ತೇಜಸ್ವಿ ಸೂರ್ಯ-ಶಿವಶ್ರೀ ಅದ್ಧೂರಿ ರಿಸೆಪ್ಶನ್; ಯಾರೆಲ್ಲಾ ಭಾಗಿ.. ಫೋಟೋಸ್​ ಇಲ್ಲಿವೆ!

author-image
Veena Gangani
Updated On
ತೇಜಸ್ವಿ ಸೂರ್ಯ-ಶಿವಶ್ರೀ ಅದ್ಧೂರಿ ರಿಸೆಪ್ಶನ್; ಯಾರೆಲ್ಲಾ ಭಾಗಿ.. ಫೋಟೋಸ್​ ಇಲ್ಲಿವೆ!
Advertisment
  • ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
  • ಸಂಸದ ತೇಜಸ್ವಿ ಸೂರ್ಯ, ಶಿವಶ್ರೀ ಸ್ಕಂದ ಪ್ರಸಾದ್ ಅದ್ಧೂರಿ ಆರತಕ್ಷತೆ
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನಡೆದ ರಿಸೆಪ್ಶನ್

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದ ಪ್ರಸಾದ್ ಅವರ ಆರತಕ್ಷತೆ ವಿಜೃಂಭಣೆಯಿಂದ ನಡೆದಿದೆ.

publive-image

ಈ ಆರತಕ್ಷತೆಗೆ ಗಣ್ಯಾತಿಗಣ್ಯರ ದಂಡೇ ಹರಿದು ಬಂದಿದ್ದು, ನವ ದಂಪತಿಗೆ ಶುಭ ಹಾರೈಸಿದೆ. ಸಿನಿಮಾ ತಾರೆಯರು, ಕಾಂಗ್ರೆಸ್, ಬಿಜೆಪಿ ಪಕ್ಷದ ಹಲವು ಮುಖಂಡರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.

publive-image

ಇನ್ನು, ಮಾರ್ಚ್ 6ರಂದು ಮದುವೆಯಾಗಿದ್ದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ದಂಪತಿ ಆರತಕ್ಷತೆ ಕಾರ್ಯಕ್ರಮ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷದ ನಾಯಕರು, ಸಿನಿಮಾ ತಾರೆಯರು ಭಾಗವಹಿಸಿ ನವದಂಪತಿಗಳಿಗೆ ಶುಭಹಾರೈಸಿದರು.

publive-image

ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರಿಗೂ ಆಹ್ವಾನ ನೀಡಲಾಗಿದ್ದು, ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ರಾಧಿಕಾ ಪಂಡಿತ್​ಗಾಗಿ ರೊಮ್ಯಾಂಟಿಕ್‌ ಹಾಡು ಹಾಡಿದ ರಾಕಿಂಗ್​ ಸ್ಟಾರ್​ ಯಶ್​; ವಿಡಿಯೋ ವೈರಲ್‌!

publive-image

ಈ ವೇಳೆ ತೇಜಸ್ವಿ ಸೂರ್ಯ ಅವರು ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಮಡದಿಯನ್ನು ಸಿದ್ದರಾಮಯ್ಯ ಅವರುಗೆ ಪರಿಚಯ ಮಾಡಿಕೊಟ್ಟಿದ್ದಾರೆ.

publive-image

ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರಿಗೂ ಆಹ್ವಾನ ನೀಡಲಾಗಿತ್ತು. ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

publive-image

ಈ ವೇಳೆ ತೇಜಸ್ವಿ ಸೂರ್ಯ ಅವರು ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಇನ್ನು ಮಡದಿಗೆ ಸಿದ್ದರಾಮಯ್ಯನವರನ್ನು ಪರಿಚಯ ಮಾಡಿಕೊಟ್ಟರು.

publive-image

ಸಿಎಂ ಸಿದ್ದರಾಮಯ್ಯನವರ ಜತೆ ಸಚಿವ ಜಮೀರ್ ಅಹಮ್ಮದ್ ಖಾನ್ ಸಹ ಆಗಮಿಸಿದ್ದರು. ರಾಜಕೀಯ ಬದ್ಧ ವೈರಿಯಾಗಿರುವ ತೇಜಸ್ವಿ ಸೂರ್ಯ ಅವರಿಗೆ ಹೂ ಗುಚ್ಛವನ್ನು ನೀಡಿ ಮದುವೆಗೆ ಶುಭಾಶಯ ತಿಳಿಸಿದರು. ಈ ವೇಳೆ ಪರಸ್ಪರ ಅಪ್ಪಿಕೊಂಡು ಎಲ್ಲರ ಗಮನ ಸೆಳೆದರು.

publive-image

ಇನ್ನೂ, ಸಿಎಂ ಸಿದ್ದರಾಮಯ್ಯನವರು ಬರುವ ಮೊದಲೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಆಗಮಿಸಿ ತೇಜಸ್ವಿ ಸೂರ್ಯ ದಂಪತಿಗೆ ಶುಭ ಹಾರೈಸಿದರು. ವಿಶೇಷ ಎಂದರೆ ಮಾಜಿ ಪ್ರಧಾನಿ ಮತ್ತು ಜನತಾ ದಳದ ಹಿರಿಯ ನಾಯಕ ಎಚ್‌ಡಿ ದೇವೇಗೌಡರು ಹಾಗೂ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ದರು.

publive-image

ಅಷ್ಟೇ ಅಲ್ಲದೆ ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ, ಆರ್ ಅಶೋಕ್, ಗೋಪಾಲಯ್ಯ, ಅಣ್ಣಾ ಮಲೈ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ರಿಸೆಪ್ಷನ್‌ಗೆ ಆಗಮಿಸಿ ಶುಭ ಹಾರೈಸಿದರು. ಸಿನಿಮಾ ನಟ ರಮೇಶ್ ಅರವಿಂದ್, ನಟ ಯಶ್​ ಕೂಡಾ ಮದುವೆಗೆ ಆಗಮಿಸಿ ದಂಪತಿಯನ್ನು ಹರಸಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment