/newsfirstlive-kannada/media/media_files/2025/09/07/caviar-iphone-14-pro-max-diamond-snowflake-edition-1-2025-09-07-10-17-44.jpg)
/newsfirstlive-kannada/media/media_files/2025/09/07/phone-phone-1-2025-09-07-10-18-37.jpg)
ದುಬಾರಿ ಫೋನ್ ಅಂದ್ರೆ ನಮ್ಮಲ್ಲಿ ಹೆಚ್ಚಿನವರು ಆಪಲ್ ಐಫೋನ್ ಎಂದು ಭಾವಿಸುತ್ತಾರೆ. ಆದರೆ ಜಗತ್ತಿನಲ್ಲಿ ಕೆಲವು ಅಲ್ಟ್ರಾ-ಐಷಾರಾಮಿ ಫೋನ್ಗಳು ಐಫೋನ್ ಪ್ರೊ ಮ್ಯಾಕ್ಸ್ಗಿಂತಲೂ ಹೆಚ್ಚು ಬೆಲೆ ಹೊಂದಿವೆ. ಕೇವಲ ತಂತ್ರಜ್ಞಾನದಿಂದ ಮಾತ್ರವಲ್ಲ, ವಿಶಿಷ್ಟ ವಿನ್ಯಾಸ, ಅಪರೂಪದ ವಸ್ತುಗಳು ಮತ್ತು ಐಷಾರಾಮಿ ಬ್ರ್ಯಾಂಡಿಂಗ್ನಿಂದಾಗಿ ದುಬಾರಿ ಆಗಿವೆ. ರಾಜಮನೆತನದವರು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಬಳಸುತ್ತಾರೆ. ಟಾಪ್ 5 ಐಷಾರಾಮಿ ಸ್ಮಾರ್ಟ್ಫೋನ್ಗಳು ಮತ್ತು ಯಾರು ಬಳಸುತ್ತಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.
/newsfirstlive-kannada/media/media_files/2025/09/07/falcon-supernova-iphone-6-pink-diamond-edition-2025-09-07-10-19-07.jpg)
Falcon Supernova iPhone 6 Pink Diamond Edition
ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ ಎಡಿಷನ್ ಬೆಲೆಯು 370 ಕೋಟಿ ರೂಪಾಯಿ. ಈ ಫೋನ್ 24 ಕ್ಯಾರೆಟ್ ಚಿನ್ನದ ಲೇಪನದಿಂದ ಕೂಡಿದೆ. ಹಿಂಭಾಗದಲ್ಲಿ ಗುಲಾಬಿ ವಜ್ರದ ಲೇಪನ ಇದೆ. ಇದನ್ನು ನೀತಾ ಅಂಬಾನಿ ಮತ್ತು ಇತರ ಜಾಗತಿಕ ಬಿಲಿಯನೇರ್ಗಳು ಬಳಸುತ್ತಾರೆ. ಇಲ್ಲಿಯವರೆಗೆ ಅಭಿವೃದ್ಧಿಪಡಿಸಲಾದ ಅತ್ಯಂತ ದುಬಾರಿ ಫೋನ್ ಇದಾಗಿದೆ.
/newsfirstlive-kannada/media/media_files/2025/09/07/goldvish-le-million-2025-09-07-10-19-33.jpg)
Goldvish Le Million
ಗೋಲ್ಡ್ವಿಶ್ ಲೆ ಮಿಲಿಯನ್ ಬೆಲೆ 7.5 ಕೋಟಿ ರೂಪಾಯಿ. ಇದು 18 ಕ್ಯಾರೆಟ್ ವೈಟ್ ಗೋಲ್ಡ್ನಿಂದ ತಯಾರಿಸಲಾಗಿದೆ. ಇದರಲ್ಲಿ 1,200 ವಜ್ರಗಳ ಹರಳುಗಳಿವೆ. ಇದು ಕೇವಲ 3 ಯೂನಿಟ್ಗಳಿಗೆ ಸೀಮಿತವಾಗಿದೆ. ಈ ಫೋನ್ ಅನ್ನು ಮಧ್ಯಪ್ರಾಚ್ಯದಲ್ಲಿರುವ ರಾಜಮನೆತನಗಳು ಬಳಸುತ್ತವೆ. ಈ ಫೋನ್ ಒಂದು ಕಾಲದಲ್ಲಿ ಅತ್ಯಂತ ದುಬಾರಿ ಫೋನ್ ಎಂಬ ಗಿನ್ನೆಸ್ ದಾಖಲೆ ಬರೆದಿತ್ತು.
/newsfirstlive-kannada/media/media_files/2025/09/07/iphone-5-black-diamond-edition-by-stuart-hughes-2025-09-07-10-20-11.jpg)
iPhone 5 Black Diamond Edition by Stuart Hughes
ಸ್ಟುವರ್ಟ್ ಹ್ಯೂಸ್ ಅವರ ಐಫೋನ್ 5 ಬ್ಲಾಕ್ ಡೈಮಂಡ್ ಆವೃತ್ತಿಯ ಬೆಲೆ 95 ಕೋಟಿ ರೂಪಾಯಿ. ಇಷ್ಟೊಂದು ದುಬಾರಿ ಆಗಲು ಕಾರಣ ಫೋನ್ನಲ್ಲಿರುವ 600 ಕಪ್ಪು ವಜ್ರಗಳು. ವಿಶೇಷ ಗಾಜಿನ ಪರದೆ ಮತ್ತು 24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಇದನ್ನು ಚೀನಾದ ಉದ್ಯಮಿಯೊಬ್ಬರು ಬಳಸುತ್ತಿದ್ದಾರೆ.
/newsfirstlive-kannada/media/media_files/2025/09/07/vertu-signature-cobra-2025-09-07-10-20-42.jpg)
Vertu Signature Cobra
ವರ್ಟು ಸಿಗ್ನೇಚರ್ ಕೋಬ್ರಾದ ಬೆಲೆ 2.3 ಕೋಟಿ ರೂಪಾಯಿ. ಇದನ್ನು ಹಾಲಿವುಡ್ ತಾರೆಯರು, ಉದ್ಯಮಿಗಳು ಬಳಸುತ್ತಾರೆ. ಸ್ವಿಸ್ ಕರಕುಶಲತೆಯನ್ನು ಆಭರಣ ವಿನ್ಯಾಸದೊಂದಿಗೆ ಸಂಯೋಜಿಸುವ ವರ್ಟು ಯಾವಾಗಲೂ ಐಷಾರಾಮಿ ಫೋನ್ಗಳ ಸಂಕೇತವಾಗಿದೆ.
/newsfirstlive-kannada/media/media_files/2025/09/07/caviar-iphone-14-pro-max-diamond-snowflake-edition-2025-09-07-10-21-06.jpg)
Caviar iPhone 14 Pro Max Diamond Snowflake Edition
ಕ್ಯಾವಿಯರ್ ಐಫೋನ್ 14 ಪ್ರೊ ಮ್ಯಾಕ್ಸ್ ಡೈಮಂಡ್ ಸ್ನೋಫ್ಲೇಕ್ ಆವೃತ್ತಿ.. ಈ ಫೋನ್ ಬೆಲೆ ರೂ.1.2 ಕೋಟಿ. ಇದನ್ನು ರಷ್ಯಾದ ಐಷಾರಾಮಿ ಬ್ರ್ಯಾಂಡ್ ಕ್ಯಾವಿಯರ್ ವಿನ್ಯಾಸಗೊಳಿಸಿದೆ. ಇದು 18K ಚಿನ್ನ, ವಜ್ರಗಳು ಮತ್ತು ಟೈಟಾನಿಯಂ ಒಳಗೊಂಡಿದೆ. ಇದನ್ನು ರಷ್ಯಾದ ಒಲಿಗಾರ್ಚ್ಗಳು ಬಳಸುತ್ತಾರೆ.