Advertisment

ಗೂಗಲ್ ಸಿಇಓ ಸುಂದರ್ ಪಿಚ್ಚೈಗೆ 692 ಮಿಲಿಯನ್ ಡಾಲರ್ ಸಂಬಳ, ಇನ್ಸೆಂಟೀವ್ ನೀಡಲು ಕಂಪನಿ ನಿರ್ಧಾರ!

ಗೂಗಲ್ ಕಂಪನಿಯನ್ನು ಸುಂದರ್ ಪಿಚ್ಚೈ ಸಿಇಓ ಆಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹೀಗಾಗಿ ಸುಂದರ್ ಪಿಚ್ಚೈ ಅವರಿಗೆ ಭಾರಿ ಭರ್ಜರಿ ಸಂಬಳ, ಇನ್ಸೆಂಟೀವ್ ನೀಡಲು ಗೂಗಲ್ ಕಂಪನಿಯ ಆಡಳಿತ ಮಂಡಳಿ ನಿರ್ಧರಿಸಿದೆ. ಸುಂದರ್ ಪಿಚ್ಚೈ ಅವರಿಗೆ 692 ಮಿಲಿಯನ್ ಡಾಲರ್ ಸಂಬಳ , ಇನ್ಸೆಂಟೀವ್ ನೀಡಲಾಗುತ್ತಿದೆ.

author-image
Chandramohan
Google ceo sundar pichai
Advertisment


ಗೂಗಲ್ ಕಂಪನಿಯ ಸಿಇಓ ಸುಂದರ್ ಪಿಚ್ಚೈ ಗೆ ನೀಡುವ ಸಂಬಳವನ್ನು ಮುಂದಿನ ಮೂರು ವರ್ಷಗಳಿಗೆ 692 ಮಿಲಿಯನ್ ಡಾಲರ್ ನೀಡಲು ನಿರ್ಧರಿಸಿದೆ. ಇದರಿಂದಾಗಿ ಜಾಗತಿಕ ಕಂಪನಿಗಳ ಸಿಇಓ ಪೈಕಿ ಅತಿ ಹೆಚ್ಚು ಸಂಬಳ ಪಡೆಯುವ ಸಿಇಓ ಸುಂದರ್ ಪಿಚ್ಚೈ ಆಗಿದ್ದಾರೆ. 

Advertisment

ಈ ಬರೋಬ್ಬರಿ 692 ಮಿಲಿಯನ್ ಡಾಲರ್ ಪೈಕಿ, 126 ಮಿಲಿಯನ್ ಡಾಲರ್ ಅನ್ನು ಫಾರ್ಮಮೆನ್ಸ್ ಸ್ಟಾಕ್ ಯೂನಿಟ್ಸ್ ಮೂಲಕ ನೀಡಲಾಗುತ್ತೆ. ಇದನ್ನು 2 ಕಂತುಗಳಲ್ಲಿ ನೀಡಲಾಗುತ್ತೆ. 
ಈ ಫಾರ್ಪಮೆನ್ಸ್ ಸ್ಟಾಕ್ ಯೂನಿಟ್ಸ್ ಗಳು ಅಲ್ಪಾಬೆಟ್ ಕಂಪನಿಗೆ ಸೇರಿದವು. ಒಂದು ವೇಳೆ ಸುಂದರ್ ಪಿಚ್ಚೈ ಫಾರ್ಮಮೆನ್ಸ್ ಟಾರ್ಗೆಟ್ ಅನ್ನು ಗುರಿ ಮೀರಿ ಸಾಧಿಸಿದರೇ, 252 ಮಿಲಿಯನ್ ಡಾಲರ್ ಕೂಡ ಆಗಬಹುದು.  ಅದೇ ವೇಳೆ ಸುಂದರ್ ಪಿಚ್ಚೈ ಫಾರ್ಪಮೆನ್ಸ್ ಸಾಧಿಸದೇ ಹೋದರೇ, ಏನೂ ಸಿಗದೆಯೇ ಹೋಗಬಹುದು. 
ಎಲ್ಲಕ್ಕಿಂತ ಹೆಚ್ಚಾಗಿ ಸುಂದರ್ ಪಿಚ್ಚೈ ಗೆ  ಮುಂದಿನ 3 ವರ್ಷದಲ್ಲಿ 84 ಮಿಲಿಯನ್ ಡಾಲರ್ ಹಣ ನೀಡಲಾಗುತ್ತೆ. ಇದರ ಜೊತೆಗೆ ವಾರ್ಷಿಕ ಸಂಬಳವಾಗಿ 2 ಮಿಲಿಯನ್ ಡಾಲರ್ ನೀಡಲಾಗುತ್ತೆ. 
ಇನ್ನೂ ಗೂಗಲ್ ಕಂಪನಿಯು ಒಟ್ಟಾರೆ 350 ಮಿಲಿಯನ್ ಡಾಲರ್ ಮೌಲ್ಯದ ಹೊಸ ಸ್ಟಾಕ್ ಇನ್ಸೆಂಟೀವ್ ಗಳನ್ನು ಪರಿಚಯಿಸಿದೆ. 
ಗೂಗಲ್ ಸಿಇಒ ವೇಮೋ ಸ್ಟಾಕ್‌ನಲ್ಲಿ $130 ಮಿಲಿಯನ್ ಮತ್ತು ವಿಂಗ್ ಏವಿಯೇಷನ್ ​​ಷೇರುಗಳಲ್ಲಿ $45 ಮಿಲಿಯನ್ ಪಡೆಯಲಿದ್ದಾರೆ. 
 ಸುಂದರ್ ಪಿಚ್ಚೈ ಅವರ ಮೇಲ್ವಿಚಾರಣೆಯಲ್ಲಿ "ಸ್ವಾಯತ್ತ ಚಾಲನೆ ಮತ್ತು ವಿತರಣೆಯಲ್ಲಿ ಅಗಾಧ ಸವಾಲುಗಳನ್ನು ನಿಭಾಯಿಸುವುದು" ಎಂದು ವಿವರಿಸಿದ ಗೂಗಲ್ ಆಡಳಿತ ಮಂಡಳಿಯು,  ವೇಮೋ ಮತ್ತು ವಿಂಗ್‌ನ ನಾಯಕತ್ವದಲ್ಲಿ ಕಂಪನಿಯ ವಿಶ್ವಾಸವನ್ನು ಪ್ರೋತ್ಸಾಹಕಗಳು ಪ್ರತಿಬಿಂಬಿಸುತ್ತವೆ ಎಂದು ಆಲ್ಫಾಬೆಟ್‌ನ ಮಂಡಳಿ ಹೇಳಿದೆ.

ಆಗಸ್ಟ್ 2015 ರಲ್ಲಿ ಸಿಇಒ ಆದ ನಂತರ, ಪಿಚೈ ಗೂಗಲ್‌ನ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಸುಮಾರು ಏಳು ಪಟ್ಟು ಹೆಚ್ಚಳವನ್ನು  ಮಾಡಿದ್ದಾರೆ.  $535 ಬಿಲಿಯನ್‌ನಿಂದ $3.6 ಟ್ರಿಲಿಯನ್‌ಗೆ ಏರಿಸಿದ್ದಾರೆ. ಜೊತೆಗೆ  ಜನವರಿಯಲ್ಲಿ ಗೂಗಲ್ ಕಂಪನಿಯ ಬಂಡವಾಳ ಮೌಲ್ಯ   ಕೆಲ ದಿನ $4 ಟ್ರಿಲಿಯನ್ ತಲುಪಿದೆ.

ಭಾರತೀಯ ಮೂಲದ, 53 ವರ್ಷದ ಮಾಜಿ ಮೆಕಿನ್ಸೆ ಸಲಹೆಗಾರ, 2004 ರಲ್ಲಿ ಗೂಗಲ್‌ಗೆ ಸೇರಿದರು . ಗೂಗಲ್ ಸಿಇಓ ಸ್ಥಾನಕ್ಕೇರುವ ಮೊದಲು ಕ್ರೋಮ್ ಅನ್ನು ಅಭಿವೃದ್ದಿಪಡಿಸುವುದು ಮತ್ತು ಆಂಡ್ರಾಯ್ಡ್ ಅನ್ನು ಮುನ್ನಡೆಸಿದ್ದರು.

Advertisment


ಈ ವಾರದ ಆರಂಭದಲ್ಲಿ, ಪಿಚೈ ಸುಮಾರು $9.8 ಮಿಲಿಯನ್ ಮೌಲ್ಯದ 32,500 ಕ್ಲಾಸ್ ಸಿ ಷೇರುಗಳನ್ನು ಮಾರಾಟ ಮಾಡಿದರು .  ಅವರು ಮತ್ತು ಅವರ ಪತ್ನಿ ಶುಕ್ರವಾರದ ಮುಕ್ತಾಯದ ಬೆಲೆ ಪ್ರತಿ ಷೇರಿಗೆ $298 ನಲ್ಲಿ $498 ಮಿಲಿಯನ್ ಮೌಲ್ಯದ 1.67 ಮಿಲಿಯನ್ ಗೂಗಲ್ ಷೇರುಗಳನ್ನು ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ 2025 ರ ಆರ್ಥಿಕ ವರ್ಷದಲ್ಲಿ $96.5 ಮಿಲಿಯನ್ ಗಳಿಸಿದರೆ, ಆಪಲ್‌ನ ಟಿಮ್ ಕುಕ್ $74.3 ಮಿಲಿಯನ್ ಗಳಿಸಿದರು. 

GOOGLE INVESTEMENT IN INDIA03




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Google ceo sundar pichai salary
Advertisment
Advertisment
Advertisment