೆ ಮಾಲೀಕ ಮೊಹಮ್ಮದ್ ನಯಾಜ್ ಹೇಳಿದ್ದಾರೆ. ನಮ್ಮ ಸ್ಟಾರ್ಟ್ ಆಪ್ ರಕ್ಷಣೆಗೆ ಸರ್ಕಾರ ಬರಬೇಕು ಎಂದು ಆಗ್ರಹಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಮಾರ್ಟ್ ಬುಕ್, ವೈಫೈ ಮಾನಿಟೈಜೇಷನ್, ಸುರಕ್ಷಿತ ಚಾಲನೆಗೆ ಪೇಟೇಂಟ್ ಅನ್ನು ಬೆಳಗಾವಿಯ ಅಂಥ್ರೋಪಿಕ್ಸ್ ಸಂಸ್ಥೆ ಪಡೆದಿದೆ.
ಈಗ ಬೆಳಗಾವಿಯ ಕಂಪನಿಯು ಟ್ರೇಡ್ ಮಾರ್ಕ್ ಕೇಸ್ ಅನ್ನು ಕೋರ್ಟ್ ನಲ್ಲಿ ದಾಖಲಿಸಿದೆ. ಕೋರ್ಟ್ ಸದ್ಯಕ್ಕೆ ಬೆಳಗಾವಿಯ ಅಂಥ್ರೋಪಿಕ್ಸ್ ಕಂಪನಿಯ ಪರವಾಗಿ ಯಾವುದೇ ಆದೇಶ ನೀಡಿಲ್ಲ. ಏಕೆಂದರೇ, ಅಮೆರಿಕಾದ ಅಂಥ್ರೋಪಿಕ್ಸ್ ಕಂಪನಿಯು ಭಾರತವನ್ನು ಪ್ರವೇಶ ಮಾಡಿಲ್ಲ. ಭಾರತದಲ್ಲಿ ಅಮೆರಿಕಾದ ಅಂಥ್ರೋಪಿಕ್ಸ್ ಕಂಪನಿಯು ಕಾರ್ಯಾಚರಣೆಯನ್ನು ಮಾಡುತ್ತಿರುವುದಕ್ಕೆ ಸಾಕ್ಷ್ಯಗಳೂ ಇಲ್ಲ. ಹೀಗಾಗಿ ಬೆಳಗಾವಿಯ ಅಂಥ್ರೋಪಿಕ್ಸ್ ಕಂಪನಿಯ ಅರ್ಜಿಯ ಆಧಾರದ ಮೇಲೆ ಟ್ರೇಡ್ ಮಾರ್ಕ್ ಗೆ ಸಂಬಂಧಿಸಿದಂತೆ ಏಕಪಕ್ಷೀಯ ಆದೇಶ ನೀಡಲಾಗಲ್ಲ ಎಂದು ಕೋರ್ಟ್ ಹೇಳಿದೆ. ಆದರೇ, ವಿಚಾರಣೆಯನ್ನು ಫೆಬ್ರವರಿ 16 ಕ್ಕೆ ಮುಂದೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us