/newsfirstlive-kannada/media/media_files/2025/09/09/elephant-4-2025-09-09-13-27-44.jpg)
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಗೆ ರೈತ ಹೈರಣಾಗಿದ್ದಾರೆ. ದಿನ ರೈತರ ತೋಟಕ್ಕೆ ಲಗ್ಗೆ ಇಡೋ ಕಾಡನೆ ಮಕ್ಕಳಂತೆ ಸಾಕಿದ ಬೆಳೆಗಳನ್ನ ನಾಶ ಮಾಡ್ತಿವೆ. ಇದರ ನಡುವೆ ತೋಟಕ್ಕೆ ಕಾಲಿಡಲು ಭಯಪಡುವತಂಹ ಸ್ಥಿತಿ ಇದೆ.. ಇದನ್ನ ಗಮನಿಸಿದ ಖಾಸಗಿ ಸಂಸ್ಥೆಯೊಂದು ರೈತರ ಸಮಸ್ಯೆ ವಿರುದ್ಧ ಹೋರಾಡಿದ್ದಕ್ಕೆ ನಿಂತಿದ್ದು, ಕೊಂಚ ಮಟ್ಟಿಗೆ ರಿಲೀಫ್ ನೀಡುವ ಪ್ಲಾನ್ ಮಾಡಿದೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ದಿನ ಬೆಳಗಾದ್ರೆ ರೈತರು ತಮ್ಮ ಬೆಳೆಗಳನ್ನ ಉಳಿಸಿಕೊಳ್ಳೋದೆ ದೊಡ್ಡ ಸವಾಲಾಗಿದೆ. ಕಾರಣ ಕಾಡು ಪ್ರಾಣಿಗಳ ಹಾವಳಿ. ಕಾಡಿನಿಂದ ತೋಟಗಳಿಗೆ ಲಗ್ಗೆ ಇಡೋ ಕಾಡಾನೆಗಳ ಹಿಂಡು.. ಬೆಳೆಗಳನ್ನ ನಾಶ ಮಾಡಿಬಿಡುತ್ತಿವೆ.. ಅಡಿಕೆ ಮರಗಳನ್ನ ಮುರಿದು ಹಾಕುತ್ತಿವೆ.. ಇದ್ರಿಂದ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಬೆಳೆ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿವೆ. ಇದಕ್ಕೆಲ್ಲಾ ಇನ್ಮೇಲೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಗಜರಾಜನ ಹಾವಳಿಗೆ ಬ್ರೇಕ್.. ಖಾಸಗಿ ಸಂಸ್ಥೆಯಿಂದ ಡಿವೈಸ್!
ತೋಟಕ್ಕೆ ತೆರಳುವ ರೈತರು.. ಕಾರ್ಮಿಕರಿಗೆ ಜೀವ ಭಯ.. ಎನ್.ಆರ್ ಪುರ ಭಾಗದಲ್ಲಿ ಒಂದು ವರ್ಷದಲ್ಲಿ ಐದು ಜನ ಕಾಡಾನೆಗೆ ಮೃತಪಟ್ಟಿದ್ದಾರೆ. ಹೀಗಾಗಿ ಜೀವ ಭಯದಲ್ಲಿ ಓಡಾಡುವಂತಹ ಸ್ಥಿತಿ ಇದೆ. ಇದನ್ನೆಲ್ಲಾ ಗಮನಿಸಿದ ಖಾಸಗಿ ಸಂಸ್ಥೆಯೊಂದು ರೈತರ ಸಮಸ್ಯೆಗೆ ಬ್ರೇಕ್ ಹಾಕಲು ಹೊಸ ಡಿವೈಸ್ ಕಂಡು ಹಿಡಿಯಲು ಮುಂದಾಗಿದೆ.
ಮೂರು ಬಗೆಯ ಡಿವೈಸ್ ತಂತ್ರಜ್ಞಾನ.. ಆಗುತ್ತಾ ಸಕ್ಸಸ್!?
ಬೆಂಗಳೂರು ಮೂಲದ ಖಾಸಗಿ ಕಂಪನಿ ರೈತರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮೂರು ಡಿವೈಸ್ಗಳನ್ನ ಕಂಡು ಹಿಡಿಯಲು ಮುಂದಾಗಿದೆ. ಒಂದು ಜೋರಾಗಿ ಶಬ್ಧ ಮಾಡುವ ಸೈರನ್.. ಇನ್ನೊಂದು ಪ್ರಕಾಶಮಾನವಾದ ಬೆಳಕು ಚೆಲ್ಲುವ ಲೈಟ್.. ಮತ್ತೊಂದು ಅಟೋಮ್ಯಾಟಿಕ್ ಶಬ್ದ ಮಾಡುವ ಗನ್.. ಇವೆಲ್ಲಾವು ಸೆನ್ಸಾರ್ ಮೂಲಕ ವರ್ಕ್ ಮಾಡಲಿದ್ದು, ಈ ಬಗ್ಗೆ ಶೃಂಗೇರಿ ಎನ್.ಆರ್ ಪುರ ಭಾಗದ ಹಲವು ರೈತರಿಗೆ ಮಾಹಿತಿ ನೀಡಿದ್ದಾರೆ.
ರೈತರು ಈ ಡಿವೈಸ್ ಅಳವಡಿಸಿಕೊಳ್ಳಲು ಚಿಂತನೆ ನಡೆಸ್ತಿದ್ದಾರೆ.. ಈಗಾಗಲೇ ಸಾಕಷ್ಟು ಬೆಳೆಗಳನ್ನ ಕಳೆದುಕೊಂಡು ನಷ್ಟ ಅನುಭವಿಸಿರೋ ರೈತರು, ಒಮ್ಮೆ ಪರಿಹಾರ ಸಿಕ್ಕಿದ್ರೆ ಸಾಕಪ್ಪ ಅಂತಿದ್ದಾರೆ. ಇದರ ನಡುವೆ ರೈತರಿಗೆ ಈ ಡಿವೈಸ್ಗಳು ಎಷ್ಟರ ಮಟ್ಟಿಗೆ ಎಫೆಕ್ಟಿವ್ ಅನ್ನೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ವಿಶೇಷ ವರದಿ: ಮಹಾರುದ್ರ ಹಿತ್ತಲ್ಲಕೊಪ್ಪ, ನ್ಯೂಸ್ ಫಸ್ಟ್, ಚಿಕ್ಕಮಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ