newsfirstkannada.com

×

ಹದಿ ಹರೆಯದಲ್ಲಾಗುವ ಮಾನಸಿಕ ಆಘಾತ; ಇದು ಟೀನೇಜ್​ನ ಮತ್ತೊಂದು ಮುಖದ ಅನಾವರಣ

Share :

Published October 23, 2024 at 6:19pm

Update October 23, 2024 at 6:25pm

    ಹದಿ ಹರೆಯದಲ್ಲಾಗುವ ಮಾನಸಿಕ ಆಘಾತಗಳು ಬೀರುವ ಪರಿಣಾಮವೇನು?

    ಟೀನೇಜ್​ನಲ್ಲಿ ಆಗುವ ಮಾನಸಿಕ ಆಘಾತಗಳಿಗೆ ಎಷ್ಟು ರೂಪಗಳಿವೆ ಗೊತ್ತಾ?

    ಒಂದು ಬಾರಿ ಈ ಕೂಪದಲ್ಲಿ ಬಿದ್ದರೆ ಆಚೆ ಬರಲು ಇರುವ ಮಾರ್ಗಗಳೇನು?

ಹದಿ ಹರೆಯ, ಮನಸ್ಸು ಹಾಗೂ ದೇಹ ಎರಡು ಪೂರ್ತಿಯಾಗಿ ಮಾಗದ, ಪೂರ್ತಿಯಾಗಿ ಕಾಯಿಯೂ ಅಲ್ಲದಂತಹ ಮಧ್ಯಂತರದ ಬದುಕು. ಇದೊಂದು ರಂಗು ರಂಗಿನ ದುನಿಯಾ. ನೂರಾರು ಆಕರ್ಷಣೆಗಳ ಆಗರ ನಮ್ಮ ಕಣ್ಮುಂದೆಯೇ ಇರುತ್ತವೆ. ಆದ್ರೆ ಈ ಸಮಯದಲ್ಲಿ ಅಗತ್ಯವಾದ ಒಂದು ಜಾಗೃತಿ ಯುವ ಸಮುದಾಯಕ್ಕೆ ಬೇಕಾಗಿದೆ. ಈ ಹದಿ ಹರೆಯದ ವಯಸ್ಸಿನ ಹುಡುಗರು ಒಳ್ಳೆಯ ಮತ್ತು ಕೆಟ್ಟ ಎರಡು ಅನುಭವಗಳನ್ನು ಈ ಸಮಯದಲ್ಲಿ ಅನುಭವಿಸುತ್ತಾರೆ. ಆದ್ರೆ ಅವರ ಮನಸಿನ ಮೇಲೆ ಬೀಳುವ ಕೆಲವೊಂದು ಆಘಾತಗಳು ಅವರನ್ನು ಅಕ್ಷರಶಃ ತಿಂದು ಹಾಕುತ್ತವೆ. ಮತ್ತೆಂದೂ ನಾನು ಮೇಲೇಳಲಾರೆ ಅನ್ನುವ ಮಟ್ಟಿಗೆ ಅವರು ಕುಸಿದು ಬೀಳುವಂತೆ ಮಾಡುತ್ತವೆ.
ಕೆಲವು ಮಾನಸಿಕ ಆಘಾತಗಳು ಹದಿ ಹರೆಯದ ಹುಡುಗ ಹುಡುಗಿಯರನ್ನು ಭದ್ರತೆಯ ಪ್ರಜ್ಞೆಯನ್ನೇ ಕಿತ್ತುಕೊಂಡು ಬಿಡುತ್ತದೆ. ವೈಯಕ್ತಿಕವಾಗಿ ಇದು ದೀರ್ಘಕಾಲದವರೆಗೆ ಮನಸಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಮಾನಸಿಕ ಆಘಾತಕ್ಕೆ ಆ ವಯಸ್ಸಿನಲ್ಲಿ ಒಳಗಾಗಿರುತ್ತಾರೆ. ಕೆಲವರು ಬೇಗನೆ ಆಚೆ ಬಂದ್ರೆ. ಇನ್ನೂ ಕೆಲವರು ಅದರಿಂದ ಸುಧಾರಿಸಿಕೊಳ್ಳಲಾಗದೆ ದೀರ್ಘಕಾಲದವರೆಗೂ ಒದ್ದಾಡುತ್ತಾರೆ.

ಇದನ್ನೂ ಓದಿ: ಕಣ್ಣುಗಳ ರಕ್ಷಣೆ ಹೇಗೆ; ನಾವು ಏನು ಮಾಡಬೇಕು, ಏನು ಮಾಡಬಾರದು?.. ಇಲ್ಲಿವೆ ಟಾಪ್ ಟಿಪ್ಸ್​!

ಹದಿ ಹರೆಯದಲ್ಲಿ ಹಲವು ರೀತಿಯ ಮಾನಸಿಕ ಆಘಾತಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಭಾವನಾತ್ಮಕವಾಗಿ, ದೈಹಿಕವಾಗಿ ಹಾಗೂ ಲೈಂಗಿಕತೆಗೆ ಸಂಬಂಧಪಟ್ಟಿರುವ ಆಘಾತಗಳು ಕೂಡ ದೀರ್ಘಕಾಲದವರೆಗೂ ಕಾಡುವ ಸಾಧ್ಯತೆ ಇರುತ್ತದೆ.

ದೌರ್ಜನ್ಯ; ಹದಿ ಹರೆಯದ ವೇಳೆ ಯಾರಿಂದಾದರು ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ದೌರ್ಜನ್ಯಗಳು ನಡೆಯುವುದರಿಂದಲೂ ಮಾನಸಿಕ ಆಘಾತ ಉಂಟಾಗುತ್ತದೆ. ಇದು ಬಹಳ ಸಮಯದವರೆಗೆ ಮನಸ್ಸಿನಲ್ಲಿ ಆಳವಾಗಿ ಬೇರೂರಿ ಬಿಡುವ ಸಾಧ್ಯತೆಯೂ ಇದೆ

ಭಯಪಡಿಸುವಿಕೆ: ಶಾಲೆಯಲ್ಲಿ ಯಾರಿಂದಾದರು ಬೆದರಿಕೆ. ಯಾವುದಾದ್ರೂ ಗೆಳೆಯ ಗೆಳತಿಯರಿಂದ ಪೀಡನೆ, ಬೆದರಿಕೆ, ಮೇಷ್ಟ್ರುಗಳ ಕಟ್ಟು ನಿಟ್ಟಿನ ಭಯ ಹೀಗೆ ಹಲವು ಭಯಗಳು ಹದಿ ಹರೆಯದಲ್ಲಿ ಒಂದು ಬಾರಿ ಮೂಡಿದರೆ ಅದು ಮಾನಸಿಕವಾಗಿ ಹುಡುಗ ಹುಡುಗಿಯರನ್ನು ಘಾಸಿಗೊಳಿಸುತ್ತದೆ.

ಪ್ರೀತಿಸುವವರನ್ನು ಕಳೆದುಕೊಳ್ಳುವುದು; ಹದಿ ಹರೆಯ ಅಂದ್ರೆನೇ ಬದುಕಿನ ರಮ್ಯ ಚೈತ್ರ ಕಾಲ. ಇದೇ ಸಮಯದಲ್ಲಿಯೇ ಒಂದು ಹೆಣ್ಣು ಗಂಡಿಗೆ, ಗಂಡು ಹೆಣ್ಣಿಗೆ ಆಕರ್ಷಣೆಗೆ ಒಳಗಾಗುವ ಪ್ರಕ್ರಿಯೆಗಳು ಶುರುವಾಗುವುದು. ಈ ಸಮಯದಲ್ಲಿ ನಮ್ಮನ್ನು ಪ್ರೀತಿಸುವವರು ಕಳೆದುಕೊಳ್ಳುವುರಿಂದ ಅವರು ದೂರ ಆಗುವುದರಿಂದ ಇಲ್ಲ ಮನೆಯಲ್ಲಿ ತುಂಬಾ ಹಚ್ಚಿಕೊಂಡವರು ಸಡನ್ ಆಗಿ ತೀರಿಕೊಂಡು ಬಿಟ್ಟರೆ ಇವೆಲ್ಲವೂ ಮಾನಸಿಕ ಆಘಾತವನ್ನುಂಟು ಮಾಡುತ್ತವೆ. ಇನ್ನೂ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಬೇಗನೆ ಆಚೆ ಬರಬೇಕು. ಇಲ್ಲವಾದರೆ ಅದು ನಿಮ್ಮ ಮಾನಸಿಕ ಹಾಗೂ ದೈಹಿಕ ನೆಮ್ಮದಿಯನ್ನೇ ಇಲ್ಲವಾಗಿಸಿಬಿಡುತ್ತದೆ.

ಇದನ್ನೂ ಓದಿ:ಆಫೀಸ್​​ನಲ್ಲಿ ಗಂಟೆಗಟ್ಟಲೇ ಕೂತು ಕೆಲಸ ಮಾಡ್ತಿದ್ದೀರಾ? ಡೇಂಜರ್ ಕಾಯಿಲೆ ಬರುತ್ತೆ ಹುಷಾರ್​..!

ಈ ರೀತಿಯ ಸಮಸ್ಯೆಗಳಿಗೆ ಅನೇಕ ಪರಿಹಾರಗಳು ಇವೆ. ಅದರಲ್ಲಿ ಮೊದಲು ಸ್ವಯಂ ಜಾಗೃತಿಯೊಂದು ನಮ್ಮಲ್ಲಿ ಮೂಡಬೇಕು, ನನ್ನಲ್ಲಿ ಒಂದು ಮಾನಸಿಕ ಆಘಾತವಾದ ಬಗ್ಗೆ ಮೊದಲು ನಾವು ಅರಿಯಬೇಕು. ಅದರಿಂದ ಆಚೆ ಬರಲು ಏನೇನು ಮಾಡಬೇಕು ಎಂಬುದನ್ನು ತಿಳಿಯಬೇಕು. ಇದರ ಜೊತೆಗೆ ಸಂಬಂಧಿಕರು, ಗೆಳೆಯ ಗೆಳತಿಯರು, ನಮ್ಮ ಹಿತಚಿಂತಕರೊಂದಿಗೆ ನಾವು ನಮ್ಮ ಬದುಕಿನಲ್ಲಾದ ಆಘಾತದ ಬಗ್ಗೆ ಚರ್ಚಿಸಬೇಕು. ಇದರಿಂದ ಆಚೆ ಬರಲು ಪರಿಹಾರವಿದೆಯೇ ಕೇಳಬೇಕು.

ಅಗತ್ಯಬಿದ್ದಲ್ಲಿ ಒಂದು ಕೌನ್ಸಿಲಿಂಗ್​ಗೆ ಮೊರೆ ಹೋದರೂ ದೊಡ್ಡ ಅಪರಾಧವೇನಲ್ಲ. ಅದರ ಜೊತೆಗೆ ನಿತ್ಯ ನೀವು ಬದುಕುವ ಕ್ರಮವನ್ನು ಬದಲಿಸಿಕೊಳ್ಳಬೇಕು. ಬೆಳಗ್ಗೆ ಇಲ್ಲವೇ ಸಂಜೆ ಒಂದು ವಾಕಿಂಗ್, ಧ್ಯಾನ, ಪ್ರಾಣಾಯಾಮದಂತಹ ರೂಢಿಗಳನ್ನು ಬೆಳೆಸಿಕೊಂಡರೆ ಉಲ್ಲಸಿತ ಮನಸ್ಸು ನಿಮ್ಮದಾಗುವುದರ ಜೊತೆಗೆ ಸಮಸ್ಯೆಗಳು ಪರಿಹಾರವಾಗುತ್ತವೆ. ನಿಮ್ಮನ್ನು ನೀವು ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದಲೂ ಕೂಡ ಈ ಸಮಸ್ಯೆಯಿಂದ ದೂರಾಗಬಹುದು. ಓದು, ತಿರುಗಾಟ, ಪ್ರವಾಸ ಆಗಾಗ ಮಾಡುವುದರಿಂದ ಮನಸ್ಸು ಹಗುರವಾಗುತ್ತದೆ. ಹಳೆಯ ಚಿಂತೆಗಳನ್ನು ದೂರ ಮಾಡುತ್ತದೆ. ಇವು ಮಾತ್ರವಲ್ಲದೇ ನಿಮ್ಮ ಸ್ವಯಂ ಕಾಳಜಿಗೆ ನೀವು ಹೆಚ್ಚು ಸಮಯ ಕೊಡಬೇಕು. ಮನಸ್ಸಿನಲ್ಲಿ ಬರುವ ಋಣಾತ್ಮಕ ಚಿಂತನೆಗಳನ್ನು ಗುರುತಿಸಿಕೊಳ್ಳಬೇಕು. ಅವುಗಳಿಂದ ಹೊರೆಗೆ ಬರುವ ಮಾರ್ಗಗಳನ್ನು ಅನುಸರಿಸಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹದಿ ಹರೆಯದಲ್ಲಾಗುವ ಮಾನಸಿಕ ಆಘಾತ; ಇದು ಟೀನೇಜ್​ನ ಮತ್ತೊಂದು ಮುಖದ ಅನಾವರಣ

https://newsfirstlive.com/wp-content/uploads/2024/10/Teenager-Trauma.jpg

Load More