ಸಾವಿಗೂ ಮುನ್ನ ಪಿಜ್ಜಾ, ಕೂಲ್​ ಡ್ರಿಂಕ್ಸ್​ ತರಿಸಿಕೊಂಡಿದ್ದ ಪ್ರೀತಿ.. ಈ ಇಬ್ಬರ ಮಧ್ಯೆ ಆಗಿದ್ದೇನು?

author-image
Veena Gangani
Updated On
ಸಾವಿಗೂ ಮುನ್ನ ಪಿಜ್ಜಾ, ಕೂಲ್​ ಡ್ರಿಂಕ್ಸ್​ ತರಿಸಿಕೊಂಡಿದ್ದ ಪ್ರೀತಿ.. ಈ ಇಬ್ಬರ ಮಧ್ಯೆ ಆಗಿದ್ದೇನು?
Advertisment
  • ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವನು ಆಗಿದ್ದ ದೂರ
  • ಮದುವೆ ಬಗ್ಗೆ ಒತ್ತಾಯ ಮಾಡುತ್ತಿದ್ದಂತೆ ಆಗಿದ್ದೇನು?
  • ಮಗಳನ್ನು ಆತನೇ ಹತ್ಯೆ ಮಾಡಿದ್ದಾನೆ, ಪೋಷಕರ ಆರೋಪ!

ಅವರಿಬ್ಬರೂ ಸಂಬಂಧಿಗಳು. ಮದುವೆಯೊಂದರಲ್ಲಿ ಇಬ್ಬರಿಗೂ ಪರಿಚಯವಾಗಿ ಆ ಪರಿಚಯ ಗೆಳೆತನಕ್ಕೆ ತಿರುಗಿ ಬಳಿಕ ಪ್ರೇಮ ಪಕ್ಷಿಗಳಾಗಿ ಹಾರಾಡಿದ್ರು. ಆದ್ರೆ, ಲವ್​ಬರ್ಡ್ಸ್​ಗಳ ನಡುವೆ ವಿರಸ ಮೂಡಿ ದೂರ ಆಗಿದ್ದರು. ಇದೇ ಕೊರಗಲ್ಲಿ ಯುವತಿ ಪ್ರೀತಿ ನೀ ಇಲ್ಲದೆ ನಾ ಹೇಗೆರಲಿ ಅಂತ ನೊಂದು ದುರಂತ ಅಂತ್ಯ ಕಂಡಿದ್ದಾಳೆ.

ಇದನ್ನೂ ಓದಿ:ತಂಪೆರೆದ ಮಳೆ, ಭೂಮಿಗೆ ಬಂತು ಜೀವಕಳೆ.. ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಆಗ್ತಿದೆ..?

[caption id="attachment_38470" align="aligncenter" width="800"]ಪ್ರಾತಿನಿಧಿಕ ಚಿತ್ರ ಪ್ರಾತಿನಿಧಿಕ ಚಿತ್ರ[/caption]

ಪ್ರೀತಿ ಕುಶ್ವಾಹಗೆ ಇನ್ನೂ18 ವರ್ಷ. ಈಕೆ ದೆಹಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು. ಪ್ರೀತಿಸಿದವನ ಮನ ಕರಗದೇ ಈಕೆಯ ಉಸಿರೇ ನಿಂತಿದೆ. 2 ವರ್ಷಗಳ ಹಿಂದೆ ಪ್ರೀತಿ ಕುಶ್ವಾಹ ಕುಟುಂಬ ಹುಟ್ಟೂರಿಗೆ ತೆರಳಿತ್ತು. ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಇದೇ ಮದುವೆಯಲ್ಲಿ ಪ್ರೀತಿಗೆ ದೂರದ ಸಂಬಂಧಿ ರಿಂಕು ಪರಿಚಯವಾಗಿದ್ದ. ಬಳಿಕ ಇಬ್ಬರು ಫೋನ್ ನಂಬರ್ ಪಡೆದು ಮನಸ್ಸು ಎಕ್ಸ್​ಚೇಂಜ್​ ಮಾಡಿಕೊಂಡಿದ್ದರು.

ರಿಂಕು ಪ್ರೀತಿಯನ್ನು ಭೇಟಿಯಾಗಲು ದೆಹಲಿಗೆ ಬರುತ್ತಿದ್ದನಂತೆ. ಜೊತೆಯಾಗಿ ಸುತ್ತಾಡುತ್ತ, ಪ್ರವಾಸಕ್ಕೂ ತೆರಳಿದ್ದರು. ಅಷ್ಟೇ ಅಲ್ಲ, ಪ್ರೀತಿ ಗಾಢವಾಗಿ, ಇಬ್ಬರು ಸೀಕ್ರೆಟ್ ಆಗಿ ಮದುವೆಯಾಗಿದ್ದರು. ಆದ್ರೆ, ಇದು ಕುಟುಂಬಸ್ಥರಿಗೆ, ಮನೆಯವರಿಗೆ ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಯುವತಿ ಮನೆಯವರನ್ನ ಒಪ್ಪಿಸಿ ಮದುವೆಗೆ ಈಕೆ ತಯಾರಿ ಆರಂಭಿಸಿದ್ದಳು. ಇನ್ನು ಇದರ ನಡುವೆ ಪ್ರೀತಿಗೆ ರಿಂಕು ಪ್ರಶ್ನೆ ಕೇಳಿದ್ದ. ನೀನೂ ಬೇರೆ ಯಾರಾದರೂ ಇಷ್ಟ ಪಟ್ಟರೇ ಎಂದು ಮಾತುಕತೆಯಲ್ಲಿ ಕೇಳಿದ್ದ. ಪ್ರೀತಿ ಕುಶ್ವಾಹ ಪ್ರೀತಿ ಅಸಲಿಯಾಗಿತ್ತು. ಹೃದಯ ಮನಸ್ಸು, ಎಲ್ಲವೂ ಆತನೇ ಆಗಿದ್ದ. ಈಕೆಯ ಪ್ರೀತಿಯಲ್ಲಿ ಎಳ್ಳಷ್ಟು ಮೋಸ ಇರಲಿಲ್ಲ. ಹೀಗಾಗಿ ಪ್ರೀತಿಸಿದವನಿಗಾಗಿ ತನ್ನ ಕೂದಲನ್ನು ತೆಗೆಸಿದ್ದಳು. ಆದ್ರೆ ಅಸಲಿ ಕಾರಣವನ್ನ ಮನೆಯವರಿಂದ ಮುಚ್ಚಿಟ್ಟಿದ್ದಳು.

publive-image

ಮದುವೆ ಬಗ್ಗೆ ಈಕೆ ಒತ್ತಾಯ ಮಾಡುತ್ತಿದ್ದಂತೆ ರಿಂಕು ಅಸಲಿ ಸ್ವಭಾವ ಹೊರಬಂದಿತ್ತು. ಮದುವೆ ಮುಂದೂಡಲು ಆರಂಭಿಸಿದ್ದ. ಇದೇ ಕಾರಣದಿಂದ ಮನಸ್ತಾಪ ಆಗಿತ್ತು. ದಿಢೀರ್ ಈಕೆಯ ಫೋನ್ ಸ್ವೀಕರಿಸದೇ ದೂರವಿದ್ದ. ಮಾತು ಕೂಡ ಬಿಟ್ಟಿದ್ದ. ಬಳಿಕ ಆಕೆಯ ನಂಬರ್ ಬ್ಲಾಕ್ ಮಾಡಿದ್ದ. ಅದೇನೇ ಪ್ರಯತ್ನ ಮಾಡಿದರೂ ರಿಂಕು ಮನಸ್ಸು ಕರಗಲೇ ಇಲ್ಲ. ಇತ್ತ ಬೇರೆ ದಾರಿ ಕಾಣದ ಪ್ರೀತಿ ಇಹಲೋಹ ತ್ಯಜಿಸಿದ್ದಳು. ಈಕೆ ಆತ್ಮಹತ್ಯೆಗೂ ಮುನ್ನ ತಾಯಿಗೆ ಕರೆ ಮಾಡಿ ಮಾತನಾಡಿದ್ದಳು. ನಂತರ ಫೀಜಾ ಮತ್ತು ಕೂಲ್​ ಡ್ರಿಂಕ್ಸ್​ ತರಿಸಿಕೊಂಡಿದ್ದಳು. ಆದ್ರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವನು ದೂರ ಮಾಡಿದ ನೋವಿನಿಂದ ಬೇರೆ ದಾರಿ ಕಾಣದ ಪ್ರೀತಿ ಇಹಲೋಹ ತ್ಯಜಿಸಿದ್ದಾಳೆ.

ಇದೀಗ ಪ್ರೀತಿ ಸಾವಿನ ಬಳಿಕ ಆಕೆ ರಿಂಕು ಜೊತೆ ಚಾಟಿಂಗ್​ ಮಾಡಿರೋದು ಹಣೆಗೆ ಸಿಂಧೂರ ಹಿಡಿಸಿಕೊಳ್ಳುವ ಫೋಟೋಗಳನ್ನು ನೋಡಿ ಪೋಷಕರು ಶಾಕ್​ ಆಗಿದ್ದಾರೆ. ನಮ್ಮ ಮಗಳನ್ನು ಸಹೋದರ ಸಂಬಂಧಿಯೇ ಹತ್ಯೆ ಮಾಡಿದ್ದಾನೆ. 10 ದಿನಗಳು ಕಳೆದ್ರು ಪೊಲೀಸರು ಯಾವುದೇ ಕ್ರಮಕೈಗೊಳ್ಳದಿರುವುದು ನಿಜಕ್ಕೂ ಅಚ್ಚರಿ ಆಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment