ತಾಯಿಯ 1.60 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮಾರಿದ ಮಗಳು; ಜಸ್ಟ್ 680 ರೂ.ಆ ವಸ್ತು ಖರೀದಿಗಾಗಿ!

author-image
Gopal Kulkarni
Updated On
ತಾಯಿಯ 1.60 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮಾರಿದ ಮಗಳು; ಜಸ್ಟ್ 680 ರೂ.ಆ ವಸ್ತು ಖರೀದಿಗಾಗಿ!
Advertisment
  • ಆ ಒಂದು ವಸ್ತುವಿಗಾಗಿ ತಾಯಿಯ ಕೋಟ್ಯಾಂತರ ಚಿನ್ನಾಭರಣವೇ ಗಾಯಬ್
  • ತಾನು ಇಷ್ಟಪಟ್ಟ 680 ರೂಪಾಯಿ ಆ ವಸ್ತುವಿಗಾಗಿ ಚಿನ್ನಾಭರಣ ಕದ್ದ ಮಗಳು!
  • ಪೊಲೀಸರ ತನಿಖೆಯಲ್ಲಿ ಕೊನೆಗೂ ಹೇಗೆ ಸಿಕ್ಕಿಕೊಂಡಳು ಗೊತ್ತಾ ಚಾಲಾಕಿ ಪುತ್ರಿ?

ಹೆಣ್ಣು ಮಕ್ಕಳಿಗೆ ಹೊಸ ಟ್ರೆಂಡ್​ನಲ್ಲಿ ಏನೇ ಬಂದರು ಅದನ್ನು ಟ್ರೈ ಮಾಡುವ ಹುಚ್ಚು ಜಾಸ್ತಿ. ಅದು ಹೇರ್​ಸ್ಟೈಲ್ ಇರಬಹುದು, ಲಿಪ್ಸ್​ಟಿಕ್ ಇರಬಹುದು, ಇಯರ್ ರಿಂಗ್ಸ್ ಇರಬಹುದು. ಸೀರೆ, ಸ್ಕರ್ಟ್​ ಏನೇ ಆಗಿರಬಹುದು. ಅದನ್ನು ಟ್ರೈ ಮಾಡುವ ಆಸೆ ಇದ್ದೇ ಇರುತ್ತೆ. ಆದ್ರೆ ಆಸೆ ಅತಿರೇಕಕ್ಕೆ ಹೋದಾಗ ಏನಾಗುತ್ತೆ ಎನ್ನುವುದಕ್ಕೆ ಶಾಂಘೈನ ಈ ಒಂದು ಹುಡುಗಿ ಉದಾಹರಣೆಯಾಗಿದ್ದಾಳೆ.

ಚೀನಾದ ಶಾಂಘೈನಲ್ಲಿರುವ ಹದಿಹರೆಯದ ಹುಡುಗಿಗೆ ಲಿಪ್ಸ್​ ಸ್ಟಬ್ ಹಾಕಿಕೊಳ್ಳಬೇಕು ಎಂಬ ಹುಚ್ಚು ಹಿಡಿದಿದೆ. ಅದರ ಬೆಲೆ ಅಬ್ಬಬ್ಬಾ ಅಂದ್ರೆ 680 ರಿಂದ 700 ರೂಪಾಯಿ. ಆದ್ರೆ ಅಮ್ಮ ದುಡ್ಡು ಕೊಡಲು ನಿರಾಕರಿಸಿದಾಗ ಈ ಹುಚ್ಚು ಹುಡುಗಿ ತನ್ನ ತಾಯಿಯ ಚಿನ್ನಾಭರಣವನ್ನೇ ಮಾರಿದ್ದಾಳೆ. ಅದು ಕೂಡ ಲಕ್ಷ, ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಲ್ಲ ಬರೋಬ್ಬರಿ 1.16 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮಾರಿ ತಾನು ಲಿಪ್ಸ್​ ಸ್ಟಬ್ ಖರೀದಿ ಮಾಡಿದ್ದಾಳೆ.

ಮನೆಯಲ್ಲಿದ್ದ ಚಿನ್ನಾಭರಣ ಏಕಾಏಕಿ ಕಾಣೆಯಾದಾಗ ಗಾಬರಿಯಾದ ವಾಂಗ್ ಎಂಬ ಸರ್​​ ನೇಮ್​ನ ಆ ಹುಡುಗಿಯ ತಾಯಿ, ವಾನ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೊನೆಗೆ ತನ್ನ ಮಗಳು ಲೀ ಈ ದುಬಾರಿ ಚಿನ್ನಾಭರಣಗಳನ್ನ ನಕಲಿ ಚಿನ್ನಾಭರಣ ಎಂದು ತಪ್ಪು ತಿಳಿದುಕೊಂಡು ಮಾರಿರುವ ವಿಚಾರ ಬೆಳಕಿಗೆ ಬಂದಿದೆ. ಒಂದು ಬ್ರಾಸ್ಲೇಟ್​, ನೆಕ್​ಲೇಸ್​ ಮತ್ತು ಒಂದು ರತ್ನದ ಹರಳನ್ನು ಮಗಳು ಮಾರಿದ್ದಾಳೆ.

ಇದನ್ನೂ ಓದಿ:ಚೀನಾದ ಈ ಮಾರುಕಟ್ಟೆಗೆ ದೊಡ್ಡ ಪೆಟ್ಟುಕೊಟ್ಟ ಭಾರತ.. ಡ್ರ್ಯಾಗನ್ ಲೆಕ್ಕಾಚಾರ ತಲೆಕೆಳಗೆ ಆಗಿದ್ದು ಹೇಗೆ?

ದೂರು ನೀಡಿದ ಬಳಿಕ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಹಲವು ಸಿಸಿಟಿವಿ ಫೂಟೇಜ್​ಗಳನ್ನ ಜಾಲಾಡಿದ್ದಾರೆ. ಮಾರ್ಕೆಟ್​ ಮ್ಯಾನೆಜ್​ಮೆಂಟ್​ಗಳನ್ನು ಸರಿಯಾಗಿ ವಿಚಾರಣೆ ನಡೆಸಿದಾಗ ಒಂದು ರಿಸೈಕ್ಲಿಂಗ್ ಶಾಪ್​ನಲ್ಲಿ ಮಾರಲಾದ ಎಲ್ಲಾ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಆ ದಿನ ಅಂಗಡಿಯ ಮಾಲೀಕ ಆಚೆ ಹೋಗಿದ್ದರಿಂದ ಅವನನ್ನು ಫೋನ್ ಮಾಡಿ ಠಾಣೆಗೆ ಕರೆಸಿಕೊಂಡಿದ್ದಾರೆ. ಅವನು ಬಂದು ಇದ್ದ ಸಂಗತಿಯ್ನು ಬಿಚ್ಚಿಟ್ಟಿದ್ದಾನೆ.

ಇದನ್ನೂ ಓದಿ: ಹೋಟೆಲ್ ಬುಕ್ ಮಾಡುವಾಗ ಆದ ಸಣ್ಣ ತಪ್ಪು.. 93 ಸಾವಿರ ಹಣ ಕಳ್ಕೊಂಡ ಯೂಟ್ಯೂಬರ್! ಆಗಿದ್ದೇನು?

ಸದ್ಯ 680 ರೂಪಾಯಿಯ ಒಂದು ಲಿಪ್ಸ್​ ಸ್ಟಬ್​​ಗೆ ತಾಯಿಯ ಕೋಟ್ಯಾಂತರ ರೂಪಾಯಿ ಚಿನ್ನಾಭರಣ ಮಾರಿದ ವಿಚಾರ ಪೊಲೀಸರಿಂದ ಮೀಡಿಯಾಗಳಿಗೆ ತಿಳಿದಿದ್ದು. ಅದು ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ಸದ್ದು ಮಾಡಿದೆ. ಇನ್ನು ಜ್ಯುವೆಲರಿ ಮಾರಿದ ಹುಡುಗಿಯ ತಾಯಿ ಕೆಲವು ದಿನಗಳ ಹಿಂದೆ ಮಗಳು ಲಿಪ್ಸ್​ ಸ್ಟಬ್ ಖರೀದಿಸಬೇಕು ದುಡ್ಡು ಕೊಡು ಎಂದು ಕೇಳಿದ್ದಳು. ಅಷ್ಟೊಂದು ದುಡ್ಡು ತೆಗೆದುಕೊಂಡು ಏನು ಮಾಡ್ತೀಯಾ ನಾನು ಕೊಡುವುದಿಲ್ಲ ಎಂದು ಹೇಳಿದ್ದೆ ಎಂದು ವಾಂಗ್ ಪೊಲೀಸರ ಎದುರು ಹೇಳಿದಾಗ, ಪೊಲೀಸರಿಗೆ ಮಗಳ ಮೇಲೆ ಡೌಟ್ ಬಂದು ತನಿಖೆ ಮಾಡಿ ಈ ಒಂದು ಕಳುವಾದ ಚಿನ್ನಾಭರಣಗಳನ್ನು ಪತ್ತೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment