/newsfirstlive-kannada/media/media_files/2026/02/04/it-shares-down-1-2026-02-04-18-20-03.jpg)
ಆಂಥ್ರೋಪಿಕ್ ಸಂಸ್ಥೆಯ ಹೊಸ ಎಐ ಏಜೆಂಟ್‌ಗಳು ಜಾಗತಿಕ ಐಟಿ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಉದ್ಯೋಗಿಗಳು ಮಾಡುವ ಕೆಲಸಗಳನ್ನ ಎಐ ಕಸಿದುಕೊಳ್ಳುವ ಭೀತಿ ಆವರಿಸಿದೆ. ಅಮೆರಿಕದ ಬೆನ್ನಲ್ಲೇ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಸೇರಿ ಭಾರತೀಯ ಐಟಿ ದಿಗ್ಗಜರ ಷೇರುಗಳು ಭಾರೀ ಕುಸಿತ ಕಂಡಿವೆ. ಒಂದೇ ದಿನದಲ್ಲಿ ಲಕ್ಷಾಂತರ ಕೋಟಿ ನಷ್ಟವಾಗಿದ್ದು, ಕೃತಕ ಬುದ್ಧಿಮತ್ತೆಯ ಈ ಅಬ್ಬರಕ್ಕೆ ಹೂಡಿಕೆದಾರರು ಬೆಚ್ಚಿಬಿದ್ದಿದ್ದಾರೆ.
ಆಂಥ್ರೋಪಿಕ್ ರಿಲೀಸ್ ಮಾಡಿರುವ ಹೊಸ ಎಂಟರ್‌ಪ್ರೈಸ್ ಎಐ ಟೂಲ್‌ಗಳು ಗ್ಲೋಬಲ್ ಇನ್ವೆಸ್ಟರ್‌ಗಳ ನಿದ್ದೆಗೆಡಿಸಿವೆ. ಇವು ಕೇವಲ ಸಾಮಾನ್ಯ ಅಪ್‌ಡೇಟ್‌ಗಳಲ್ಲ, ಬದಲಾಗಿ ಐಟಿ ಕಂಪನಿಗಳನ್ನೇ ನುಂಗಿಹಾಕಬಲ್ಲ ಸಾಮರ್ಥ್ಯವಿರುವ ಏಜೆಂಟ್‌ಗಳು ಎಂಬ ಭಯ ಈಗ ಆವರಿಸಿದೆ.
ಆಂಥ್ರೋಪಿಕ್ AI ಎಂಟ್ರಿಗೆ ಐಟಿ ಉದ್ಯೋಗಿಗಳಿಗೆ ನಡುಕ
ಸಾಫ್ಟ್‌ವೇರ್ ಸ್ಟಾಕ್ಸ್ ಹತ್ಯಾಕಾಂಡ.. ಟೆಕ್ ದಿಗ್ಗಜರು ಗಢಗಢ!
ಎಐ ಆಂಥ್ರೋಪಿಕ್ ನೂತನ ಟೂಲ್ ಐಟಿ ಉದ್ಯಮದ ಮೇಲೆ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಅಮೆರಿಕದ ಎಐ ಕಂಪನಿ ಆಂಥ್ರೋಪಿಕ್ ಬಿಡುಗಡೆ ಮಾಡಿರುವ ಹೊಸ ಟೂಲ್‌ಗಳು ಭಾರತೀಯ ಐಟಿ ವಲಯದಲ್ಲಿ ತಲ್ಲಣ ಮೂಡಿಸಿವೆ. ಭಾರತೀಯ ಐಟಿ ಕಂಪನಿಗಳ 'ಮ್ಯಾನ್ ಪವರ್‌ಗೆ ಹೊಡೆತ ಕೊಡಲಿದೆ. ಇದ್ರಿಂದ ಐಟಿ ಉದ್ಯೋಗಿಗಳ ನೆತ್ತಿಯ ಮೇಲೆ ಎಐ ತೂಗುಗತ್ತಿ ನೇತಾಡುತ್ತಿದೆ.
ಏನಿದು ಆಂಥ್ರೋಪಿಕ್ AI?
ಆಂಥ್ರೋಪಿಕ್ ಅಮೆರಿಕ ಮೂಲದ AI ಸ್ಟಾರ್ಟ್‌ಅಪ್ ಕಂಪನಿ
ಓಪನ್ ಎಐ ಕಂಪನಿಯ ಮಾಜಿ ಸಂಶೋಧಕರು ಸ್ಥಾಪಿಸಿದ್ದಾರೆ
ಕ್ಲಾಡ್ ಎಂಬ ಹೆಸರಿನ ಚಾಟ್‌ಬಾಟ್, ಎಐ ಮಾಡೆಲ್ ಅಭಿವೃದ್ಧಿ
ಗೂಗಲ್ ಮತ್ತು ಅಮೆಜಾನ್‌ನಂತಹ ದೊಡ್ಡ ಕಂಪನಿಗಳು ಹೂಡಿಕೆ
ಡಾಕ್ಯುಮೆಂಟ್ ಪರಿಶೀಲನೆ, ಕಾನೂನು ಒಪ್ಪಂದಗಳ ವಿಶ್ಲೇಷಣೆ
ಡೇಟಾ ಎಂಟ್ರಿ, ಸಾಫ್ಟ್‌ವೇರ್ ಕೋಡಿಂಗ್ ಸ್ವಯಂಚಾಲಿತ ಕೆಲಸ
ಐ.ಟಿ. ಉದ್ಯೋಗಿಗಳು ಮಾಡುವ 8 ಕೆಲಸಗಳನ್ನ AI ಮಾಡಲಿದೆ
ಐ.ಟಿ. ವಲಯದಲ್ಲಿ ಮತ್ತಷ್ಟು ಉದ್ಯೋಗಗಳು ಕುಸಿತವಾಗಲಿದೆ
(ಆಂಥ್ರೋಪಿಕ್ ಅಮೆರಿಕ ಮೂಲದ ಪ್ರಮುಖ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಆಗಿದ್ದು, ಇದನ್ನು ಓಪನ್ ಎಐ ಕಂಪನಿಯ ಮಾಜಿ ಸಂಶೋಧಕರು ಸ್ಥಾಪಿಸಿದ್ದಾರೆ. ಈ ಕಂಪನಿಯು ಕ್ಲಾಡ್ ಎಂಬ ಹೆಸರಿನ ಚಾಟ್‌ಬಾಟ್ ಮತ್ತು ಎಐ ಮಾಡೆಲ್‌ಗಳನ್ನ ಅಭಿವೃದ್ಧಿಪಡಿಸಿದೆ. ಗೂಗಲ್ ಮತ್ತು ಅಮೆಜಾನ್‌ನಂತಹ ದೊಡ್ಡ ಕಂಪನಿಗಳು ಇದರಲ್ಲಿ ಹೂಡಿಕೆ ಮಾಡಿವೆ. ದು ಡಾಕ್ಯುಮೆಂಟ್ ಪರಿಶೀಲನೆ, ಕಾನೂನು ಒಪ್ಪಂದಗಳ ವಿಶ್ಲೇಷಣೆ, ಡೇಟಾ ಎಂಟ್ರಿ ಮತ್ತು ಸಾಫ್ಟ್‌ವೇರ್ ಕೋಡಿಂಗ್‌ನಂತಹ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಬಲ್ಲದಾಗಿದೆ. ಐ.ಟಿ. ಉದ್ಯೋಗಿಗಳು ಮಾಡುವ 8 ಕೆಲಸಗಳನ್ನ AI ಮಾಡಲಿದೆ. ಇದು ಐ.ಟಿ. ವಲಯದಲ್ಲಿ ಮತ್ತಷ್ಟು ಉದ್ಯೋಗಗಳ ಕುಸಿತಕ್ಕೆ ಕಾರಣವಾಗಲಿದೆ.)
ದಲಾಲ್ ಸ್ಟ್ರೀಟ್‌ನಲ್ಲಿ ರಕ್ತಪಾತ, ಆಂಥ್ರೋಪಿಕ್ ಆಟಕ್ಕೆ ಶೇಕ್!
ಆಂಥ್ರೋಪಿಕ್‌ನ ನಡೆ ಷೇರು ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಐಟಿ ಕ್ಷೇತ್ರದಲ್ಲಿ ಎಐ ಸುನಾಮಿ ಎದ್ದಿದ್ದು, ಭಾರತೀಯ ಐಟಿ ಷೇರುಗಳಲ್ಲಿ ಕರಡಿ ಕುಣಿತಕ್ಕೆ ಅಮೆರಿಕದ ಎಐ ಟೂಲ್ ಕಾರಣವಾಗಿದೆ. ಮುಂಬೈನ ದಲಾಲ್ ಸ್ಟ್ರೀಟ್‌ನಲ್ಲಿ ರಕ್ತಪಾತವಾಗಿದ್ದು, ಆಂಥ್ರೋಪಿಕ್ ಕಿಚ್ಚಿಗೆ ಟೆಕ್ ದಿಗ್ಗಜರು ಮಕಾಡೆ ಮಲಗಿದ್ದಾರೆ.
ದಲಾಲ್ ಸ್ಟ್ರೀಟ್‌ನಲ್ಲಿ ರಕ್ತಪಾತ!
ಹೂಡಿಕೆದಾರರು ತಮ್ಮ ಷೇರುಗಳನ್ನು ದಿಢೀರ್ ಮಾರಾಟ
ಅಮೆರಿಕಾ, ಭಾರತದಲ್ಲಿ ಐ.ಟಿ. ಕಂಪನಿಗಳ ಷೇರುಗಳ ಕುಸಿತ
ಟಿಸಿಎಸ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ ಕಂಪನಿ
ವಿಪ್ರೋ ಕಂಪನಿಗಳ ಷೇರುಗಳ ದರದಲ್ಲಿ ದಿಢೀರ್ ಕುಸಿತ
ಐಟಿ ಉದ್ಯಮಕ್ಕೆ ಎಐ ಅಂಥ್ರೋಪಿಕ್ ಟೂಲ್ ಪರ್ಯಾಯ
ಐಟಿ ಉದ್ಯಮಗಳ ಮೇಲೂ ಕರಿ ಛಾಯೆ ಆವರಿಸಿದಂತಾಗಿದೆ
ಆಂಥ್ರೋಪಿಕ್ ಎಂಟ್ರಿ ಕೊಡ್ತಿದ್ದಂತೆ ಹೂಡಿಕೆದಾರರು ತಮ್ಮ ಷೇರುಗಳನ್ನು ದಿಢೀರ್ ಮಾರಾಟ ಮಾಡ್ತಿದ್ದಾರೆ. ಇದ್ರಿಂದ ಅಮೆರಿಕಾವಲ್ಲದೇ ಭಾರತದಲ್ಲೂ ಐ.ಟಿ. ಕಂಪನಿಗಳ ಷೇರುಗಳಲ್ಲಿ ಭಾರೀ ಕುಸಿತ ಕಂಡಿದೆ. ಟಿಸಿಎಸ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ವಿಪ್ರೋ ಕಂಪನಿಗಳ ಷೇರುಗಳ ದರದಲ್ಲಿ ದಿಢೀರ್ ಕುಸಿತ ಕಂಡಿದೆ. ಐಟಿ ಉದ್ಯಮಕ್ಕೆ ಎಐ ಅಂಥ್ರೋಪಿಕ್ ಟೂಲ್ ಪರ್ಯಾಯವಾಗಿ ರೂಪುಗೊಳ್ಳುವ ಸೂಚನೆಗಳು ಕಾಣುತ್ತಿದ್ದು, ಐಟಿ ಉದ್ಯಮಗಳ ಮೇಲೂ ಕರಿ ಛಾಯೆ ಆವರಿಸಿದೆ.)
ಭಾರತೀಯ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಎಐ ಒಂದು ಥ್ರೆಟ್ ಆಗಿದೆ. ಆದ್ರೆ, ಐಟಿ ಕಂಪನಿಗಳು ತಮ್ಮ ಜಾಗತಿಕ ಸ್ಥಾನವನ್ನು ಬಲಪಡಿಸಿಕೊಳ್ಳಲು ಎಐ ಬಳಕೆ ಅನಿವಾರ್ಯವಾಗಿದೆ. ಇಲ್ಲದಿದ್ದರೆ, ಷೇರು ಮಾರುಕಟ್ಟೆಯಲ್ಲಿ ಇಂತಹ ರಕ್ತಸಿಕ್ತ ಅಧ್ಯಾಯಗಳು ರಿಪೀಟ್ ಆಗೋದು ಪಕ್ಕಾ.
ನ್ಯೂಸ್‌ಫಸ್ಟ್ ಬ್ಯುರೋ...
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us