/newsfirstlive-kannada/media/media_files/2025/08/02/artificial-inteligence01-2025-08-02-15-29-30.jpg)
ಇತ್ತೀಚೆಗೆ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವುದು ಆತಂಕದ ವಿಷಯ. ಹಲವರ ಕನಸಿನ ಉದ್ಯೋಗಗಳು ಕ್ಷಣಮಾತ್ರದಲ್ಲಿ ಕಳೆದುಹೋಗುತ್ತಿದೆ. ಕೃತಕ ಬುದ್ಧಿಮತ್ತೆ (AI) ಎಂಬ ನೂತನ ತಂತ್ರಜ್ಞಾನ ಅದ್ಭುತ ವೇಗದಲ್ಲಿ ಉದ್ಯಮಗಳನ್ನು ಬದಲಾಯಿಸುತ್ತಿದೆ.
ಡೇಟಾ ನಿರ್ವಹಣೆ, ಗ್ರಾಹಕ ಸೇವೆ ಇವೆಲ್ಲವನ್ನೂ ತಂತ್ರಜ್ಞಾನ ತಾನೇ ಮಾಡಬಲ್ಲಷ್ಟು ಬಲಿಷ್ಠವಾಗಿದೆ. ಇದರ ಪರಿಣಾಮವಾಗಿ ಮಾನವ ಶ್ರಮದ ಅಗತ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚು ಕಂಪನಿಗಳು automation ಕೆಲಸದ ಮೊರೆ ಹೋಗಿವೆ. ಇದರ ಪರಿಣಾಮವೇ ಲೇ ಆಫ್ ಆಗುತ್ತಿದೆ.
ಐಬಿಎಂ, Google, Amazon, Meta, Spotify ಮುಂತಾದ ದೊಡ್ಡ ಟೆಕ್ ಕಂಪನಿಗಳೂ ಸಹ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿವೆ. ಈ ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆಂಬ ಮಾಹಿತಿ ಇದೆ. ಇದಕ್ಕೆ ಮೈಕ್ರೋಸಾಫ್ಟ್ ಕಂಪನಿ ಹೊರತಾಗಿಲ್ಲ.
ಮೈಕ್ರೋಸಾಫ್ಟ್ ವಿಶ್ವದ ಅತ್ಯಂತ ದೊಡ್ಡ ಐಟಿ ಕಂಪನಿ. ಇತ್ತೀಚೆಗೆ ಮೈಕ್ರೋಸಾಫ್ಟ್ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 3 ಸಾವಿರ ಉದ್ಯೋಗಿಗಳ ಲೇ ಆಫ್ ಮಾಡಿತ್ತು. ಇಂಜಿನಿಯರ್ಸ್ ಸೇರಿದಂತೆ ಸೇಲ್ಸ್ ಡಿಪಾರ್ಟ್ಮೆಂಟ್ನಲ್ಲಿ ಹೆಚ್ಚು ಲೇ ಆಫ್ ಆಗಿತ್ತು. ಈ ಬೆನ್ನಲ್ಲೇ ಮೈಕ್ರೋಸಾಫ್ಟ್ ಅಧ್ಯಯನದ ವರದಿಯೊಂದು ಶಾಕಿಂಗ್ ಮಾಹಿತಿಯನ್ನು ಹೊರ ಹಾಕಿದೆ.
ಇನ್ನೂ ಮೈಕ್ರೋಸಾಫ್ಟ್ ಶಾಕಿಂಗ್ ವರದಿಯಲ್ಲಿ ಏನಿದೆ ಅಂತಾ ನೋಡೋದಾದ್ರೆ..!
ಈ ವರದಿಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಿಂದ ಅಪಾಯದಲ್ಲಿರುವ 40 ಉದ್ಯೋಗಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಲೇಖಕರು, ಅನುವಾದಕರ ಹುದ್ದೆಗಳು ಅಪಾಯದಲ್ಲಿವೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಜತೆಗೆ ಈ ಪಟ್ಟಿಯಲ್ಲಿ ಇತಿಹಾಸಕರು, ಸೇಲ್ಸ್ ರಿಪ್ರೆಸೆಂಟೇಟಿವ್, ಪ್ಯಾಸೆಂಜರ್ ಅಟೆಂಡರ್ ಅಂತಹ ಉದ್ಯೋಗಳು ಕೂಡ ಸೇರಿವೆ.
ಯಾವೆಲ್ಲಾ ಉದ್ಯೋಗಗಳಿಗೆ AI ಎಚ್ಚರಿಕೆ ಗಂಟೆ ಅಂತಾ ನೋಡೋದಾದ್ರೆ..!
AI ತಂತ್ರಜ್ಞಾನದಿಂದಾಗಿ Customer Representative ಉದ್ಯೋಗಗಳು ಅತಿದೊಡ್ಡ ಅಪಾಯದಲ್ಲಿವೆ. ಸುಮಾರು 2.86 ಮಿಲಿಯನ್ ಜನರು ಈ ಉದ್ಯೋಗದಲ್ಲಿದ್ದಾರೆ. ಬರಹಗಾರರು, ಪತ್ರಕರ್ತರು, ಸಂಪಾದಕರು, ಅನುವಾದಕರು ಮತ್ತು ಪ್ರೂಫ್ ರೀಡರ್ ಉದ್ಯೋಗಗಳಿಗೆ AI ಎಚ್ಚರಿಕೆ ಗಂಟೆ ನೀಡಿದೆ.
ವೆಬ್ ಡೆವಲಪರ್‌ಗಳು, ಡೇಟಾ ವಿಜ್ಞಾನಿಗಳು, PR ವೃತ್ತಿಪರರು, ವ್ಯಾಪಾರ ವಿಶ್ಲೇಷಕರ ಕ್ಷೇತ್ರಗಳಲ್ಲೂ ಇದೇ ಕಥೆ. ಈಗಾಗಲೇ ಈ ಕ್ಷೇತ್ರಗಳಲ್ಲಿ ChatGPT ನಂತಹ AI ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಇವ್ರು ಉದ್ಯೋಗ ಕಳೆದುಕೊಳ್ಳೋ ಭೀತಿಯಲ್ಲಿದ್ದಾರೆ.
ವ್ಯಾಖ್ಯಾನಕಾರರು, ಅನುವಾದಕರು, ಸೋಶಿಯಲ್ ಸೈನ್ಸ್ ರೀಸರ್ಚ್ ಅಸಿಸ್ಟಂಟ್, ಹಿಸ್ಟೋರಿಯನ್ಸ್, ಸೋಶಿಯಲಿಸ್ಟ್, ಫೊಲಿಟಿಕಲ್ ಸೈಂಟಿಸ್ಟ್, ಮೀಡಿಯೇಟರ್ಸ್ ಆಂಡ್ ಸಜೇಶನ್ ಗಿವರ್, ಪಬ್ಲಿಕ್ ರಿಲೇಶನ್ ಸ್ಪೆಷಲಿಸ್ಟ್, ಎಡಿಟರ್ಸ್, ಕ್ಲಿನಿಕಲ್ ಡೇಟಾ ಮ್ಯಾನೇಜರ್, ರಿಪೋರ್ಟಸ್, ಜರ್ನಲಿಸ್ಟ್, ಟೆಕ್ನಿಕಲ್ ರೈಟರ್, ಕಾಪಿ ರೈಟರ್, ಪ್ರೂಫ್ ರೀಡರ್‌ಗಳು, ಕೋರ್ಟ್ ರಿಪೋಟರ್, ರೈಟರ್ ಆಂಡ್ ಆಥರ್ಸ್, ಪೋಸ್ಟ್‌ಸೆಕೆಂಡರಿ ಶಿಕ್ಷಕರು (ಸಂವಹನ, ಇಂಗ್ಲಿಷ್, ಇತಿಹಾಸ), ಕ್ರೆಡಿಟ್ ಕೌನ್ಸಿಲರ್, ತೆರಿಗೆ ತಯಾರಕರು (ಲೀಗಲ್ ಎಕ್ಸ್‌ಪರ್ಟ್, ರೈಟರ್), ಪ್ಯಾರಾಲೀಗಲ್‌ಗಳು ಮತ್ತು ಕಾನೂನು ಸಹಾಯಕರು, ಕಾನೂನು ಕಾರ್ಯದರ್ಶಿ, ಶೀರ್ಷಿಕೆ ಪರೀಕ್ಷಕರು ಮತ್ತು ಶೋಧಕರು, ಮಾರುಕಟ್ಟೆ ಸಂಶೋಧನಾ ವಿಶ್ಲೇಷಕ, ಮ್ಯಾನೇಜ್‌ಮೆಂಟ್ ಅನಲೈಸರ್, HR, ಕಸ್ಟಮರ್ ಸರ್ವಿಸ್ ರಿಪ್ರೆಸೆಂಟೇಟಿವ್, ಸೇಲ್ಸ್ ರಿಪ್ರೆಸೆಂಟೇಟಿವ್, ಕ್ಲೇಮ್ ಅಡ್ವೈಸರ್, ಕಂಪ್ಯೂಟರ್ ಸಿಸ್ಟಮ್ ಎನಾಲಿಸ್ಟ್, ಲೋನ್ ಆಫಿಸರ್, ಡೇಟಾ ವಿಜ್ಞಾನಿ, ಡೇಟಾಬೇಸ್ ಆರ್ಕಿಟೆಕ್ಟ್ ಹೀಗೆ ಹಲವರ ಕೆಲಸಗಳು ಹೋಗಲಿವೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ