/newsfirstlive-kannada/media/post_attachments/wp-content/uploads/2025/05/Lalu-Prasad-Yadav-Son-1.jpg)
ಹಿರಿಯ ಮಗನಿಗೆ ಗೇಟ್ ಪಾಸ್ ಕೊಟ್ಟ ಲಾಲು ಪ್ರಸಾದ್ ಯಾದವ್ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತೇಜ್ ಪ್ರತಾಪ್ ಯಾದವ್ ಅವರನ್ನು RJD ಪಕ್ಷ ಹಾಗೂ ಮನೆಯಿಂದ ಹೊರ ಹಾಕಿದ್ದ ಲಾಲು ಕುಟುಂಬಕ್ಕೆ ಹೊಸ ವರಸುದಾರನ ಎಂಟ್ರಿ ಖುಷಿ ತಂದಿದೆ.
ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ರಾಷ್ಟ್ರೀಯ ಜನತಾ ದಳ ಸಖತ್ ಸುದ್ದಿಯಲ್ಲಿದೆ. ಲಾಲು ಕುಟುಂಬದ ಈ ಹಗ್ಗ-ಜಗ್ಗಾಟದ ಮಧ್ಯೆ RJD ನಾಯಕ ತೇಜಸ್ವಿ ಯಾದವ್ ಅವರು ಸಿಹಿ ಸುದ್ದಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/Tej-pratap-Yadav-1.jpg)
ತೇಜಸ್ವಿ ಯಾದವ್ ಅವರ ಪತ್ನಿ ರಾಜ್‌ಶ್ರೀ ಇಂದು ಬೆಳಗ್ಗೆ ತನ್ನ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ತಂದೆಯಾದ ತೇಜಸ್ವಿ ಯಾದವ್ ಅವರು ಖುಷಿಯಾಗಿದ್ದು, ಸಂತಸದ ಸುದ್ದಿ, ಮಗುವಿನ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುಟಾಣಿ ಕಂದನ ಫೋಟೋ ಶೇರ್ ಮಾಡಿರುವ ತೇಜಸ್ವಿ ಯಾದವ್ ಅವರು ನಮ್ಮಲ್ಲೆರ ಕಾಯುವಿಕೆ ಅಂತ್ಯವಾಗಿದೆ. ನಾನು ಗಂಡು ಮಗುವಿಗೆ ತಂದೆಯಾಗಿದ್ದೇನೆ. ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/Tejaswi-Yadav-son.jpg)
ಇನ್ನೂ ವಿಶೇಷ ಏನಂದ್ರೆ, ಕಳೆದ 9 ತಿಂಗಳಿಂದ ತೇಜಸ್ವಿ ಯಾದವ್ ಅವರ ಪತ್ನಿ ರಾಜ್‌ಶ್ರೀ ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ರಾಜ್‌ಶ್ರೀ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ತಿಳಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ತಾಯಿ-ಮಗುವಿನ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: 12 ವರ್ಷದ ಲಾಲು ಮಗನ ಲವ್ವಿಡವ್ವಿ ಬಯಲಾಗಿದ್ಹೇಗೆ? ಯಾರು ಈ ಅನುಷ್ಕಾ? ಕಂಪ್ಲೀಟ್ ಮಾಹಿತಿ ಇಲ್ಲಿದೆ!
ತೇಜಸ್ವಿ ಯಾದವ್ ಮತ್ತು ರಾಜ್‌ಶ್ರೀ ಯಾದವ್ ಡಿಸೆಂಬರ್ 2021ರಲ್ಲಿ ಮದುವೆಯಾಗಿದ್ದರು. ಮಾರ್ಚ್ 2023ರಲ್ಲಿ ಈ ದಂಪತಿ ಕಾತ್ಯಾಯನಿ ಅನ್ನೋ ಹೆಣ್ಣು ಮಗುವಿನ ತಂದೆ-ತಾಯಿ ಆಗಿದ್ದರು. ಇದೀಗ ತೇಜಸ್ವಿ ಯಾದವ್ ಅವರು ಗಂಡು ಮಗುವಿನ ಅಪ್ಪ ಆಗಿದ್ದು ಆರ್‌ಜೆಡಿ ನಾಯಕರ ಖುಷಿ ಹೆಚ್ಚಿಸಿದೆ. ಕೆಲವು ಟ್ರೋಲ್‌ನವರಂತೂ ತೇಜು ಔಟ್, ಚೋಟು ಇನ್. ಲಾಲು ಕುಟುಂಬದ ಸಂಖ್ಯಾಬಲ ಮತ್ತೆ ಸರಿ ಹೋಯ್ತು ಎಂದು ವ್ಯಂಗ್ಯವಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us