/newsfirstlive-kannada/media/post_attachments/wp-content/uploads/2024/11/Ajmer-Fake-Investment.jpg)
ರಾಜಸ್ತಾನದ ಅಜ್ಮೆರ್​ನಲ್ಲಿ ಪೊಲೀಸರು 19 ವಯಸ್ಸಿನ ಒಬ್ಬ ಹುಡುಗನನ್ನು ಬಂಧಿಸಿದ್ದಾರೆ. ಈಗಷ್ಟೇ ಕಾಲೇಜು ಮೆಟ್ಟಿಲು ಏರಿದ ಹುಡುಗ ನಕಲಿ ಹೂಡಿಕೆ ಸ್ಕೀಮ್​​ನಲ್ಲಿ ಸುಮಾರು 200 ಜನರಿಗೆ ಯಾಮಾರಿಸಿ ಒಟ್ಟು 42 ಲಕ್ಷ ರೂಪಾಯಿ ಬಾಚಿಕೊಂಡಿದ್ದಾನೆ. ಸದ್ಯ ಪೊಲೀಸರು ಈತನನ್ನು ಹಿಡಿದು ಕಂಬಿಯ ಹಿಂದೆ ತಳ್ಳಿದ್ದಾರೆ.
ಇದನ್ನೂ ಓದಿ:ಯೂಟ್ಯೂಬ್ ನೋಡಿದರು, ಮನೆಯಲ್ಲೇ ಕೆಲಸ ಶುರುಮಾಡಿದರು.. ಆಮೇಲೆ ನಡೆದಿದ್ದೇ ಬೇರೆ..!
ಆರೋಪಿಯನ್ನು ಖಷೀಫ್ ಮಿರ್ಜಾ ಎಂದು ಗುರುತಿಸಲಾಗಿದೆ. ಈಗಷ್ಟೇ 11ನೇ ತರಗತಿ ಓದುತ್ತಿರುವ ಹುಡುಗ ಸೋಷಿಯಲ್ ಮೀಡಿಯಾದಲ್ಲಿ ನೀವು ಹಣ ಹೂಡಿದರೆ ಹೆಚ್ಚು ಲಾಭ ಮಾಡುತ್ತಿರಿ ಎಂದು ಜನರನ್ನು ನಂಬಿಸಿ ಹಣ ಪೀಕಿದ್ದಾನೆ. ಪೊಲೀಸರು ಹೇಳುವ ಪ್ರಕಾರ ಮಿರ್ಜಾ ಒಬ್ಬ ಸೋಷಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್ ಸಾಕಷ್ಟು ಫಾಲೋವರ್ಸ್​ಗಳನ್ನು ಹೊಂದಿದ್ದಾನೆ. ಹೀಗಾಗಿ ಜನರನ್ನು ಸರಳವಾಗಿ ಮರಳು ಮಾಡಿದ್ದೇನಂತೆ
ಇದನ್ನೂ ಓದಿ:ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಯುಪಿಯಲ್ಲಿ ಬಂಧನ.. ಸೆರೆಗೆ ಬಿದ್ದಿದ್ದು ಹೇಗೆ ಕಿರಾತಕ?
ಅವನು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ 1 ಲಕ್ಷ 39 ಸಾವಿರ 99 ರೂಪಾಯಿ ಹೂಡಿಕೆ ಮಾಡಿದ್ರೆ, 13 ವಾರಗಳಲ್ಲಿ ಅದು 99 ಲಕ್ಷ 99 ಸಾವಿರ ಆಗಲಿದೆ ಎಂದು ಹೇಳಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದನಂತೆ. ಆರಂಭದಲ್ಲಿ ಕೆಲವರಿಗೆ ಲಾಭ ನೀಡಿದಂತೆ ಮಾಡಿದ ಮಿರ್ಜಾ ಹೆಚ್ಚು ಹೆಚ್ಚು ಜನರನ್ನು ತನ್ನತ್ತ ಬರುವಂತೆ ಮಾಡಿಕೊಂಡಿದ್ದಾನೆ. ಕೊನೆಗೆ 200 ಜನರಿಂದ ಹಣ ವಸೂಲಿ ಮಾಡಿದ ಈತ ಎಸ್ಕೇಪ್ ಆಗಿದ್ದ. ಸದ್ಯ ಅಜ್ಮೆರ್ ಪೊಲೀಸರು ಈತನ ಹೆಡೆಮುರಿ ಕಟ್ಟಿದ್ದು, ಆರೋಪಿಯಿಂದ ಕ್ಯಾಶ್ ಕೌಂಟಿಂಗ್ ಮಷಿನ್, ಮೊಬೈಲ್​ಗಳು ಹಾಗೂ ಲ್ಯಾಪ್​ಟಾಪ್​ ಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us