newsfirstkannada.com

‘ಶ್ರೀರಾಮ ನನ್ನ ಕನಸಿನಲ್ಲಿ ಬಂದು ಏನು ಹೇಳಿದ ಅಂದರೆ..’ ಭಾರೀ ಚರ್ಚೆ ಆಗ್ತಿದೆ ತೇಜ್ ಪ್ರತಾಪ್​​ರ ಈ ಸ್ವಪ್ನ..!

Share :

Published January 15, 2024 at 10:09am

    ಜ. 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ

    ಚುನಾವಣೆ ಮುಗಿದ ಬಳಿಕ ರಾಮನನ್ನು ಮರೆತು ಬಿಡುತ್ತಾರೆ

    4 ಶಂಕರಾಚಾರ್ಯರ ಕನಸಿನಲ್ಲಿ ಶ್ರೀರಾಮ ಬಂದಿದ್ದ ಎಂದ ಸಚಿವ

ರಾಷ್ಟ್ರೀಯ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ, ನಿತೀಶ್ ಕುಮಾರ್ ಸರ್ಕಾರದ ಸಚಿವ ತೇಜ್ ಪ್ರತಾಪ್ ಯಾದವ್ ಮತ್ತೆ ತಮ್ಮ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ಶ್ರೀರಾಮನು ಜನವರಿ 22 ರಂದು ಅಯೋಧ್ಯೆಗೆ ಬರುವುದಿಲ್ಲ ಎಂದಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇದೇ ವಿಚಾರಕ್ಕೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು.. ಚುನಾವಣೆ ಮುಗಿದ ಮೇಲೆ ರಾಮನನ್ನು ಮರೆತು ಬಿಡುತ್ತಾರೆ.. ಶ್ರೀರಾಮ ಜನವರಿ 22 ರಂದು ಬರುವುದು ಅಗತ್ಯವೇ? ಆ ದಿನ ರಾಮ ಬರುವುದಿಲ್ಲ. ನಮಗೆ ಕನಸುಗಳ ರೂಪದಲ್ಲಿ ಬಂದಿದ್ದ. ರಾಮ ನಾಲ್ಕು ಶಂಕರಾಚಾರ್ಯರ ಕನಸಿನಲ್ಲಿ ಬಂದಿದ್ದಾನೆ. ರಾಜ್ ಜೀ ನನ್ನ ಕನಸಿನಲ್ಲಿಯೂ ಬಂದಿದ್ದ. ಬೂಟಾಟಿಕೆ ಇರೋದ್ರಿಂದ ನಾನು ಆ ದಿನ ಬರುವುದಿಲ್ಲ ಎಂದು ಹೇಳಿದ್ದಾನೆ ಅಂತಾ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.

ಬಿಜೆಪಿ ಅವರು ಧರ್ಮವನ್ನು ಒಡೆಯುತ್ತಿದ್ದಾರೆ. ಭಾರತ ಮಾತೆಗೆ ನಾಲ್ಕು ಗಂಡು ಮಕ್ಕಳಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್. ನಾವೆಲ್ಲರೂ ಸಹೋದರರು. ಈಗ ಈ ಜನರು (ಬಿಜೆಪಿ) ಸಹೋದರರ ನಡುವೆ ಜಗಳ ಆಡುತ್ತಿದ್ದಾರೆ, ಭಾರತ ಮಾತೆ ತನ್ನ ಸಂತೋಷದ ಜೀವನವನ್ನು ನಡೆಸುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಶ್ರೀರಾಮ ನನ್ನ ಕನಸಿನಲ್ಲಿ ಬಂದು ಏನು ಹೇಳಿದ ಅಂದರೆ..’ ಭಾರೀ ಚರ್ಚೆ ಆಗ್ತಿದೆ ತೇಜ್ ಪ್ರತಾಪ್​​ರ ಈ ಸ್ವಪ್ನ..!

https://newsfirstlive.com/wp-content/uploads/2024/01/TEJ-PRATAP.jpg

Load More