ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ.. ವಿಶ್ವದ ಅತ್ಯಂತ ತೆಳ್ಳಗಿನ ಫೋನ್ ರಿಲೀಸ್​ಗೆ ರೆಡಿ..!

author-image
Ganesh
Updated On
ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ.. ವಿಶ್ವದ ಅತ್ಯಂತ ತೆಳ್ಳಗಿನ ಫೋನ್ ರಿಲೀಸ್​ಗೆ ರೆಡಿ..!
Advertisment
  • Tecno Spark Slim ಫೋನ್ ಬಿಡುಗಡೆಗೆ ಸಿದ್ಧತೆ
  • ಸ್ಮಾರ್ಟ್‌ಫೋನ್ ಜಗತ್ತಿನ ದೊಡ್ಡ ಕಂಪನಿಗಳಿಗೆ ಟೆಕ್ನೋ ಸೆಡ್ಡು
  • ಮುಂದಿನ ವಾರ ಸ್ಪೇನ್​ನಲ್ಲಿ ಅನಾವರಣಗೊಳ್ಳಲಿದೆ ಈ ಫೋನ್

ಟೆಕ್ನೋ ಕಂಪನಿಯು (Tecno) ಸ್ಮಾರ್ಟ್‌ಫೋನ್ ಜಗತ್ತಿನ ದೊಡ್ಡ ಕಂಪನಿಗಳನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ತೆಳುವಾದ ಫೋನ್ (Thickness phone) ಅಭಿವೃದ್ಧಿಪಡಿಸಿದೆ. ಮುಂದಿನ ವಾರ ಸ್ಪೇನ್‌ನಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (WMC)-2025 ರಲ್ಲಿ ಈ ಫೋನ್ ಬಿಡುಗಡೆ ಆಗಲಿದೆ.

ಈ ಫೋನ್ ಟೆಕ್ನೋ ಸ್ಪಾರ್ಕ್ ಸ್ಲಿಮ್ (Tecno Spark Slim) ಹೆಸರಿನಲ್ಲಿ ಬಿಡುಗಡೆ ಆಗಲಿದೆ. ಕೇವಲ 5.75 ಮಿಲಿ ಮೀಟರ್ ದಪ್ಪವಿರುವ ಈ ಫೋನ್, ವಿಶ್ವದಲ್ಲೇ ಅತ್ಯಂತ ತೆಳುವಾದ ಫೋನ್ ಎಂದು ಟೆಕ್ ತಜ್ಞರು ಹೇಳುತ್ತಿದ್ದಾರೆ. ಕಂಪನಿಯು WMCನಲ್ಲಿ ಫೋನ್ ಪ್ರದರ್ಶಿಸುವುದಾಗಿ ಘೋಷಿಸಿದೆ. ಈ ಫೋನ್ 5200 mAh ಬ್ಯಾಟರಿ ಮತ್ತು 6.78-ಇಂಚಿನ ಡಿಸ್ಪ್ಲೇ ಹೊಂದಿದೆ. ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ, 13 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮರಾ ಹೊಂದಿದೆ.

ಇದನ್ನೂ ಓದಿ:ಆ್ಯಪಲ್​​ ಪ್ರಿಯರಿಗೆ ಗುಡ್​ನ್ಯೂಸ್​​; ಇಂದಿನಿಂದ ಐಫೋನ್ 16e ಮಾರಾಟ; ಬೆಲೆ ಎಷ್ಟು ಗೊತ್ತಾ?

publive-image

ಟೆಕ್ನೋ ಅಧಿಕೃತವಾಗಿ ಚಿಪ್‌ಸೆಟ್ ಬಗ್ಗೆ ಬಹಿರಂಗ ಮಾಡಿಲ್ಲ. ಈ ಫೋನ್ ಆಕ್ಟಾ-ಕೋರ್ CPU ಸಹ ಹೊಂದಿರುತ್ತದೆ ಎನ್ನಲಾಗಿದೆ. ಜೊತೆಗೆ 45-ವ್ಯಾಟ್ ವೇಗದ ಚಾರ್ಜಿಂಗ್ ವ್ಯವಸ್ಥೆ ಇದೆ. ವಿಶೇಷ ಅಂದ್ರೆ ಈ ಫೋನ್ ಸಂಪೂರ್ಣವಾಗಿ ಮರುಬಳಕೆ ಮಾಡಬಹುದು. ಅಲ್ಯೂಮಿನಿಯಂನಿಂದ ತಯಾರಿಸಲ್ಪಟ್ಟಿದೆ. ಫೋನ್ ಬೆಲೆ ಎಷ್ಟು ಅನ್ನೋದ್ರ ಬಗ್ಗೆ ಕಂಪನಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಾನ್ಸೆಪ್ಟ್ ಸ್ಮಾರ್ಟ್‌ಫೋನ್ ಎಂದು ಕಂಪನಿ ತುಂಬಾ ದಿನಗಳಿಂದ ಹೇಳಿಕೊಂಡು ಬಂದಿದೆ.

ವಿಶೇಷತೆಗಳು..

  • 6.78" 3D Curved AMOLED
  • 144Hz 4,500 nits peak
  •  50MP +50MP
  • 13MP selfie
  • 5200mAh battery/45W
  • 5.75mm thin 

ಇದನ್ನೂ ಓದಿ: ಬೇಸಿಗೆ ಕಾಲದಲ್ಲಿ ಮನೆಗೆ AC ಹಾಕಿಸಬೇಕಾ? ಹಾಗಾದ್ರೆ ಈ 5 ಬ್ರಾಂಡ್​ಗಳಲ್ಲಿ ನೋಡೋದು ಬೆಸ್ಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment